'ಹಿರಣ್ಯ', ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆ ಹಾಗೂ ಕಂಟೆಂಟ್ ವಿಚಾರವಾಗಿ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಚಿತ್ರ. 'ಬಿಚ್ಚುಗತ್ತಿ' ಚಿತ್ರದ ಬಳಿಕ ಬೇಡಿಕೆ ಹೆಚ್ಚಿಸಿಕೊಂಡಿರುವ ರಾಜವರ್ಧನ್ ಅವರೀಗ 'ಹಿರಣ್ಯ' ಆಗಿದ್ದಾರೆ. ಕೆಲ ದಿನಗಳ ಹಿಂದೆ ಟೀಸರ್ನಿಂದ ಗಮನ ಸೆಳೆದಿದ್ದ ಚಿತ್ರತಂಡವೀಗ ಹಾಡೊಂದನ್ನು ಅನಾವರಣಗೊಳಿಸಿದೆ.
'ಬೈಲಾ ಬೈಲಾ' ಎಂಬ ಹಾಡಿಗೆ ಕನ್ನಡದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್, ರಾಜವರ್ಧನ್ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ. ನಿರ್ದೇಶಕ ಪ್ರವೀಣ್ ಅವ್ಯುಕ್ತ್ ಬರೆದ ಸಾಹಿತ್ಯಕ್ಕೆ ಶಮಿತಾ ಮಲ್ನಾಡ್ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ಒದಗಿಸಿದ್ದಾರೆ.
ಈಗಾಗಲೇ ಹಲವು ಶಾರ್ಟ್ ಮೂವಿಗಳನ್ನು ನಿರ್ದೇಶನ ಮಾಡಿರೋ ಅನುಭವ ಹೊಂದಿರುವ ಪ್ರವೀಣ್ ಅವ್ಯುಕ್ತ್ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ರಾಜವರ್ಧನ್‌ಗೆ ನಾಯಕಿಯಾಗಿ ರಿಹಾನಾ ಜೋಡಿಯಾಗಿದ್ದು, ಈ ಸಿನಿಮಾ ಮೂಲಕ ರಿಹಾನಾ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.