ಹೈದರಾಬಾದ್: ಬಾಲಿವುಡ್ನಲ್ಲಿ ಮಾತ್ರವಲ್ಲದೇ ಹಾಲಿವುಡ್ನಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ - ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ತಾವು ಸಾಗಿ ಬಂದ ಹಾದಿ ಕುರಿತು ಮಾತನಾಡಿದ್ದಾರೆ. ಹಾಲಿವುಡ್ನಲ್ಲಿ ಆರಂಭಿಕ ದಿನಗಳಲ್ಲಿ ಅನುಭವಿಸಿದ ಸವಾಲುಗಳ ಕುರಿತು ಮಾತನಾಡಿರುವ ಅವರು ಆ ಸಮಯದಲ್ಲಿ ಒಬ್ಬಂಟಿತನ ಮತ್ತು ಭಯ ಕಾಡುತ್ತಿತ್ತು ಎಂದಿದ್ದಾರೆ. 2017ರಲ್ಲಿ ಬೇವಾಚ್ ಮೂಲಕ ಪ್ರಿಯಾಂಕಾ ಹಾಲಿವುಡ್ ಪ್ರಯಾಣ ಆರಂಭಿಸಿದ್ದಾರೆ.
ಇತ್ತೀಚಿಗೆ ಪೋಡ್ಕಾಸ್ಟ್ನಲ್ಲಿ ಮಾತನಾಡಿರುವ ಅವರು, ಆರಂಭಿಕ ದಿನದಲ್ಲಿ ಪಶ್ಚಿಮದಲ್ಲಿ ನನ್ನ ಜೀವನ ಸುಲಭದ ಹಾದಿಯಾಗಿರಲಿಲ್ಲ ಎಂದಿದ್ದಾರೆ. ಅದರ ಅರ್ಥ ಹಾಲಿವುಡ್ನಲ್ಲಿ ತಮ್ಮ ಆರಂಭ ಸುಖಕರವಾಗಿರಲಿಲ್ಲ ಎಂದು. ಈ ಉದ್ಯಮದಲ್ಲಿ ನನಗೆ ಯಾರು ಕೂಡ ಪರಿಚಿತರಿರಲಿಲ್ಲ. ಏನು ಕೂಡ ತಿಳಿದಿರಲಿಲ್ಲ. ಸ್ನೇಹಿತರು ಕೂಡ ಇರಲಿಲ್ಲ. ನಾನು ಏಕಾಂಗಿಯಾಗಿದ್ದೆ. ಭಯ ಆವರಿಸಿತ್ತು. ನ್ಯೂಯಾರ್ಕ್ ನನಗೆ ಆಗ ಕತ್ತಲಿನ ಪ್ರಪಂಚವಾಗಿತ್ತು ಎಂದಿದ್ದಾರೆ.
ಭಾರತದಲ್ಲಿನ ಯಶಸ್ಸಿನ ಹೊರತಾಗಿ ಹಾಲಿವುಡ್ನಲ್ಲಿ ತಾವು ಅನೇಕ ಸವಾಲುಗಳನ್ನು ಅನುಭವಿಸಬೇಕಾಯಿತು. ಮತ್ತೆ ವೃತ್ತಿಯನ್ನು ಹೊಸದಾಗಿ ಆರಂಭಿಬೇಕಿತ್ತು. ಈ ವೇಳೆ ತಿರಸ್ಕಾರ ಮತ್ತು ಹಿನ್ನಡೆ ಅನುಭವಿಸಿದೆ. ಆದರೆ, ಸ್ಥಿರತೆ, ಸಮರ್ಪಣೆ ಮನೋಭಾವ ಆಕೆಯನ್ನು ಇದರಿಂದ ದೂರ ಮಾಡಲಿಲ್ಲ. ಆಕೆಯ ಮಹತ್ವಕಾಂಕ್ಷೆ, ಪರಿಹಾರ ಸಾಮರ್ಥ್ಯದ ಮನಸ್ಥಿತಿ, ಒಪ್ಪಿಕೊಳ್ಳುವ ಮನಸ್ಥಿತಿಯಿಂದ ಇದು ಸಾಧ್ಯವಾಯಿತು.