'ರಾಂಚಿ' ಎಂಬ ಚಿತ್ರದಿಂದ ಗಮನ ಸೆಳೆದಿದ್ದ ಯುವ ನಟ ಪ್ರಭು ಮುಂಡ್ಕುರ್ ಅವರು ತಮ್ಮ ಹೊಸ 'ಮರ್ಫಿ' ಸಿನಿಮಾ ಮೂಲಕ ಕನ್ನಡಿಗರ ಮನ ಗೆಲ್ಲಲು ಅಣಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿರುವ 'ಮರ್ಫಿ' ಅಂಗಳದಿಂದ 'ಸಮಯ' ಎಂಬ ಮೋಹಕ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.
ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಗೀತೆಗೆ ಧನಂಜಯ್ ರಂಜನ್ ಪದ ಪೊಣಿಸಿದ್ದಾರೆ. ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಾಯಕ ಪ್ರಭು ಮುಂಡ್ಕೂರ್, ನಾಯಕಿಯರಾದ ರೋಶಿನಿ ಪ್ರಕಾಶ್ ಹಾಗೂ ಇಳಾ ವೀರಮಲ್ಲ ಮಿಂಚಿದ್ದಾರೆ.
'ಮರ್ಫಿ'ಗೆ ಬಿಎಸ್ಪಿ ವರ್ಮಾ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕುರ್ ಅವರು ವರ್ಮಾ ಜೊತೆಗೂಡಿ ಚಿತ್ರಕಥೆ ಬರೆದಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ ಪ್ರಭು ಮುಂಡ್ಕುರ್, ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಜೊತೆ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ ನಿರ್ವಹಿಸಿದ್ದಾರೆ. ಆದರ್ಶ ಆರ್. ಕ್ಯಾಮರಾ ಕೈಚಳಕವಿದೆ.