ಕರ್ನಾಟಕ

karnataka

ETV Bharat / entertainment

ಸಂಘಿ ಕೆಟ್ಟ ಪದ ಎಂದು ಐಶ್ವರ್ಯ ಹೇಳಿಲ್ಲ: ಮಗಳ ಪರ ನಿಂತ ತಲೈವರ್

ತಮ್ಮ ಮಗಳು ಸಂಘಿ ಪದವನ್ನು ನಕರಾತ್ಮಕವಾಗಿ ಬಳಸುವ ಉದ್ದೇಶ ಹೊಂದಿಲ್ಲ ಎಂದು ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ಪಷ್ಟಪಡಿಸಿದ್ದಾರೆ.

ಸೌತ್ ಸೂಪರ್ ಸ್ಟಾರ್ ರಜನಿಕಾಂತ್
ಸೌತ್ ಸೂಪರ್ ಸ್ಟಾರ್ ರಜನಿಕಾಂತ್

By ETV Bharat Karnataka Team

Published : Jan 29, 2024, 6:25 PM IST

ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ(ತಮಿಳುನಾಡು) :ಸಂಘಿ ಕೆಟ್ಟ ಪದ ಎಂದು ನನ್ನ ಮಗಳು ಐಶ್ವರ್ಯ ಹೇಳಿಲ್ಲ ಎಂದು ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೇಳಿದ್ದಾರೆ. 'ಲಾಲ್ ಸಲಾಮ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಐಶ್ವರ್ಯಾ ಅವರು ನನ್ನ ತಂದೆ ಸಂಘಿ ಅಲ್ಲ ಎಂದು ಹೇಳಿದ್ದರು. ಈ ಬಗ್ಗೆ ಇದೀಗ ತಲೈವರ್ ಪ್ರತಿಕ್ರಿಯಿಸಿದ್ದಾರೆ.

ಮಗಳು ಐಶ್ವರ್ಯ ಪರ ನಿಂತ ರಜನಿಕಾಂತ್: ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಮಗಳು ‘ಸಂಘಿ’ ಪದವನ್ನು ನಕಾರಾತ್ಮಕವಾಗಿ ಬಳಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಮಗಳು ಐಶ್ವರ್ಯಾ ರಜನಿಕಾಂತ್ ಎಂದಿಗೂ ಸಂಘಿ ಕೆಟ್ಟ ಪದ ಎಂದು ಹೇಳಿಲ್ಲ. ಆಧ್ಯಾತ್ಮದಲ್ಲಿ ತೊಡಗಿರುವ ನನ್ನ ತಂದೆಗೆ ಈ ರೀತಿ ಪ್ರಚಾರ ಏಕೆ? ಎಂದು ಪ್ರಶ್ನಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಯಾರನ್ನೂ ಅವಮಾನಿಸುವುದು ಐಶ್ವರ್ಯಾ ಉದ್ದೇಶವಲ್ಲ: ಐಶ್ವರ್ಯಾ ಅವರ ಪ್ರತಿಕ್ರಿಯೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರನ್ನಾದರು ಅವಮಾನಿಸುವುದು ಅವಳ ಉದ್ದೇಶವಲ್ಲ. ‘ಸಂಘಿ’ಯನ್ನು ಋಣಾತ್ಮಕವಾಗಿ ಪ್ರಸ್ತುತಪಡಿಸಲು ಅವಳು ಹೀಗೆ ಹೇಳಿಲ್ಲ ಎಂದಿದ್ದಾರೆ. ನಾನು ಆಧ್ಯಾತ್ಮಿಕತೆಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದಿರುವ ಅವರು, ತಮ್ಮ ಮಗಳ ಪರವಾಗಿ ಪ್ರತಿಕ್ರಿಯಿಸಿದ್ದಾರೆ.

ಐಶ್ವರ್ಯಾ ಅವರು ಹೇಳಿದ್ದೇನು? : ಜನವರಿ 26 ರಂದು ಲಾಲ್ ಸಲಾಂ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಐಶ್ವರ್ಯಾ ಮಾತನಾಡಿ, ನನ್ನ ತಂದೆ ರಜನಿಕಾಂತ್ ಅವರು ಸಂಘಿ ಅಲ್ಲ ಎಂದು ನಾನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ಇಲ್ಲದಿದ್ದರೆ ಅವರು 'ಲಾಲ್ ಸಲಾಮ್' ರೀತಿಯ ಚಿತ್ರವನ್ನು ಮಾಡುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ನನ್ನ ತಂದೆಯನ್ನು ಸಂಘಿ ಎಂದು ಕರೆಯುತ್ತಿದ್ದಾರೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ಸಂಘಿ ಎಂದರೆ ಏನು? ಎಂದು ನಾನು ಬೇರೆಯವರನ್ನು ಕೇಳಿದಾಗ, ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು ಎಂದಿದ್ದರು.

ಇದನ್ನೂ ಓದಿ:'ಲಾಲ್​ ಸಲಾಂ' ಟೀಸರ್​ ಔಟ್​; ಮೊಯ್ದೀನ್ ಭಾಯ್ ಪಾತ್ರದಲ್ಲಿ ರಜನಿಕಾಂತ್​

ABOUT THE AUTHOR

...view details