ಇಂದು 'ಕೆಜಿಎಫ್ ಅಧೀರ'ನ ಹುಟ್ಟುಹಬ್ಬಕ್ಕೆ'ಕೆಡಿ' ಚಿತ್ರತಂಡ ಸ್ಪೆಷಲ್ ಉಡುಗೊರೆ ಕೊಟ್ಟಿದೆ. ಈ ಮೂಲಕ ಈ ಸಿನಿಮಾದಲ್ಲಿ ಖಳನಾಯಕ ಸಂಜಯ್ ದತ್ ಪಾತ್ರವನ್ನು ನಿರ್ದೇಶಕ ಪ್ರೇಮ್ ಪರಿಚಯಿಸಿದ್ದಾರೆ.
ಹೌದು, ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಸಿನಿಮಾ 'ಕೆಡಿ'ಯಲ್ಲಿ ಸಂಜಯ್ ದತ್ ಪಾತ್ರವೇನು ಎಂಬ ಕುತೂಹಲ ಇತ್ತು. ಇಂದು ದತ್ ಹುಟ್ಟುಹಬ್ಬಕ್ಕೆ ಪ್ರೇಮ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಪಾತ್ರ ಧಕ್ ದೇವಾ ಎಂಬುದು ಈ ಮೂಲಕ ರಿವೀಲ್ ಆಗಿದೆ. ಪೋಸ್ಟರ್ನಲ್ಲಿ ಸಂಜಯ್ ದತ್ ಬಂದೂಕು ಹಿಡಿದು ರೆಟ್ರೋ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದು ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.
ಜೋಗಿ ಪ್ರೇಮ್ ಸಿನಿಮಾಗಳಂದರೆ ಸೌಂಡು ಇರುತ್ತೆ, ಜೊತೆಗೆ ಒಂದೊಳ್ಳೆ ಬ್ರ್ಯಾಂಡ್ ಕೂಡಾ ಇರುತ್ತೆ ಎಂಬುದು ಸಿನಿಮಾ ಪ್ರೇಮಿಗಳ ಮಾತು. ಇದೀಗ ಅವರು ದುಬಾರಿ ಸಂಭಾವನೆ ಕೊಟ್ಟು ಕೆಜಿಎಫ್ ಅಧೀರನ ಕರೆದುಕೊಂಡು ಬಂದು ಕೇಡಿ ಅಡ್ಡದಲ್ಲಿ ನಿಲ್ಲಿಸಿದ್ದಾರೆ. ಧ್ರುವ ಸರ್ಜಾ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ಪ್ರೇಮ್, 70ರ ದಶಕದ ಅಂಡರ್ ವರ್ಲ್ಡ್ ಕಥೆ ಹೇಳಲು ರೆಡಿಯಾಗಿದ್ದಾರೆ.