ಹೈದರಾಬಾದ್: ಕಳೆದ ತಿಂಗಳು ಗೋವಾದಲ್ಲಿ ಹಸಮಣೆ ಏರಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ನಟ-ನಿರ್ಮಾಪಕ ಜಾಕಿ ಭಗ್ನಾನಿ ಗುರುವಾರ ತಮ್ಮ ಒಂದು ತಿಂಗಳ ವಿವಾಹ ಸಂಭ್ರಮವನ್ನು ಆಚರಿಸಿದರು.
ಈ ವಿಶೇಷ ದಿನವನ್ನು ಗುರುತಿಸಲು ರಾಕುಲ್ ಪ್ರೀತ್ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಪತಿ ಜಾಕಿ ಜೊತೆಗಿರುವ ಫೋಟೋವನ್ನು ಹಂಡಿಕೊಂಡಿದ್ದಾರೆ. ಮದುವೆಯಾಗಿ ಒಂದು ತಿಂಗಳೂ ಪೂರೈಸಿರುವ ಸಂಭ್ರಮದ ಆಚರಣೆಯ ಸ್ನ್ಯಾಪ್ಶಾಟ್ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ಪತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸಂತೋಷದ ಕ್ಷದ ಸಾರವನ್ನು ಸೆರಹಿಡಿದಿರುವ ಫೋಟೋ ಹಂಚಿಕೊಂಡಿರುವ ನಟಿ, ಕ್ಯಾಪ್ಷನ್ನಲ್ಲಿ " ಮದುವೆಯಾಗಿ ಆಗಲೇ ಒಂದು ತಿಂಗಳು. ಸಮಯ ಸರಿಯುತ್ತಿದೆ ಮತ್ತು ಮುಂದೆ ಜೀವನವೂ ಇದೆ. ಚಂದ್ರನಿಗೆ ಹಾಗೂ ನನ್ನ ಹಿಂದಿರುವ ಶಕ್ತಿಗೆ ನನ್ನ ಪ್ರೀತಿ. ನಮ್ಮ ಜೀವನ ಖುಷಿಯಿಂದ ಕುಣಿಯುತ್ತಿದೆ. #onemonthanniversary @jackkybhagnani." ಎಂದು ಬರೆದುಕೊಂಡಿದ್ದಾರೆ.
ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ನಟ-ನಿರ್ಮಾಪಕ ಜಾಕಿ ಭಗ್ನಾನಿ ಫೆಬ್ರವರಿ 21ರಂದು ದಕ್ಷಿಣ ಗೋವಾದಲ್ಲಿ ಮದುವೆಯಾದರು. ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ನೆನಪಿನಲ್ಲಿರಬೇಕಾದ ದಿನವನ್ನು, ಕ್ಷಣವನ್ನು ಜೋಡಿ ಸಂಭ್ರಮಾಚರಿಸಿದೆ.