ಕರ್ನಾಟಕ

karnataka

ETV Bharat / entertainment

'ಇವತ್ತು ನಾನ್​ ಹೇಳ್ತೀನಿ, ನೀವ್ ಕೇಳ್ಬೇಕ್​​​': ವಿನಯ್ ಏಟಿಗೆ ಪ್ರತಾಪ್​ ತಿರುಗೇಟು! - Prathap dialogues about Vinay

Bigg Boss: 'ವಿನಯ್ ಏಟಿಗೆ ತಿರುಗೇಟು ಕೊಟ್ರಾ ಪ್ರತಾಪ್?' ಎಂಬ ಶೀರ್ಷಿಕೆಯಡಿ ಬಿಗ್​ ಬಾಸ್​​ ಪ್ರೋಮೋ ಅನಾವರಣಗೊಂಡಿದ್ದು, ಪ್ರತಾಪ್​ ಡೈಲಾಗ್ಸ್​​ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

Prathap dialogues about Vinay
ವಿನಯ್ ಏಟಿಗೆ ಪ್ರತಾಪ್​ ತಿರುಗೇಟು

By ETV Bharat Karnataka Team

Published : Jan 23, 2024, 12:23 PM IST

'ಕನ್ನಡ ಬಿಗ್​ ಬಾಸ್​ ಸೀಸನ್​ 10'ರ ಫಿನಾಲೆಗೆ ದಿನಗಣನೆ ಶುರುವಾಗಿದೆ. ಮನೆಯೊಳಗಿನ ಸದಸ್ಯರ ನಡುವಿನ ಹಣಾಹಣಿಯೂ ಜೋರಾಗಿಯೇ ಇದೆ. 'ಮಾಡು ಇಲ್ಲವೇ ಮಡಿ' ಹಂತದಲ್ಲಿ ಸಿಕ್ಕ ಅವಕಾಶಗಳನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ತಮ್ಮ ಫಿನಾಲೆ ದಾರಿಯನ್ನು ಸುಗಮಗೊಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಯತ್ನದಲ್ಲಿ ಹಿಂದೆಂದೂ ಕಾಣದ ಸ್ಪರ್ಧಿಗಳ ಗುಣಸ್ವಭಾವಗಳು ಆಚೆ ಬರುತ್ತಿವೆ. ಇದರ ಒಂದು ಝಲಕ್ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಇಂದಿನ ಪ್ರೋಮೋದಲ್ಲಿ ಕಾಣಿಸಿದೆ. ಕಲರ್ಸ್ ಕನ್ನಡ ಸೋಷಿಯಲ್​​ ಮೀಡಿಯಾಗಳಲ್ಲಿ 'ವಿನಯ್ ಏಟಿಗೆ ತಿರುಗೇಟು ಕೊಟ್ರಾ ಪ್ರತಾಪ್?' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

ಬಿಗ್‌ ಬಾಸ್‌ ಮನೆಯೊಳಗಿನ ಆರು ಸ್ಪರ್ಧಿಗಳಿಗೆ ತಮ್ಮ ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕೆ ಒಂದು ಅವಕಾಶ ನೀಡಿದೆ. ಎದುರಿಗೆ ಆರು ಪಂಚಿಂಗ್ ಬ್ಯಾಗ್ ಇಟ್ಟು ಅವುಗಳ ಮೇಲೆ ಆರು ಸ್ಪರ್ಧಿಗಳ ಫೋಟೋ ಅಂಟಿಸಲಾಗಿದೆ. ಪ್ರತೀ ಸದಸ್ಯರೂ ತಾವು ಆಯ್ಕೆ ಮಾಡಿಕೊಳ್ಳುವ ಓರ್ವ ಸ್ಪರ್ಧಿಯ ಎದುರು ನಿಂತು, ಆ ಸ್ಪರ್ಧಿಗೆ ಹೇಳಬೇಕೆಂದಿರುವ ಆಕ್ರೋಶದ ಮಾತುಗಳನ್ನು ಹೇಳಿ ಅವರ ಫೋಟೋ ಇರುವ ಬ್ಯಾಗ್‌ಗೆ ಪಂಚ್ ಮಾಡಬೇಕು.

ವಿನಯ್‌ ಅವರು ಪ್ರತಾಪ್ ಚಿತ್ರವಿರುವ ಬ್ಯಾಗ್ ಎದುರು ನಿಂತಿದ್ದಾರೆ. ತಮ್ಮದೇ ಸ್ಟೈಲ್‌ನಲ್ಲಿ ಪ್ರತಾಪ್‌ ಕಡೆಗೆ ಕೆಂಗಣ್ಣಿನ ಖಡಕ್ ಲುಕ್‌ ಕೊಟ್ಟು, ಸಿನಿಮೀಯವಾಗಿ 'ಪ್ರತಾಪ್, ನೀನು ನನ್ನ ಬಗ್ಗೆ ಸರಿಯಾಗಿ ಮಾತಾಡುವುದನ್ನು ಕಲ್ತ್ಕೋ. ಇಲ್ಲಾಂದ್ರೆ ಪರಿಣಾಮ ಸರಿಯಾಗಿರಲ್ಲ' ಎಂದು ಹೇಳಿ ಬಲವಾಗಿ ಪ್ರತಾಪ್ ಫೋಟೋ ಇರುವ ಬ್ಯಾಗ್ ಮೇಲೆ ಪಂಚ್ ಮಾಡಿದ್ದಾರೆ. ಪ್ರತಾಪ್ ಮೇಲಿನ ಆಕ್ರೋಶ ಪಂಚಿಂಗ್ ಬ್ಯಾಗ್​ ಮೇಲೆ ಪಂಚ್​ ಮಾಡಿದ ರೀತಿ ನೋಡಿದ್ರೆ ಸ್ಪಷ್ಟವಾಗಿ ತಿಳಿಯುತ್ತದೆ.

ಆದ್ರೆ ಇದಕ್ಕೆ ಪ್ರತಾಪ್ ಕೊಟ್ಟ ಕೌಂಟರ್ ಮಾತ್ರ ಇನ್ನೂ ಸರ್​ಪ್ರೈಸಿಂಗ್​ ಆಗಿತ್ತು. ಸಾಮಾನ್ಯವಾಗಿ ಹೀಗೆ ತಮ್ಮ ಬಗ್ಗೆ ಆರೋಪ ಎದುರಾದಾಗ ಅವುಗಳಿಗೆ ಉತ್ತರಿಸುವಾಗ ಪ್ರತಾಪ್, ಸಾವಧಾನದಿಂದ ತಮಗೆ ಅನಿಸಿದ್ದನ್ನು ವಿವರಿಸುತ್ತಿದ್ದರು. ಎದುರುಗಡೆಯವರು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೇ ಸಹನೆಯಿಂದ ವಿವರಿಸುತ್ತಿದ್ದರು. ವಿನಯ್ ಜೊತೆಗಿನ ಜಗಳದಲ್ಲಿ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಏರುಧ್ವನಿಯಲ್ಲಿ ಕಿರುಚಾಡಿದ್ದೂ ಇತ್ತು. ಆದ್ರೆ ಇದೀಗ ಪ್ರತಾಪ್ ಕೌಂಟರ್​ ಕೊಟ್ಟಿದ್ದು ಬಹಳ ಭಿನ್ನವಾಗಿತ್ತು. ಈ ಸಲ, ಬಹುಶಃ ತಮ್ಮ ಬಿಗ್‌ ಬಾಸ್ ಪಯಣದಲ್ಲಿ ಇದೇ ಮೊದಲ ಬಾರಿ ಅವರು ವ್ಯಂಗ್ಯದ ಅಸ್ತ್ರ ಹಿಡಿದಿದ್ದಾರೆ.

ಇದನ್ನೂ ಓದಿ:ಪಂಚ ಭಾಷೆಗಳಲ್ಲಿ ಬರಲಿದೆ ರಾಮಾಯಣ ಕಥಾಧಾರಿತ ಪ್ಯಾನ್​ ಇಂಡಿಯಾ ಸಿನಿಮಾ; ಹೆಸರೇನು ಗೊತ್ತಾ?

ಕೈಗೆ ಬಾಕ್ಸಿಂಗ್ ಗ್ಲೌಸ್ ತೊಟ್ಟ ಪ್ರತಾಪ್, ವಿನಯ್ ಅವರನ್ನೇ ಇಮಿಟೇಟ್ ಮಾಡಿದ್ದಾರೆ. 'ನಿಮ್ಮ ಅರಚಾಟಕ್ಕೆ.. ವೋ ಪ್ರತಾಪ್, ಹೋ ಪ್ರತಾಪ್​ ಎಂದರೆ ಇಲ್ಲಿ ಯಾರೂ ಹೆದರಿಕೊಳ್ಳೋರಿಲ್ಲ. ನೀವು ಅತ್ತರೆ ಅದು ಪ್ರೀತಿ, ನಾನು ನನ್ನ ತಂದೆ-ತಾಯಿ ನೆನಪಿಸಿಕೊಂಡು ಅತ್ತರೆ ಅದು ಸಿಂಪಥಿ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ವಿನಯ್, 'ನೀನು ಬುದ್ಧಿವಾದ ನನಗೆ ಹೇಳಬೇಕಾಗಿಲ್ಲ' ಎಂದು ತಿರುಗೇಟು ಕೊಟ್ಟಿದ್ದಾರೆ. ಅದಕ್ಕೂ ಪ್ರತಾಪ್, ಭಯವಾಗಿರುವಂತೆ ನಟಿಸುತ್ತಾ, 'ಅಯ್ಯೋ ವಿನಯಣ್ಣ, ಭಯ ಅಣ್ಣ, ನಂಗೆ ಆಗ್ತಾ ಇಲ್ಲ ಅಣ್ಣಾ' ಎಂದು ಮುದುರಿದ ಹಾಗೆ ನಟಿಸಿದ್ದಾರೆ. 'ನಿನಗೆ ಹೆದರಿಸೋದಕ್ಕಲ್ಲ ಮರಿ ನಾನು ಹೇಳ್ತಾ ಇರೋದು' ಎಂದು ವಿನಯ್ ಹೇಳಿದರೆ, 'ಕೇಳಿ ಅಣ್ಣಾ ನಾನ್​ ಹೇಳ್ತೀನಿ ಕೇಳಿ, ಕೇಳ್ಬೇಕು ನೀವೀವತ್ತು' ಎಂದು ಇನ್ನಷ್ಟು ಕೆಣಕಿದ್ದಾರೆ. ಪ್ರತಾಪ್​​​ ಡೈಲಾಗ್ಸ್​​​ ವಿನಯ್​​​ ಅನ್ನು ಕೆಣಕಿಸಿದರೆ, ಮನೆಯ ಉಳಿದ ಸದಸ್ಯರು ಎದ್ದುಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ:ರಾಮನ ಸ್ಮರಿಸಿದ ಮಹೇಶ್​ಬಾಬು, ದೀಪಿಕಾ ಸೇರಿ ಹಲವು ಸೆಲೆಬ್ರಿಟಿಗಳು

ಹಾಗಾದ್ರೆ ಪ್ರತಾಪ್ ಒಳಗಿನ ಈ ಅಣುಕು ನಟ ಹೊರಬಂದಿದ್ದು ಹೇಗೆ? ಯಾಕೆ? ಅವರು ವಿನಯ್‌ಗೆ ಏನು ಹೇಳಲು ಹೊರಟಿದ್ದಾರೆ? ಈ ಎಲ್ಲವನ್ನೂ ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ವೀಕ್ಷಿಸಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ABOUT THE AUTHOR

...view details