ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಮೇಶ್ ಅರವಿಂದ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ವಯಸ್ಸು ಅರವತ್ತಾದ್ರೂ, ಇಪ್ಪತ್ತು - ಮೂವತ್ತರ ಹುರುಪು. ಚಿರಯೌವ್ವನ ಕಾಪಾಡಿಕೊಂಡಿರುವ ಕನ್ನಡದ ಖ್ಯಾತ ನಟ. ಸ್ಯಾಂಡಲ್ವುಡ್ನ ಫಿಟ್ಟೆಸ್ಟ್ ಆ್ಯಕ್ಷರ್ ಅಂದ್ರೂ ತಪ್ಪಾಗಲ್ಲ ನೋಡಿ.
ತ್ಯಾಗಮಯಿ ಪಾತ್ರಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ರಮೇಶ್ ಅರವಿಂದ್ ಅವರಿಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಸ್ಟಾರ್ ಹೀರೋ ಕೂಡಾ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಲುಕ್ ಮೂಲಕ ಟ್ರೀಟ್ ಕೂಡಾ ಕೊಟ್ಟಿದ್ದಾರೆ.
ಬಹುತೇಕ ಸೂಪರ್ ಸ್ಟಾರ್ಗಳೊಂದಿಗೆ ತೆರೆ ಹಂಚಿಕೊಂಡ ನಟ:ರಮೇಶ್ ಅರವಿಂದ್ ದಕ್ಷಿಣ ಚಿತ್ರರಂಗದ ಕಮಲ್ ಹಾಸನ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ರವಿಚಂದ್ರನ್ ಹೀಗೆ ಬಹುತೇಕ ಸೂಪರ್ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡಿರುವ ಖ್ಯಾತ ನಟ ಇವರು. ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ - ಹೀಗೆ ಹೇಳುತ್ತಾ ಹೋದ್ರೆ ಅವರೊಬ್ಬ ಕನ್ನಡದ ಬಹುಮುಖ ಪ್ರತಿಭೆ. ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಹೆಸರುವಾಸಿಯಾಗಿರೋ ಅವರು ಇಂದಿಗೂ ಕೂಡ ಬೇಡಿಕೆಯ ನಟ. ಬರ್ತ್ಡೇ ಬಾಯ್ ಸ್ಪೆಷಲ್ ಲುಕ್ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಟ್ಟಿದ್ದಾರೆ.
ಚಿರಯುವಕನಂತೆ ಕಂಗೊಳಿಸುವ ರಮೇಶ್:ಹೌದು, ರಮೇಶ್ ಅರವಿಂದ್ ಹುಟ್ಟುಹಬ್ಬದ ಅಂಗವಾಗಿ ರೆಟ್ರೋ ಲುಕ್ನಲ್ಲಿ ಕ್ಯಾಮರಾಗೆ ತರೇಹವಾರಿ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ವಿನ್ಯಾಸಗೊಳಿಸಿರುವ ಔಟ್ಫಿಟ್ನಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ. ಈ ನಟನಿಗೆ ವಯಸ್ಸು ಅರವತ್ತಂದ್ರೆ ನಂಬೋದು ಕಷ್ಟಾನೆ. 60ರಲ್ಲೂ 30ರ ಚಾರ್ಮ್ ಹೊಂದಿದ್ದು, ಹ್ಯಾಂಡ್ಸಂ ಲುಕ್ಗೆ ಫ್ಯಾನ್ ಫಿದಾ ಆಗಿದ್ದಾರೆ.