ಕರ್ನಾಟಕ

karnataka

ETV Bharat / entertainment

ಗಾಯಕಿ, ಡಬ್ಬಿಂಗ್​, ನಟನೆ; ಪ್ರೇಕ್ಷಕರ ಸೆಳೆದ ಸಮೀರಾ ಭಾರಧ್ವಾಜ್​ ಬಹುಮುಖ ಪ್ರತಿಭೆ - SINGER SAMEERA BHARADWAJ

ಗಾಯಕಿ, ಡಬ್ಬಿಂಗ್​ ಕಲಾವಿದೆ, ನಟಿ.. ಅಲ್ಲದೆ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಸಮೀರಾ ಇನ್ಸ್​ಟಾಗ್ರಾಂ ಮೂಲಕ ಸಾಮಾನ್ಯ ಜನರ ನಾಡಿಮಿಡಿತವನ್ನು ಅರಿತು ಅವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

sameera-bharadwaj-blending-melody-laughter-and-stardom
ಸಮೀರಾ ಭಾರಧ್ವಾಜ್ (ಈಟಿವಿ ಭಾರತ್​)

By ETV Bharat Karnataka Team

Published : 4 hours ago

ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳ ಬಳಕೆ ಮಾಡಿಕೊಂಡು ಜನಪ್ರಿಯತೆ ಹೊಂದುವ ಪ್ರತಿಭೆಗಳು ಸದಾ ಕಾಲ ಜನರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ ಎಂಬುದಕ್ಕೆ ಉದಾಹರಣೆ ಸಮೀರಾ ಭಾರಧ್ವಾಜ್​. ಇವರು ಗಾಯಕಿ, ನಟಿ ಹಾಗೂ ಡಬ್ಬಿಂಗ್​ ಕಲಾವಿದೆ. ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಸಮೀರಾ ಇನ್ಸ್​ಟಾಗ್ರಾಂ ಮೂಲಕ ಸಾಮಾನ್ಯ ಜನರ ನಾಡಿಮಿಡಿತವನ್ನು ಅರಿತು ಅವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಮಗಳಿಗೆ ವಿಚಿತ್ರ ರೀತಿಯ ಪ್ರಶ್ನೆ ಕೇಳುವ ತಾಯಿಯಾಗಿ, ವಾಟ್ಸಾಪ್​ ಗ್ರೂಪ್​​ನಲ್ಲಿ ಕುಟುಂಬ ಸದಸ್ಯರನ್ನು ಒಟ್ಟುಗೂಡಿಸುವ ಪ್ರಯತ್ನ, ಆಧುನಿಕ ತಾಯಂದಿರ ತಳಮಳದಂತಹ ಜನಕ್ಕೆ ಹತ್ತಿರವಾಗುವ ಕಲ್ಪನೆಗಳೊಂದಿಗೆ ಇನ್ಸ್​ಟಾಗ್ರಾಂ ಮೂಲಕ ಹೊರ ತರುವ ಸಮೀರಾ ಸಿಕ್ಕಾಪಟ್ಟೆ ಸೆನ್ಸೇಷನ್​ ಕೂಡ ಸೃಷ್ಟಿಸಿದ್ದಾರೆ. ಈ ಎಲ್ಲಾ ಕುರಿತು ಈಟಿವಿ ಭಾರತ್ ಜೊತೆ ತಮ್ಮ ಪ್ರಯಾಣದ ಬಗ್ಗೆ ಅವರು ಹಂಚಿಕೊಂಡಿದ್ದಾರೆ.

ಆರಂಭದಲ್ಲೇ ಪ್ರತಿಭೆ ಪತ್ತೆ:ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಇದನ್ನು ಮುಕ್ತವಾಗಿ ಪ್ರದರ್ಶಿಸುವುದು ಅಗತ್ಯ. ಇದಕ್ಕೆ ನಮ್ಮ ಪ್ರಯತ್ನಗಳೇ ಅವಕಾಶವನ್ನು ಸೃಷ್ಟಿಸುತ್ತವೆ ಎನ್ನುತ್ತಾರೆ ಸಮೀರಾ. ಹೈದಾರಾಬಾದ್​ನಲ್ಲಿ 8ನೇ ತರಗತಿಯವರೆಗೆ ಓದಿದ ಸಮೀರಾ ತಂದೆ ಉದ್ಯೋಗ ನಿಮಿತ್ತ ಚೆನ್ನೈಗೆ ವಾಸ ಸ್ಥಳ ಬದಲಾಯಿಸಿದರು. ಅಜ್ಜಿ ಮತ್ತು ತಾಯಿಯ ಸಂಗೀತದಿಂದ ಪ್ರೇರಣೆಯಾಗಿ, ಅದು ಕೂಡ ಒಲಿಯಿತು. ಇದಕ್ಕಾಗಿ ಔಪಚಾರಿಕವಾಗಿ ಕರ್ನಾಟಿಕ್​ ಮತ್ತು ಹಿಂದೂಸ್ತಾನಿ​ ಸಂಗೀತವನ್ನು ಬಾಲ್ಯದಲ್ಲೇ ಕಲಿತರು.

ಇದರ ಹೊರತಾಗಿ ನಾಟಕ, ಮಿಮಿಕ್ರಿ ಮತ್ತು ಡ್ಯಾನ್ಸ್​ಗಳಲ್ಲಿ ಕೂಡ ಅವರು ಪ್ರತಿಭೆ ತೋರಿಸಿದ್ದು, ಅನೇಕ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಾರೆ. ನಾಲ್ಕನೇ ತರಗತಿಯಲ್ಲಿದ್ದಾಗಲೇ ಟಿವಿ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡರು. 14ನೇ ವಯಸ್ಸಿಗೆ ಸಣ್ಣ ಸಿನಿಮಾವೊಂದರಲ್ಲಿ ಅವರು ಮೊದಲ ಹಾಡನ್ನು ಹಾಡಿದರು. ಇದಾದ ಬಳಿಕ, ಚಿತ್ರಗಳಲ್ಲಿ ಡಬ್ಬಿಂಗ್​ ಅವಕಾಶ ಒದಗಿಬಂತು. ಮನೋರಂಜನಾ ಉದ್ಯಮದಲ್ಲಿ ಮಿಂಚಲು ಪಾಡುತಾ ತಿಯಗ ಮತ್ತು ಸೂಪರ್​ ಸಿಂಗರ್​ ಸೀಸನ್​ 9 ಕಾರ್ಯಕ್ರಮ ಅಡಿಗಲ್ಲಾಯಿತು.

ಕುಟುಂಬದೊಂದಿಗೆ ಸಮೀರಾ ಭಾರಧ್ವಾಜ್​ (ETV Bharat)

ವೃತ್ತಿ ಬದಲಾವಣೆ: ಬಿಕಾಂ​ ವಿದ್ಯಾಭ್ಯಾಸ ಪಡೆದು ಕಂಪನಿ ಸೆಕ್ರೆಟರಿ ಕೋರ್ಸ್​ ಮಾಡಿದ ಸಮೀರಾಗೆ ಕಾರ್ಪೊರೇಟ್​​ ಕೆಲಸ ತನಗೆ ಸರಿ ಹೊಂದಲ್ಲ ಎಂದು ಬಲು ಬೇಗ ಅನಿಸಿತು. ಗಂಡ ಆದಿತ್ಯ ಮತ್ತು ಅತ್ತೆ-ಮಾವಂದಿರ ಉತ್ತೇಜನದಿಂದ ಸಂಗೀತದತ್ತ ದೃಷ್ಟಿ ನೆಟ್ಟರು. ಸಂಗೀತ ಸಂಯೋಜಕ ಥಮನ್​ ಅವರಿಗೆ ಸಂಗೀತದಲ್ಲಿ ಹೊಸ ಅವಕಾಶ ನೀಡಲು ಮಾರ್ಗ ತೋರಿಸಿದರು. ಶಿವಂ ಚಿತ್ರದಲ್ಲಿ ಐ ಲವ್​ ಯು ಹಾಡಿಗೆ ದನಿಯಾದ ಸಮೀರಾಗೆ ಹೆಸರು ತಂದು ಕೊಟ್ಟದ್ದು ಬ್ರೂಸ್​ ಲೀಯ ಟೈಟಲ್​ ಟ್ರಾಕ್​. ನನ್ನ ಮೊದಲ ಹಾಡು ಬಿಡುಗಡೆಯಾದಾಗ ನಾನು ಎಷ್ಟು ಸಂತೋಷವಾಗಿದ್ದೆ ಎಂದು ಹೇಳಲು ಸಾಧ್ಯವಿಲ್ಲ. ಥಿಯೇಟರ್​ನಲ್ಲಿ ನನ್ನ ಗಾಯನ ಆಲಿಸಿ ನನಗೆ ಅನಿಸಿದ್ದ ಹೆಮ್ಮೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಗಾಯಕಿ ಸಮೀರಾ.

ಅತ್ಯುತ್ತಮ ಪ್ರದರ್ಶಕಿ: ಸಮೀರಾ ತೆಲುಗು ಮತ್ತು ತಮಿಳಿನಲ್ಲಿ 50ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ಮೆಲೋಡಿ, ಹೈ ಎನರ್ಜಿ ಮಾಸ್​, ಭಾವನಾತ್ಮಕ ಹಾಡು ಇವೆ. ತೆಲುಗಿನ 'ಡಿಕ್ಟೆಟರ್'​ ಚಿತ್ರದ 'ಗಣ ಗಣ' ಆಂಧ್ರ ತೆಲಂಗಾಣ, 'ಸರ್ರೈನೋಡು' ಚಿತ್ರದ 'ಅಬ್ಬಚ್ಚ ಅಬ್ಬಚ್ಚ' ಮತ್ತು 'ಅಮಿಗೊಸ್'​ನ ಚಿತ್ರದ ಹಾಡು ಜನಪ್ರಿಯತೆ ನೀಡಿವೆ. ಗಾಯನದ ಜೊತೆಗೆ 'ಡಬಲ್​ ಇಸ್ಮಾರ್ಟ್'​ ಚಿತ್ರದಲ್ಲಿ ಕಾವ್ಯ ತಪಾರ್​, 'ಸತ್ಯಂ ಸುದರಂ'ನಲ್ಲಿ ದೇವದರ್ಶಿನಿ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೇ, ಡೆವಿಲ್​ ಚಿತ್ರದ 'ದೊರಮೆ ಥೈರಮೈ' ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಗಂಭೀರತೆಯಲ್ಲಿ ಹಾಸ್ಯ: ತಮ್ಮ ತಮಾಷೆ ಸ್ವಭಾವದಿಂದ ಪರಿಚಿತರಾಗಿರುವ ಸಮೀರಾ, ಕೋವಿಡ್​ 19 ಸಾಂಕ್ರಾಮಿಕತೆ ವೇಳೆ ತಮ್ಮಲ್ಲಿನ ಮಿಮಿಕ್ರಿ ಮತ್ತು ಹಾಸ್ಯಕ್ಕೆ ವೇದಿಕೆ ಒದಗಿಸಿಕೊಂಡರು. ಬದುಕು ಗಂಭೀರವಾಗುತ್ತಿದೆ ಎಂದಾಗ ಇನ್ಸ್ಟಾಗ್ರಾಂ ಮೂಲಕ ನೋಡುಗರಲ್ಲಿ ನಗೆ ಉಕ್ಕಿಸಿದರು. ಬಹುತೇಕ ಅವರ ರೀಲ್ಸ್​ಗಳ ಮೂಲಕ ನೈಸರ್ಗಿಕವಾಗಿ ಜನರನ್ನು ತಮ್ಮ ವಿಷಯಗಳ ಮೂಲಕ ಸೆಳೆಯುತ್ತಾರೆ.

ಸಂಗೀತದಿಂದ ನಟನೆವರೆಗೆ ಸಮೀರಾ ಬಹುಮುಖ ಪ್ರತಿಭೆಯಾಗಿ ಬೆಳಗುತ್ತಿದ್ದಾರೆ. ನಾನು ಏನೇ ಮಾಡಿದರೂ, ಪ್ರತಿಯೊಬ್ಬರೂ ಮನಸ್ಸಿನಲ್ಲಿ ಸದಾ ಕಾಲ ನಾನಿರಬೇಕು ಎಂದು ಬಯಸುತ್ತೇನೆ ಎನ್ನುತ್ತಾರೆ ಸಮೀರಾ.

ಇದನ್ನೂ ಓದಿ: ಅತ್ಯದ್ಭುತ ನಿರ್ದೇಶನ ಮಾತ್ರವಲ್ಲ, ನೃತ್ಯಕ್ಕೂ ಸೈ ರಾಜಮೌಳಿ : ಜಕ್ಕಣ್ಣನ ಜಬರ್​ದಸ್ತ್​ ಡ್ಯಾನ್ಸ್​ ನೋಡಿ

ABOUT THE AUTHOR

...view details