ಕರ್ನಾಟಕ

karnataka

ETV Bharat / entertainment

ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್ - ಅದಿತಿ ರಾವ್ ಹೈದರಿ ಜೋಡಿ ; ವರದಿ - Aditi Siddharth Marriage - ADITI SIDDHARTH MARRIAGE

ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಇಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ.

Siddharth Aditi Marriage
ದೇವಸ್ಥಾನದಲ್ಲಿ ಹಸೆಮಣೆ ಏರಿದ ಸಿದ್ಧಾರ್ಥ್ - ಅದಿತಿ ರಾವ್ ಹೈದರಿ

By ETV Bharat Karnataka Team

Published : Mar 27, 2024, 1:23 PM IST

Updated : Mar 27, 2024, 3:19 PM IST

ಭಾರತೀಯ ಚಿತ್ರರಂಗದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಇಂದು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಈ ಕುರಿತು ಹಲವು ಸ್ಥಳೀಯ ಸುದ್ದಿ ಪೋರ್ಟಲ್​ಗಳು ವರದಿ ಮಾಡಿವೆ.

ಅದಿತಿ ಮತ್ತು ಸಿದ್ಧಾರ್ಥ್ ಕಳೆದ ಕೆಲ ಸಮಯದಿಂದ ಪ್ರೀತಿಯಲ್ಲಿದ್ದರು. ಮದುವೆಗೂ ಮುನ್ನ ಒಟ್ಟಿಗೆ ವಾಸಿಸುತ್ತಿದ್ದರು. ಅಂತಿಮವಾಗಿ, ಇಂದು ವೈವಾಹಿಕ ಜೀವನ ಆರಂಭಿಸಿದ್ದಾರೆ. ತೆರೆ ಹಂಚಿಕೊಂಡ ಮಹಾ ಸಮುದ್ರಂ (2021) ಚಿತ್ರದ ಚಿತ್ರೀಕರಣದ ವೇಳೆ ಜೋಡಿ ನಡುವೆ ಪ್ರೇಮಾಂಕುರವಾಗಿತ್ತು.

ಅದಿತಿ ರಾವ್ ಅವರ ಅಜ್ಜ ವನಪರ್ತಿ ಸಂಸ್ಥಾನದ ಅಂತಿಮ ಆಡಳಿತಗಾರರಾಗಿದ್ದರು. ಇಂದಿಗೂ ಅವರ ಕುಟುಂಬವು ಪ್ರಸಿದ್ಧ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತದೆ. ಹಾಗಾಗಿ ಅದಿತಿ ಈ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದರು. ಈ ದೇವಾಲಯ ಶತಮಾನಗಳಷ್ಟು ಹಳೆಯದಾಗಿದೆ. ಇದನ್ನು 18ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಸಿದ್ದಾರ್ಥ್ ಅವರು ತಮಿಳುನಾಡಿನವರಾಗಿರುವುದರಿಂದ ತಮಿಳುನಾಡಿನ ಪುರೋಹಿತರಿಂದ ವಿವಾಹದ ವಿಧಿವಿಧಾನಗಳು ನಡೆದಿವೆ ಎಂದು ವರದಿಯಾಗಿದೆ. ಆದರೆ, ಸಿದ್ಧಾರ್ಥ್ ಅಥವಾ ಅದಿತಿ ರಾವ್ ಹೈದರಿ ಇನ್ನೂ ಮದುವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಪ್ರೇಮಪಕ್ಷಿಗಳಿಂದ ಅಧಿಕೃತ ಮಾಹಿತಿ, ಫೋಟೋ-ವಿಡಿಯೋ ನಿರೀಕ್ಷಿಸಲಾಗಿದೆ.

ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ತಮ್ಮ ಸಂಬಂಧದ ಬಗ್ಗೆ ಹೆಚ್ಚೇನು ಹೇಳಿಕೊಂಡಿರಲಿಲ್ಲ. ಅದರಂತೆ ಮದುವೆ ಬಗ್ಗೆಯೂ ಜೋಡಿಯಿಂದ ಯಾವುದೇ ಸುಳಿವಿರಲಿಲ್ಲ. ಮದುವೆಯಾಗಿದ್ದರೂ ಇನ್ನೂ ಯಾವುದೇ ಪೋಸ್ಟ್ ಈ ಸೆಲೆಬ್ರಿಟಿ ಕಪಲ್​ ಇಂದ ಶೇರ್ ಆಗಿಲ್ಲ. ಮದುವೆ ನಂತರ ಜೋಡಿಯ ಮೊದಲ ಫೋಟೋ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು, ಕಾತರರಾಗಿದ್ದಾರೆ. ವರದಿಗಳ ಪ್ರಕಾರ, ದಂಪತಿ ಶೀಘ್ರದಲ್ಲೇ ತಮ್ಮ ವಿವಾಹವನ್ನು ಸಾರ್ವಜನಿಕವಾಗಿ ಘೋಷಿಸಲು ಯೋಜಿಸಿದ್ದಾರೆ ಎಂಬ ಮಾಹಿತಿಯೂ ಇದೆ. ಸದ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನವಜೋಡಿಗೆ ಶುಭ ಕೋರುತ್ತಿದ್ದಾರೆ.

ಇದನ್ನೂ ಓದಿ:ತಿರುಪತಿಯಲ್ಲಿ ರಾಮ್ ಚರಣ್ ಮಗಳ ಫೇಸ್ ರಿವೀಲ್: ಫೋಟೋ-ವಿಡಿಯೋ ವೈರಲ್ - Ram Charan Daughter

ಸಿನಿಮಾ ವಿಚಾರ ಗಮನಿಸುವುದಾದರೆ, ಅದಿತಿ 'ಗಾಂಧಿ ಟಾಕ್ಸ್‌'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೇತುಪತಿ ಮತ್ತು ಸಿದ್ಧಾರ್ಥ್ ಜಾದವ್ ಜೊತೆ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಸಿದ್ಧಾರ್ಥ್ ಕೊನೆಯದಾಗಿ 2023ರಲ್ಲಿ 'ಚಿತ್ತಾ' ಚಿತ್ರದಲ್ಲಿ ಕಾಣಿಸಿಕೊಂಡರು. ನಟನೆ ಜೊತೆಗೆ ಈ ಚಿತ್ರವನ್ನು ಸ್ವತಃ ಸಿದ್ಧಾರ್ಥ್ ಅವರೇ ನಿರ್ಮಿಸಿದ್ದಾರೆ. ಪ್ರಸ್ತುತ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಲಭ್ಯವಿದೆ.

ಇದನ್ನೂ ಓದಿ:ನಟ ರಾಮ್​ ಚರಣ್​​ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan

ಶಂಕರ್ ಅವರ ಇಂಡಿಯನ್ 2ನಲ್ಲಿ ಕಮಲ್ ಹಾಸನ್, ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಸಿದ್ಧಾರ್ಥ್ ಕಾಣಿಸಿಕೊಳ್ಳಲಿದ್ದಾರೆ. 2019ರಿಂದ ಈ ಚಿತ್ರ ನಿರ್ಮಾಣ ಹಂತದಲ್ಲಿದೆ. ಸದ್ಯ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಕೆಲವೇ ಹಾಡುಗಳ ರೆಕಾರ್ಡಿಂಗ್ ಬಾಕಿ ಉಳಿದಿದೆ.

Last Updated : Mar 27, 2024, 3:19 PM IST

ABOUT THE AUTHOR

...view details