ಫ್ರಾನ್ಸ್ನಲ್ಲಿ ಶನಿವಾರ 'ಪ್ಯಾರಿಸ್ ಒಲಿಂಪಿಕ್ 2024' ಶುರುವಾಗಿದೆ. ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಲು ಟಾಲಿವುಡ್ನ ಮೆಗಾಸ್ಟಾರ್ ಚಿರಂಚೀವಿ ಕುಟುಂಬ ಸಾಗರೋತ್ತರ ಪ್ರದೇಶಕ್ಕೆ ತೆರಳಿದೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಫೋಟೋ ವಿಡಿಯೋಗಳನ್ನು ಶೇರ್ ಮಾಡೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ - ಉದ್ಯಮಿ ಉಪಾಸನಾ, ರಾಮ್ ಅವರ ತಂದೆ-ನಟ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರು ಒಲಂಪಿಕ್ ಕ್ರೀಡೆಗಳನ್ನು ವೀಕ್ಷಿಸುವ ಸಲುವಾಗಿ ಪ್ಯಾರಿಸ್ನಲ್ಲಿದ್ದಾರೆ. ಇವರಲ್ಲದೇ, ರಾಮ್ ಅವರ ಮುದ್ದಿನ ಶ್ವಾನ ರೈಮ್ ಕೂಡ ಎಂದಿನಂತೆ ಅವರೊಂದಿಗೆ ಕಾಣಿಸಿಕೊಂಡಿದೆ.
ಉಪಾಸನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ಸ್ಟಾರ್ ಪತಿಗೆ ಸಂಬಂಧಿಸಿದಂತೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅಪ್ಡೇಟ್ಸ್ ಕೊಡುತ್ತಲೇ ಇರುತ್ತಾರೆ. ಲೇಟೆಸ್ಟ್ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಆರ್ಆರ್ಆರ್ ಸ್ಟಾರ್ ರಾಮ್ಚರನ್ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಅವರ ಮುದ್ದಿನ ರೈಮ್ ಕೂಡ ಇದೆ. ಒಂದಿಷ್ಟು ಕಿರು ವಿಡಿಯೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋಗಳಲ್ಲಿ, ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ತನ್ನ ಮುದ್ದಿನ ರೈಮ್ ಅನ್ನು ಹಿಡಿದು ಪ್ಯಾರಿಸ್‌ನ ರಸ್ತೆಗಳಲ್ಲಿ ಪಿ.ವಿ ಸಿಂಧು ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಿಂಧು ರೈಮ್ ಜೊತೆ ಆಟವಾಡುವುದನ್ನು ಕಾಣಬಹುದು. ತಮ್ಮದೇ ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ಸಂಪಾದಿಸಿರುವ ರಾಮ್ ಮತ್ತು ಸಿಂಧು ಒಂದೊಳ್ಳೆ ಕ್ಷಣ ಕಳೆದಿದ್ದು, ಉಪಾಸನಾ ಹೆಚ್ಚಿನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.