ಕರ್ನಾಟಕ

karnataka

ETV Bharat / entertainment

ಪ್ರಭಾಸ್​ 'ಕಣ್ಣಪ್ಪ' ನೋಟ, ಅಲ್ಲು ಅರ್ಜುನ್​-ಶ್ರೀಲೀಲಾ 'ಪುಷ್ಪ 2' ಡ್ಯಾನ್ಸ್ ಲುಕ್​​​ ಲೀಕ್​​: 'ವೈರಲ್​​ ಮಾಡಬೇಡಿ' - ಚಿತ್ರತಂಡ ಮನವಿ - PRABHAS LOOK FROM KANNAPPA

ದಕ್ಷಿಣ ಚಿತ್ರರಂಗದ ಖ್ಯಾತ ನಟರಾದ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರಗಳ ಚಿತ್ರೀಕರಣದ ಕ್ಷಣಗಳು ಆನ್​ಲೈನಲ್ಲಿ ಲೀಕ್​ ಆಗಿವೆ. ಫೋಟೋ ವೈರಲ್​​ ಮಾಡದಂತೆ ನೆಟ್ಟಿಗರಲ್ಲಿ ಚಿತ್ರತಂಡ ಮನವಿ ಮಾಡಿಕೊಂಡಿದೆ.

Prabhas, Sreeleela, Allu Arjun
ಪ್ರಭಾಸ್​​, ಶ್ರೀಲೀಲಾ, ಅಲ್ಲು ಅರ್ಜುನ್​​ (Photo: ANI)

By ETV Bharat Entertainment Team

Published : Nov 9, 2024, 2:02 PM IST

ಆನ್-ಸೆಟ್ ಸೋಷಿಯಲ್ ಮೀಡಿಯಾ ಲೀಕ್ಸ್​​ ಪ್ರಪಂಚದಾದ್ಯಂತದ ಚಲನಚಿತ್ರ ಉದ್ಯಮಕ್ಕಿರುವ ನಿರಂತರ ಸವಾಲು. ಅದರಲ್ಲೂ ಟಾಪ್ ಸ್ಟಾರ್‌ಗಳ ಲುಕ್​​, ಶೂಟಿಂಗ್​ ಸೀನ್ಸ್​​​ ಆನ್‌ಲೈನ್‌ನಲ್ಲಿ ಹೆಚ್ಚಾಗಿ ಸೋರಿಕೆಯಾಗುತ್ತವೆ. ತೆಲುಗು ಸೂಪರ್‌ ಸ್ಟಾರ್‌ಗಳಾದ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಅವರೀಗ ಈ ಸವಾಲನ್ನು ಎದುರಿಸಿದ್ದಾರೆ. ಲೇಟೆಸ್ಟ್​ ಲೀಕ್ಸ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರಗಳ ಒಂದು ನೋಟ ಒದಗಿಸಿದ್ದು, ಅಭಿಮಾನಿಗಳ ಉತ್ಸಾಹಕ್ಕೆ ಕಾರಣವಾಗಿದೆ.

ಭಗವಾನ್ ಶಿವನನ್ನು ಹೋಲುವ ದೈವಿಕ ಅವತಾರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ವೈರಲ್​ ಪ್ರಭಾಸ್​​ ಫೋಟೋದಲ್ಲಿ, ಅವರು ಹಣೆಯ ಮೇಲೆ ವಿಭೂತಿ ಹಚ್ಚಿದ್ದು, ದೊಡ್ಡ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದಾರೆ. ಫ್ಯಾಂಟಸಿ ಫಿಲ್ಮ್ 'ಕಣ್ಣಪ್ಪ'ನಲ್ಲಿ ಅವರ ಪಾತ್ರ ಇದಾಗಿರಬಹುದೆಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಅದಾಗ್ಯೂ, ಅವರ ಪಾತ್ರದ ಅಧಿಕೃತ ವಿವರಗಳಿನ್ನೂ ಹೊರಬಿದ್ದಿಲ್ಲ. ಈ ಸಂಭಾವ್ಯ ಪಾತ್ರದ ಸುತ್ತಲಿನ ಕುತೂಹಲವನ್ನೀಗ ಈ ವೈರಲ್​ ಫೋಟೋ ಹೆಚ್ಚಿಸಿದೆ. ಎಲ್ಲಾ ಪಾತ್ರಗಳಿಗೂ ಒಗ್ಗುವ ಹೆಸರಾಂತ ನಟ ಈ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಹೇಗೆ ಸಾಕಾರಗೊಳಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಮತ್ತೊಂದೆಡೆ, ಬಹುನಿರೀಕ್ಷಿತ 'ಪುಷ್ಪಾ 2: ದಿ ರೂಲ್​' ಚಿತ್ರದಿಂದಲೂ ಫೋಟೋ ಕೂಡಾ ವೈರಲ್​ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಹಾಗೂ ಬಹುಭಾಷಾ ನಟಿ ಶ್ರೀಲೀಲಾ ಅವರನ್ನೊಳಗೊಂಡ ಸ್ಪೆಷಲ್​ ಡ್ಯಾನ್ಸ್​ನ ನೋಟವನ್ನು ಈ ಚಿತ್ರ ಒದಗಿಸಿದೆ. ಸೋರಿಕೆಯಾಗಿರುವ ಫೋಟೋದಲ್ಲಿ ಅಲ್ಲು ಅರ್ಜುನ್‌ ಆರೆಂಜ್​ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಬ್ಲ್ಯಾಕ್​​ ಡ್ರೆಸ್​ನಲ್ಲಿ ಕಂಗೊಳಿಸಿದ್ದಾರೆ.

ಪುಷ್ಪ 1ರಲ್ಲಿ ಸೌತ್​​ ಬ್ಯೂಟಿ ಸಮಂತಾ ರುತ್ ಪ್ರಭು 'ಊ ಅಂಟಾವಾ' ಎಂಬ ಸ್ಪೆಷಲ್​ ಸಾಂಗ್​ಗೆ ಮೈ ಕುಣಿಸಿದ್ದರು. ಈ ಸಾಂಗ್​ ದೇಶಾದ್ಯಂತ ಸಖತ್​ ಸದ್ದು ಮಾಡಿ ಹಿಟ್​ ಆಗಿತ್ತು. ಸದ್ಯ ಶ್ರೀಲೀಲಾ ಅದೇ ರೀತಿಯ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಹೈದರಾಬಾದ್‌ನ ಸೆಟ್‌ನಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನ ನೋಟವೀಗ ಪುಷ್ಪ 2ರ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಪುಷ್ಪ 2ಕ್ಕೆ ಸುಕುಮಾರ್ ಆ್ಯಕ್ಷನ್​​ ಕಟ್​ ಹೇಳಿದ್ದು, ಇದೇ ಡಿಸೆಂಬರ್ 5 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ರಶ್ಮಿಕಾ ಮಂದಣ್ಣ ತಮ್ಮ ಶ್ರೀವಲ್ಲಿ ಪಾತ್ರದಲ್ಲಿ ಮರಳಲಿದ್ದಾರೆ. ಚಿತ್ರದ ಮತ್ತೊಂದು ಭಾಗಕ್ಕೆ ಮತ್ತಷ್ಟು ಆಕರ್ಷಣೆಯಾಗುವ ಭರವಸೆ ಇದೆ.

ಈ ಫೋಟೋಗಳು ಲೀಕ್​ ಆದ ಬೆನ್ನಲ್ಲೇ ಕಣ್ಣಪ್ಪ ಮತ್ತು ಪುಷ್ಪ 2 ಚಿತ್ರಗಳ ಮೇಲಿನ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರ ನಿರೀಕ್ಷೆಗಳು ದುಪ್ಪಟ್ಟಾಗಿವೆ. ತೆಲುಗು ಚಿತ್ರರಂಗದ ಎರಡು ಬಿಗ್​ ಬಜೆಟ್​ ಪ್ರಾಜೆಕ್ಟ್​ಗಳಾಗಿದ್ದು, ಸಿನಿಮಾಗಳ ಅಫೀಶಿಯಲ್​ ಅನೌನ್ಸ್​​ಮೆಂಟ್​ಗಾಗಿ ನೆಟ್ಟಿಗರು ಕಾತರರಾಗಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ 'ಪುಷ್ಪ 2' ಎದುರು ಬಿಡುಗಡೆಯಾಗಲಿದೆ ಕನ್ನಡದ 'ಧೀರ ಭಗತ್ ರಾಯ್' ಚಿತ್ರ

ಆದ್ರೆ, ಫೋಟೋಗಳು ವೈರಲ್​ ಆದ ಬೆನ್ನಲ್ಲೇ ಕಣ್ಣಪ್ಪ ಚಿತ್ರತಂಡ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದೆ. ಫೋಟೋಗಳನ್ನು ಹರಡಂತೆ ಕೇಳಿಕೊಂಡಿದ್ದಾರೆ.

ಕಣ್ಣಪ್ಪ ಚಿತ್ರತಂಡದಿಂದ ಒಂದು ತುರ್ತು ಮನವಿ,

''ಪ್ರೀತಿಯ ಪ್ರಭಾಸ್ ಅಭಿಮಾನಿಗಳು ಮತ್ತು ಬೆಂಬಲಿಗರೇ, ಕಳೆದ ಎಂಟು ವರ್ಷಗಳಿಂದ ನಾವು ನಮ್ಮನ್ನು ಕಣ್ಣಪ್ಪನಿಗಾಗಿ ಅರ್ಪಿಸಿದ್ದೇವೆ. ಎರಡು ವರ್ಷಗಳ ನಿರ್ಮಾಣ ಕೆಲಸಗಳ ನಂತರ, ನಮ್ಮ ತಂಡ ನಿಮಗೆ ಅಸಾಧಾರಣ ಸಿನಿಮಾ ನೀಡಲು ಉತ್ಸುಕವಾಗಿದೆ''.

ಚಿತ್ರದ ಕಠಿಣ ಪರಿಶ್ರಮವನ್ನು ಒತ್ತಿ ಹೇಳಿರುವ ಚಿತ್ರತಂಡ, ''ಇತ್ತೀಚೆಗೆ ಶೂಟಿಂಗ್​​ ಫೋಟೋವನ್ನು ಅನುಮತಿಯಿಲ್ಲದೇ ಕದ್ದು ಲೀಕ್ ಮಾಡಲಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಇದು ನಮ್ಮ ಕಠಿಣ ಪರಿಶ್ರಮವನ್ನು ದುರ್ಬಲಗೊಳಿಸುವುದಲ್ಲದೇ, ಈಸಿನಿಮಾದಲ್ಲಿ ಶ್ರಮಿಸುತ್ತಿರುವ 2,000ಕ್ಕೂ ಹೆಚ್ಚು ವಿಎಫ್​ಎಕ್ಸ್​​ ಕಲಾವಿದರು ಸೇರಿದಂತೆ ಸಾವಿರಾರು ಜನರ ಮೇಲೆ ಪರಿಣಾಮ ಬೀರುತ್ತದೆ''.

'ಈ ಸೋರಿಕೆ ಹೇಗಾಯ್ತು ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ, ಪೊಲೀಸ್ ದೂರನ್ನು ದಾಖಲಿಸುವ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇವೆ'.

'ಬೆಂಬಲಕ್ಕಾಗಿ ನಾವು ನಮ್ಮ ಅಭಿಮಾನಿಗಳನ್ನು ಸಂಪರ್ಕಿಸುತ್ತಿದ್ದೇವೆ. ಈ ಲೀಕ್​ ಫೋಟೋವನ್ನು ಹಂಚಿಕೊಳ್ಳದಂತೆ ನಾವು ವಿನಂತಿಸುತ್ತೇವೆ. ಯಾರಾದರೂ ವೈರಲ್​​ ಮಾಡಿದ್ರೆ, ಕ್ರಮಕ್ಕೆ ಸಜ್ಜಾಗಿ. ಈ ಸೋರಿಕೆಯನ್ನು ಪತ್ತೆಹಚ್ಚಲು ನಮಗೆ ಸಹಾಯ ಮಾಡಿದರೆ, ಅವರಿಗೆ 5,00,000 ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ'.

'ಈ ಬಗ್ಗೆ ಯಾವುದೇ ಸುಳಿವಿದ್ದರೂ, ದಯವಿಟ್ಟು ನೇರವಾಗಿ ಅಧಿಕೃತ 24 ಫ್ರೇಮ್ಸ್ ಫ್ಯಾಕ್ಟರಿ ಟ್ವಿಟರ್ ಖಾತೆಗೆ ಕಳುಹಿಸಿ. ಇದು ಪ್ರೀತಿ ಮತ್ತು ಸಮರ್ಪಣಾಭಾವದಿಂದ ಹುಟ್ಟಿದ ಪ್ರೊಜೆಕ್ಟ್​ ಆಗಿದ್ದು, ನಿಮ್ಮೆಲ್ಲರ ಸಹಾಯ ಅಗತ್ಯ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:12 ವರ್ಷಗಳಲ್ಲಿ 80 ಸಿನಿಮಾ: ಸ್ಯಾಂಡಲ್​​ವುಡ್​​ ಉನ್ನತಿಯ ಕನಸು ಕಂಡಿದ್ದ ಶಂಕರ್​ ನಾಗ್​​ ಜನ್ಮದಿನ

ABOUT THE AUTHOR

...view details