ಅಕ್ಟೋಬರ್ 10ರಂದು ತೆರೆಕಂಡ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರಯಾಣ ಹೊಂದಿದೆ. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಇಬ್ಬರು ಐಕಾನ್‌ಗಳಾದ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಬರೋಬ್ಬರಿ 30 ವರ್ಷಗಳ ಬಳಿಕ ತೆರೆಹಂಚಿಕೊಂಡ ತಮಿಳು ಆ್ಯಕ್ಷನ್ ಡ್ರಾಮಾ 'ವೆಟ್ಟೈಯನ್' ಗುರುವಾರ ತೆರೆಕಂಡು, ಬಹುತೇಕ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಟಿ.ಜೆ ಜ್ಞಾನವೆಲ್ ನಿರ್ದೇಶನದ ವೆಟ್ಟೈಯನ್ ಯಶಸ್ಸು ಈ ಚಿತ್ರದ ಕಲಾವಿದರಿಗೆ ಮಾತ್ರವಲ್ಲದೇ ರಾಷ್ಟ್ರದಾದ್ಯಂತದ ಸಿನಿಪ್ರಿಯರು ಮತ್ತು ಅಭಿಮಾನಿಗಳಿಗೆ ಮಹತ್ವದ, ಸಂಭ್ರಮಾಚರಣೆಯ ಕ್ಷಣವಾಗಿದೆ.
ವೆಟ್ಟೈಯನ್ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಅತ್ಯುತ್ತಮ ಆರಂಭ ಕಂಡಿದೆ. ವಾರದ ನಡುವೆ ತೆರೆ ಕಂಡರೂ ಕೂಡಾ ಸರಿಸುಮಾರು 64 ಕೋಟಿ ರೂ. ಕಲೆಕ್ಷನ್ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿತ್ರ ಸರಿ ಸುಮಾರು 30ಕ್ಕೂ ಕೋಟಿ ರೂಪಾಯಿಗಳನ್ನು ಗಳಿಸಿದೆ. ತಮಿಳುನಾಡಿನವರಿಂದಲೇ 20.50 ಕೋಟಿ ರೂಪಾಯಿಗಳು ಬಂದಿವೆ. ಸಾಗರೋತ್ತರ ಪ್ರದೇಶಗಳಲ್ಲಿ ಸಿನಿಮಾ 27 ಕೋಟಿ ರೂ. (ಸುಮಾರು $3.2 ಮಿಲಿಯನ್) ಗಳಿಸಿದೆ. 2024ರಲ್ಲಿ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾವಾಗಿ ವೆಟ್ಟೈಯನ್ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ ಇತ್ತೀಚಿನ ಗೋಟ್ ಚಿತ್ರವಿದೆ.
2ನೇ ದಿನ ಸಿನಿಮಾ ತನ್ನ ಗಳಿಕೆಯಲ್ಲಿ ಕೊಂಚ ಕುಸಿತ ಕಂಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರ 50 ಕೋಟಿ ರೂಪಾಯಿಯ ಮೈಲಿಗಲ್ಲನ್ನು ದಾಟಿದೆ. ಕೇವಲ ಎರಡು ದಿನಗಳಲ್ಲಿ ಒಟ್ಟು 55.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದ್ರೆ ಮೊದಲ ದಿನದ ಅಂಕಿಅಂಶಕ್ಕೆ ಹೋಲಿಸಿದರೆ, ಎರಡನೇ ದಿನದ ಸಂಪಾದನೆಯಲ್ಲಿ ಕೊಂಚ ಇಳಿಕೆಯಾಗಿದೆ.
ಮೊದಲ ದಿನದ 'ವೆಟ್ಟೈಯನ್' ಕಲೆಕ್ಷನ್ ದಿನ: 31.7 ಕೋಟಿ ರೂಪಾಯಿ. (ಸ್ಯಾಕ್ನಿಲ್ಕ್ ಮಾಹಿತಿ, ಭಾರತದಲ್ಲಿ).
- ತಮಿಳು: 27.75 ಕೋಟಿ ರೂ.
- ತೆಲುಗು: 3.3 ಕೋಟಿ ರೂ.
- ಹಿಂದಿ: 0.6 ಕೋಟಿ ರೂ.
- ಕನ್ನಡ: 0.05 ಕೋಟಿ ರೂ.