ಕರ್ನಾಟಕ

karnataka

ETV Bharat / entertainment

'ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್​ ಬಾಸ್​​ ಗೆಲ್ಲೋದು': ಇಂಥದ್ದೊಂದು ಹೇಳಿಕೆ ಬಂದಿದ್ದೇಕೆ? - BIGG BOSS KANNADA 11

ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ, ಅಸಲಿ ಆಟ ಈಗ ಶುರು ಎಂದು ವೈಲ್ಡ್​​ ಕಾರ್ಡ್​ ಸ್ಪರ್ಧಿ ರಜತ್​ ಕಿಶನ್​ ಹೇಳಿದ್ದಾರೆ.

bigg boss kannada 11 Contestants
ಬಿಗ್​ ಬಾಸ್​​​ ಕನ್ನಡ ಸೀಸನ್​ 11 ಸ್ಪರ್ಧಿಗಳು (Bigg Boss Team)

By ETV Bharat Entertainment Team

Published : Nov 22, 2024, 12:45 PM IST

ಬಿಗ್​ ಬಾಸ್​​​ ಕನ್ನಡದ 11ನೇ ಸೀಸನ್​ 8ನೇ ವಾರಾಂತ್ಯ ತಲುಪಿದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಕಾರ್ಯಕ್ರಮದ ಆಟ ದಿನ ದಿನವೂ ರಂಗೇರುತ್ತಿದೆ. ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಶೋ ಯಶಸ್ಸು ಕಂಡಿದೆ ಎಂಬ ಮೆಚ್ಚುಗೆ ಸೋಷಿಯಲ್​ ಮೀಡಿಯಾಗಳಲ್ಲಿ ವ್ಯಕ್ತವಾಗುತ್ತಿವೆ.

ಎಂಟನೇ ವಾರ ವೈಲ್ಡ್​ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಿರುವ ರಜತ್​ ಕಿಶನ್​ ಮತ್ತು ಶೋಭಾ ಶೆಟ್ಟಿ ಆರ್ಭಟವೂ ಕೊಂಚ ಹೆಚ್ಚೇ ಇದೆ. ಈಗಾಗಲೇ ದನಿ ಏರಿಸಿ ಪ್ರೇಕ್ಷಕರ ಗಮನ ಸೆಳೆದಿರುವ ಇವರು, ಮುಂದಿನ ದಿನಗಳಲ್ಲಿ ಹೇಗಿರಲಿದ್ದಾರೆ? ಆಟ ಹೇಗಿರಲಿದೆ? ಎಂಬುದು ನೋಡುಗರ ಕುತೂಹಲ.

ಇಂಥ ಹೊತ್ತಲ್ಲಿ 'ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್​ ಬಾಸ್​​ ಗೆಲ್ಲೋದು', ಅಸಲಿ ಆಟ ಈಗ ಶುರು ಎಂದು ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್​ ಕಿಶನ್ ಹೇಳಿ ಗಮನ ಸೆಳೆದಿದ್ದಾರೆ.

ಬಿಗ್​ ಬಾಸ್ ಲೇಟೆಸ್ಟ್‌​ ಪ್ರೋಮೋ: ರಜತ್​ ಕಿಶನ್​ ಖಡಕ್​ ಮಾತನ್ನು ಇಂದು ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು. ''ಒಂದೇ ವಾರದಲ್ಲಿ ಒಂಟಿಯಾದ್ರಾ ರಜತ್ ಕಿಶನ್?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಪ್ರೋಮೋ ರಿಲೀಸ್ ಆಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಅಭಿಮಾನಿಗಳ ಕಾತರ ಇನ್ನೂ ಹೆಚ್ಚಾಗಿದೆ.

ಕಳೆದ ವಾರಾಂತ್ಯದ ಕಿಚ್ಚನ ಸಂಚಿಕೆಯಲ್ಲಿ ರಜತ್ ಕಿಶನ್​ ಮತ್ತು ಶೋಭಾ ಶೆಟ್ಟಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿತ್ತು. ಸೋಮವಾರ ಮುಂಜಾನೆ ಇಬ್ಬರೂ ಮನೆಗೆ ಎಂಟ್ರಿ ಕೊಟ್ಟರು. ಮೊದಲ ದಿನ ಶೋಭಾ ಆರ್ಭಟಿಸಿದ್ರೆ, ಎರಡನೇ ದಿನ ರಜತ್​ ದನಿ ಏರಿಸಿದ್ರು. ಇಬ್ಬರ ಧೈರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದ್ರೆ ಆಟದ ಭರದಲ್ಲಿ ರಜತ್​ ಬಳಸಿರುವ ಅವಾಚ್ಯ ಪದಗಳನ್ನು ಮನೆ ಮಂದಿ ವಿರೋಧಿಸಿದ್ದಾರೆ. ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ.

ಇದನ್ನೂ ಓದಿ:'ಇಲ್ಲಿ ಕೀಳುಮಟ್ಟಕ್ಕಿಳಿದಿದ್ದಾರೆ, ನಾನು ಸಿಂಗಲ್​ ಸಿಂಹ': ಬಿಗ್ ಬಾಸ್​ನಲ್ಲಿ ಗುಡುಗಿದ ಚೈತ್ರಾ ಕುಂದಾಪುರ

ವಾರಾಂತ್ಯದಲ್ಲಿ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನಕ್ಕೆ ಇಡೀ ಮನೆಯವರು ಹೆಸರನ್ನು ಸೂಚಿಸಬೇಕಾಗುತ್ತದೆ. ಎಂದಿನಂತೆ ಈ ವಾರವೂ ಮನೆ ಮಂದಿ ಬಳಿ ಅಭಿಪ್ರಾಯ ಕೇಳಲಾಗಿದೆ. ಇಡೀ ಮನೆಯ ಪೈಕಿ ಬಹುತೇಕರು ಕಳಪೆ ಪ್ರದರ್ಶನಕ್ಕೆ ರಜತ್​ ಅವರ ಹೆಸರನ್ನು ಸೂಚಿಸಿದ್ದಾರೆ. ಆಟದ ಸಂದರ್ಭ ಗೋಲ್ಡ್​ ಸುರೇಶ್​ ಅವರ ವಿರುದ್ಧ ರಜತ್​ರಿಂದ ಬಳಕೆಯಾಗಿರುವ ಪದಗಳನ್ನು ನೀವು ಈಗಾಗಲೇ ನೋಡಿರುತ್ತೀರಿ.

ಇದನ್ನೂ ಓದಿ:ಎ.ಆರ್ ರೆಹಮಾನ್ ಬೆನ್ನಲ್ಲೇ ವಿಚ್ಛೇದನ ಘೋಷಿಸಿದ ಮೋಹಿನಿ: ವದಂತಿಗಳನ್ನುದ್ದೇಶಿಸಿ ವಕೀಲರು ಹೇಳಿದ್ದಿಷ್ಟು

ಕಳಪೆ ಪಟ್ಟ ಸಹಿಸದ ರಜತ್​​​, ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ ಬಿಗ್​ ಬಾಸ್​ ಆಟ ಗೆಲ್ಲೋದು. ಹುಟ್ಟಿದಾಗಿನಿಂದಲೂ ನಾನು ಇರೋದೇ ಹೀಗೆ. ಇನ್ಮುಂದೆಯೂ ಹೀಗೆ ಇರುತ್ತೇನೆ. ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಆಟ ತೋರಿಸ್ತೀನಿ. ಇನ್ಮುಂದೆ ಅಸಲಿ ಆಟ ಶುರು ಎಂದು ತಿಳಿಸಿದ್ದಾರೆ. ಕಳಪೆ ಪಟ್ಟದೊಂದಿಗೆ ಇವರು ಬಿಗ್​ ಬಾಸ್​ ಮನೆಯ ಜೈಲು ಸೇರಿದ್ದಾರೆ.

ABOUT THE AUTHOR

...view details