ಕರ್ನಾಟಕ

karnataka

ETV Bharat / entertainment

ಸೈಫ್ ಅಲಿ ಖಾನ್ ಇರಿತ ಪ್ರಕರಣ​: ದಾಳಿಕೋರನ ಕೃತ್ಯದ ಬಗ್ಗೆ ಕರೀನಾ ಹೇಳಿದ್ದಿಷ್ಟು - KAREENA KAPOOR

ಮುಂಬೈನ ತಮ್ಮ ನಿವಾಸದಲ್ಲಿ ನಡೆದ ಪತಿ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೀನಾ ಕಪೂರ್ ಖಾನ್ ಪೊಲೀಸರಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

Saif Ali Khan, Kareena Kapoor
ಸೈಫ್ ಅಲಿ ಖಾನ್, ಕರೀನಾ ಕಪೂರ್ (Photo: IANS)

By ETV Bharat Entertainment Team

Published : Jan 18, 2025, 1:42 PM IST

ಮುಂಬೈ (ಮಹಾರಾಷ್ಟ್ರ):ಬಾಲಿವುಡ್​​ ತಾರಾ ದಂಪತಿ ಸೈಫ್​ ಕರೀನಾ ನಿವಾಸದಲ್ಲಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣ ಚಿತ್ರರಂಗ ಮಾತ್ರವಲ್ಲದೇ ಪ್ರೇಕ್ಷಕ ಬಳಗವೂ ಚೆಂತೆಗೀಡಾಗುವಂತೆ ಮಾಡಿದೆ. ಹಿಂಸಾತ್ಮಕ ದಾಳಿ ಬಗ್ಗೆ ನಟಿ ಕರೀನಾ ಕಪೂರ್​ ಖಾನ್​​ ಪೊಲೀಸರಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಘಟನೆಯಲ್ಲಿ ನಟಿಯ ಪತಿ, ನಟ ಸೈಫ್ ಅಲಿ ಖಾನ್ ಮೇಲೆ ಹಲವು ಬಾರಿ ಚಾಕು ಇರಿತವಾಗಿದೆ. ಜನವರಿ 16ರ ಬೆಳಗ್ಗೆ (15ರ ಮಧ್ಯರಾತ್ರಿ) ಈ ಘಟನೆ ನಡೆದಿದ್ದು, ಸುರಕ್ಷತೆ ಬಗ್ಗೆ ಎಲ್ಲೆಡೆ ಕಳವಳ ವ್ಯಕ್ತವಾಗಿದೆ.

'ಅವನು ಬಹಳ ಅಗ್ರೆಸಿವ್​​ ಆಗಿದ್ದ': ಕರೀನಾ, ತಮ್ಮ ಹೇಳಿಕೆಯಲ್ಲಿ ದಾಳಿಕೋರ ಬಹಳ ಅಗ್ರೆಸಿವ್​​ (ಆಕ್ರಮಣಕಾರಿ) ಆಗಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮನೆಯೊಳಗೆ ನುಗ್ಗಿದ ಆ ವ್ಯಕ್ತಿ ಬಹಳ ಆಕ್ರಮಣಕಾರಿಯಾಗಿದ್ದನಾದರೂ, ಆಭರಣಗಳು ಸೇರಿದಂತೆ ತಮ್ಮ ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾಗಿಲ್ಲ ಎಂದು ತಿಳಿಸಿದ್ದಾರೆ.

ಕಳ್ಳತನ ಮಾಡುವ ಉದ್ದೇಶ ಹೊಂದಿರುವಂತೆ ತೋರಲಿಲ್ಲ...ಬಾಂದ್ರಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಆ ವ್ಯಕ್ತಿ ಸೈಫ್ ಮೇಲೆ ನಿರಂತರವಾಗಿ ದಾಳಿ ಮಾಡಿದ್ದಾನೆಂದು ಕರೀನಾ ತಿಳಿಸಿದ್ದಾರೆ. ಆದ್ರೆ ಆತ ತಮ್ಮ ಮನೆಯಿಂದ ಕಳ್ಳತನ ಮಾಡುವ ಉದ್ದೇಶ ಹೊಂದಿರುವಂತೆ ತೋರಲಿಲ್ಲ ಎಂದು ತಿಳಿಸಿದ್ದಾರೆ. ಸೈಫ್ ತಮ್ಮ ಪುಟ್ಟ ಮಗ ಜೆಹ್ ನನ್ನು ರಕ್ಷಿಸಲು ಮುಂದಾದ ಸಂದರ್ಭ ಗಲಾಟೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ದಾಳಿಕೋರ ಜೆಹ್ ಬಳಿ ಬರದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ಸೈಫ್​​ ಬಹಳ ಧೈರ್ಯ ಪ್ರದರ್ಶಿಸಿದ್ದಾರೆ. ಪರಿಣಾಮ, ಅವರ ಮೈ ಮೇಲೆ ಆರು ಬಾರಿ ಚಾಕುವಿನಿಂದ ಇರಿತಗಳಾಗಿವೆ. ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಸೈಫ್​ ಆರೋಗ್ಯ ಸುಧಾರಿಸಿದೆ.

ದಾಳಿ ಬಳಿಕ ಸಹೋದರಿ ಮನೆಗೆ... ದಾಳಿ ನಂತರ ತಮ್ಮ ಸಹೋದರಿ ಕರೀಷ್ಮಾ ಕಪೂರ್ ಅವರ ಮನೆಗೆ ಹೋದೆ ಎಂದು ಕರೀನಾ ಪೊಲೀಸರಲ್ಲಿ ತಿಳಿಸಿದ್ದಾರೆ. "ನನಗೆ ಬಹಳ ಭಯವಾಗಿತ್ತು. ಹಾಗಾಗಿ, ಕರೀಷ್ಮಾ ನನ್ನನ್ನು ಅವರ ಮನೆಗೆ ಕರೆದೊಯ್ದರು" ಎಂದು ಆಘಾತಕಾರಿ ಘಟನೆ ಬಗ್ಗೆ ಕರೀನಾ ಪೊಲೀಸರ ಬಳಿ ವಿವರಿಸಿದ್ದಾರೆ.

ದಾಳಿಕೋರನ ಪತ್ತೆಗೆ 30ಕ್ಕೂ ಹೆಚ್ಚು ತಂಡಗಳ ರಚನೆ: ಬಾಲಿವುಡ್​ ನಟನ ಮೇಲೆ ದಾಳಿ ನಡೆಸಿದವನ ಪತ್ತೆಗೆ ಪೊಲೀಸರು 30ಕ್ಕೂ ಹೆಚ್ಚು ತಂಡಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ನಟನ ಮನೆಯೊಳಗೆ ನುಗ್ಗಿದವ ಮನೆಯ ಸಹಾಯಕಿಯಿಂದ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದನು.

ಶೀಘ್ರದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ ಸೈಫ್ ಅಲಿ ಖಾನ್: ಗಂಭೀರ ಇರಿತಕ್ಕೊಳಗಾದ ನಟನ ದೇಹದಿಂದ 2.5 ಇಂಚಿನ ಚಾಕು ಹೊರ ತೆಗೆಯಲಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಜನವರಿ 21ರೊಳಗೆ ಅವರನ್ನು ಡಿಸ್ಚಾರ್ಜ್ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ:'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು

"ನಟನ ಆರೋಗ್ಯದಲ್ಲಿ ಪ್ರೊಗ್ರೆಸ್ ಇದೆ. ನಮ್ಮ ನಿರೀಕ್ಷೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ. ನಾವು ಅವರಿಗೆ ಬೆಡ್ ರೆಸ್ಟ್ ಸೂಚಿಸಿದ್ದೇವೆ. ಅವರು ಕಂಫರ್ಟಬಲ್​ ಆಗಿದ್ದರೆ, ಎರಡ್ಮೂರು ದಿನಗಳಲ್ಲಿ ನಾವು ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ" ಎಂದು ಲೀಲಾವತಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ.ನಿತಿನ್ ಡಾಂಗೆ ಶುಕ್ರವಾರಂದು ತಿಳಿಸಿದರು.

ಇದನ್ನೂ ಓದಿ:ಸೈಫ್​ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್​ ತಂಡಗಳ ರಚನೆ: ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ಮನೆಯೊಳಗೆ ನುಗ್ಗಿದವ ಕಳ್ಳತನ ಮಾಡುವ ಉದ್ದೇಶ ಹೊಂದಿರುವಂತೆ ತೋರಲಿಲ್ಲ ಎಂದು ಕರೀನಾ ಹೇಳಿದ್ದರೂ, ಹಿಂದಿನ ವರದಿ, ಶಂಕೆ, ಅಂದಾಜುಗಳು ಈ ಘಟನೆ ಕಳ್ಳತನಕ್ಕೆ ಯತ್ನಿಸಿದ ಸಂದರ್ಭ ನಡೆದಿದೆ ಎಂದು ಸುಳಿವು ನೀಡಿವೆ. ದಾಳಿಕೋರ ಇನ್ನೂ ಪತ್ತೆಯಾಗಿಲ್ಲ, ಅವನ ಬಂಧನ ಬಳಿಕವೇ ಈ ಭೀಕರ ದಾಳಿಯ ಉದ್ದೇಶ ಸ್ಪಷ್ಟವಾಗಲಿದೆ. (With agency inputs)

ABOUT THE AUTHOR

...view details