ಹೈದರಾಬಾದ್:ಇತ್ತೀಚಿಗೆ ವಿವಾಹ ಬಂಧನಕ್ಕೆ ಒಳಗಾದ ಸ್ಟಾರ್ ದಂಪತಿಗಳಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಹೊಸ ಸಂಸತ್ ಭವನಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಮಂಗಳ ತಮ್ಮ ಸಂಪತ್ ಭವನದ ಫೋಟೋ ಹಂಚಿಕೊಂಡಿರುವ ಅವರು ಮರೆಯಲಾಗದ ಕ್ಷಣ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಸಂಸತ್ ಭವನಕ್ಕೆ ಭೇಟಿ ನೀಡಿ ಆ ಫೋಟೋವನ್ನು ಹಂಚಿಕೊಂಡಿರುವ ಜಾಕಿ, ದೆಹಲಿಯಲ್ಲಿನ ಹೊಸ ಸಂಸತ್ ಭವನದಲ್ಲಿ ಮರೆಯಲಾಗದ ಕ್ಷಣ. ಪ್ರಜಾಪ್ರಭುತ್ವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಸತ್ಯಮೇವ ಜಯತೆ ಜೈ ಹಿಂದ್ ಎಂದು ಬರೆದಿದ್ದಾರೆ. ಕಳೆದ ಮೇ ಅಲ್ಲಿ ಹೊಸದಾಗಿ ನಿರ್ಮಿತಗೊಂಡಿರುವ ಸಂಸತ್ ಭವನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು.
ಭಾರತದ ಹೊಸ ಸಂಸತ್ ಭವನ ತ್ರಿಕೋನಾಕೃತಿಯಲ್ಲಿರುವ ವಿಶಾಲ ವ್ಯಾಪ್ತಿಯ ಅದ್ಬುತ ವಿನ್ಯಾಸ ಮಾಡಲಾಗಿದೆ. ತ್ರಿಕೋನಾಕಾರದ ಕಟ್ಟಡದ ಮಧ್ಯೆ ಲ್ಯಾನ್ ಪ್ರದೇಶ ಒಳಗೊಂಡಿದೆ. ಲೋಕಸಭೆ, ರಾಜ್ಯಸಭೆ ಮತ್ತು ಸೆಂಟ್ರಲ್ ಲಾಂಜ್ ಅನ್ನು ಈ ಕಟ್ಟಡದಲ್ಲಿ ಕಾಣಬಹುದು. ಈ ಸಂಸತ್ ಭವನಕ್ಕೆ ರಾಜಸ್ಥಾನದ ಕೆಂಪು ಮತ್ತು ಬಿಳಿ ಮರಳುಗಲ್ಲು ಬಳಕೆ ಮಾಡಲಾಗಿದೆ. ಲೋಕಸಭೆಯ ಕೊಠಡಿಯೊಳಗೆ ಬಳಸಲಾದ ಕೇಸರಿಯಾ ಹಸಿರು ಕಲ್ಲು ಉದಯಪುರದಿಂದ ತರಿಸಲಾಗಿದೆ.