ಕನ್ನಡ ಚಿತ್ರರಂಗದ ಎವರ್ಗ್ರೀನ್ ಬ್ಯೂಟಿ ರಾಧಿಕಾ ಪಂಡಿತ್. ಒಂದು ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಇವರು ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ನಟಿಯ ಸ್ಟಾರ್ಡಮ್ ಏನೂ ಕಡಿಮೆ ಆಗಿಲ್ಲ. ಅವರ ಕ್ರೇಜ್ ಈಗಲೂ ಅಷ್ಟೇ ಇದೆ. ಇದೀಗ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ರಾಧಿಕಾ ಪಂಡಿತ್ ಆರೇಳು ವರ್ಷಗಳಿಂದ ಸಂಸಾರ, ಮಕ್ಕಳು ಅಂತಾ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ದೂರವುಳಿದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಆಗಾಗ್ಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಹೊಸ ಹೊಸ ಪೋಸ್ಟ್ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮಗ ಯಥರ್ವ್ ಐದನೇ ಹುಟ್ಟುಹಬ್ಬದ ಸಲುವಾಗಿ ಕ್ಯೂಟ್ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಕಿಂಗ್ ಫ್ಯಾಮಿಲಿಯ ಹಲವು ಸುಂದರ ಕ್ಷಣಗಳಿವೆ.
ದಿ ಮೋಸ್ಟ್ ಅಮೇಜಿಂಗ್ ಬಾಯ್ ಆಗಿ ಬೆಳೆಯುವುದನ್ನು ನೋಡುತ್ತಿರುವುದಕ್ಕೆ ಐದು ವರ್ಷಗಳು. ನಮ್ಮ ಪುಟ್ಟ ಸನ್ಶೈನ್ಗೆ 5ನೇ ಹುಟ್ಟುಹಬ್ಬದ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.