ಹೈದರಾಬಾದ್: ವಿಶ್ವ ರೇಡಿಯೋ ದಿನದ ಅಂಗವಾಗಿ ಪ್ರೇಮ್ ವಿಡಿಯೋ ಬಹು ನಿರೀಕ್ಷಿತ ಚಿತ್ರವಾದ 'ಹೇ ವತನ್ ಮೇರೆ ವತನ್' ಚಿತ್ರದ ಬಿಡುಗಡೆ ದಿನಾಂಕವನ್ನು ವಿಶೇಷ ಮೋಷನ್ ಪೋಸ್ಟರ್ ಮೂಲಕ ತಿಳಿಸಿದೆ. ರಹಸ್ಯ ರೇಡಿಯೋ ಮೂಲಕ ಬ್ರಿಟಿಷ್ ರಾಜ್ ವಿರುದ್ಧ ದೇಶವನ್ನು ಒಗ್ಗೂಡಿಸಲು ಉಷಾ ಧ್ವನಿ ಎತ್ತಿದ್ದಾರೆ ಎಂದು ಈ ವಿಡಿಯೋದಲ್ಲಿ ಕೇಳಬಹುದಾಗಿದೆ. ಸಾರಾ ಆಲಿ ಖಾನ್ ನಟನೆಯ ಏ ವತನ್ ಮೇರೆ ವತನ್ ಚಿತ್ರವು ಪ್ರೈಮ್ ವಿಡಿಯೋದಲ್ಲಿ ಇದೇ ಮಾರ್ಚ್ 21ರಂದು ಪ್ರಸಾರವಾಗಲಿದೆ ಎಂದು ತಂಡ ತಿಳಿಸಿದೆ. ಐತಿಹಾಸಿಕ ಥ್ರಿಲ್ಲರ್ ಡ್ರಾಮಾ ಕಥೆಯನ್ನು ಈ ಚಿತ್ರ ಒಗೊಂಡಿದೆ. ಚಿತ್ರವನ್ನು ಕಣ್ಣನ್ ಐಯ್ಯರ್ ನಿರ್ದೇಶಿಸಿದ್ದಾರೆ.
'ಏ ವತನ್ ಮೇರೆ ವತನ್' ಸಿನಿಮಾವನ್ನು ಧರ್ಮಾಟಿಕ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿದ್ದು, ಇದಕ್ಕೆ ಕರಣ್ ಜೋಹರ್,ಅಪೂರ್ವ ಮೆಹ್ತಾ ಮತ್ತು ಸೊಮೆನ್ ಮಿಶ್ರಾ ಬಂಡವಾಳ ಹೂಡಿದ್ದಾರೆ. ಚಿತ್ರ ನಿರ್ಮಾಪಕರ ಪ್ರಕಾರ, ಚಿತ್ರವು 1942ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ನಡೆಯುವ ಕಥೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಅವರಿಂದ ಪ್ರೇರಣೆಗೊಂಡ ಕಾಲ್ಪನಿಕ ಕಥೆ ಇದಾಗಿದೆ. ಪ್ರೈಮ್ ವಿಡಿಯೋದಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾದ ಮೂಲಗಳ ಪ್ರಧಾನ ವಿಡಿಯೋದ ನಿರ್ದೇಶಕ ಅಪರ್ಣಾ ಪುರೋಹಿತ್ ಮಾತನಾಡಿ, ಈ ಚಿತ್ರವು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಮತ್ತು ಇದಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ವೀರರಿಗೆ ಸಲ್ಲಿಸುವ ನಮನವಾಗಿದೆ ಎಂದರು.
ಚಿತ್ರಕಥೆಯೂ ನಮ್ಮಲ್ಲಿ ಆಳವಾಗಿ ಪ್ರಭಾವ ಬೀರಿತು. ಈ ಹಿನ್ನೆಲೆ ನಾವು ಅದನ್ನು ಜೀವಂತಗೊಳಿಸಲು ಮುಂದಾದೆವು. 'ಏ ವತನ್ ಮೇರೆ ವತನ್' ಚಿತ್ರದ ಮೂಲ ಧರ್ಮಾಟಿಕ್ ಎಂಟರ್ಟೈನ್ಮೆಂಟ್ ಜೊತೆಗೆ ದೀರ್ಘ ಸಹಭಾಗಿತ್ವವನ್ನು ಮತ್ತಷ್ಟು ಬಲವಾಗಿಸಿದೆ. ಈ ಕಥೆಯು ಕೇವಲ ಮನೋರಂಜನೆ ನೀಡುವುದಿಲ್ಲ. ಇದು ನಿಮ್ಮನ್ನು ಕಾಡುವುದರ ಜೊತೆಗೆ ಭಾವನಾತ್ಮಕವಾಗಿಸುತ್ತದೆ ಎಂದು ಅಪರ್ಣಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.