ಹೈದರಾಬಾದ್: ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಗುಣಮಟ್ಟದ ಸಮಯ ಕಳೆದಿದ್ದಾರೆ. ವೆಕೇಶನ್ನ ಸರಣಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದಾರೆ. ದೇಸಿ ಗರ್ಲ್ ಸಮುದ್ರತೀರದಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದೆ. ಗಂಡ, ಮಗಳೊಂದಿಗಿನ ಈ ಕ್ಷಣ ನಟಿಯ ಉತ್ತಮ ಕ್ಷಣಗಳಲ್ಲೊಂದಾಗಿದೆ ಎಂಬುದನ್ನು ಪ್ರತೀ ಫೋಟೋಗಳು ಒತ್ತಿ ಹೇಳುತ್ತಿವೆ.
2022ರ ಜನವರಿಯಲ್ಲಿ, ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿ ಮೇರಿಯನ್ನು ಸ್ವಾಗತಿಸಿದರು. ಪ್ರಸ್ತುತ ಪವರ್ಫುಲ್ ಸೆಲೆಬ್ರಿಟಿ ಕಪಲ್ ಫ್ರಾನ್ಸ್‌ನಲ್ಲಿ ಸಮಯ ಕಳೆಯುತ್ತಿದೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಮೈಮೇಲಿದ್ದ ಮಗಳ ಟ್ಯಾಟೂ ನೆಟ್ಟಿಗರ ಗಮನ ಸೆಳೆದಿದೆ.
ಫೋಟೋವೊಂದರಲ್ಲಿ, ಪ್ರಿಯಾಂಕಾ ಅವರು ವಿಹಾರ ನೌಕೆಯಲ್ಲಿ ವಿಶ್ರಾಂತಿ ಪಡೆಯುತ್ತಿರೋದನ್ನು ಕಾಣಬಹುದು. ಬ್ರೌನ್, ಕ್ರೀಮ್ ಕಲರ್ ಔಟ್ಫಿಟ್, ಹ್ಯಾಟ್, ಸನ್‌ಗ್ಲಾಸ್ ಧರಿಸಿದ್ದರು. ನಟಿ ತಮ್ಮ ಮೊಣಕಾಲಿನ ಮೇಲೆ ಕೈ ಇರಿಸಿದ್ದು, ತೋಳಿನ ಮೇಲೆ ಹಚ್ಚೆ ಗೋಚರಿಸಿದೆ. ಟ್ಯಾಟೂ ಮಗಳು ಮಾಲ್ತಿಗೆ ಸಂಬಂಧಪಟ್ಟಿದ್ದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.
ಪ್ರಿಯಾಂಕಾ ಅವರ ಪೋಸ್ಟ್ ಅಭಿಮಾನಿಗಳನ್ನು ಸೆಳೆದಿದ್ದು, ನೆಟ್ಟಿಗರು ಕಾಮೆಂಟ್ ಸೆಕ್ಷನ್ನಲ್ಲಿ ಬ್ಯಸಿಯಾಗಿದ್ದಾರೆ. ಪೋಸ್ಟ್ಗೆ ಪ್ರತಿಕ್ರಿಯಿಸಿದ ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು "ಹೊಸ ಟ್ಯಾಟೂ, ಇದು ಮೇರಿ" ಎಂದು ಹೇಳಿದ್ರೆ, ಮತ್ತೋರ್ವರು "ಪ್ರಿಯಾಂಕಾ ಚೋಪ್ರಾ ಅವರ ತೋಳಿನ ಮೇಲೆ ಮಾಲ್ತಿ ಟ್ಯಾಟೂವನ್ನು ಯಾರು ಗಮನಿಸಿದ್ರಿ?" ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷವೇ ಈ ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಕೆಲವರು ಗಮನ ಸೆಳೆದಿದ್ದಾರೆ. ಓರ್ವರು ಕಾಮೆಂಟ್ ಮಾಡಿ, "ಅಯ್ಯೋ, ಆ ಟ್ಯಾಟೂವನ್ನು ನೋಡಿ. ಮುದ್ದಾಗಿದೆ. ಸೋ ಸ್ವೀಟ್" ಎಂದು ತಿಳಿಸಿದ್ದಾರೆ.