ಮುಂಬೈ (ಮಹಾರಾಷ್ಟ್ರ):ದೇಶದಲ್ಲೀಗ ಅಂಬಾನಿ ಕುಟುಂಬದ ವಿವಾಹ ಮಹೋತ್ಸವದ್ದೇ ಸದ್ದು. ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಪುತ್ರ ಅನಂತ್ ಶುಕ್ರವಾರದಂದು ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದಾರೆ. ಶನಿವಾರ ಸಂಜೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 'ಶುಭ ಆಶೀರ್ವಾದ' ಸಮಾರಂಭ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ನವದಂಪತಿಗೆ ಆಶೀರ್ವದಿಸಿದರು.
ಅಂಬಾನಿ ಕುಟುಂಬದ ಅದ್ಧೂರಿ ಮದುವೆ ಪ್ರಸಿದ್ಧ ಜಾಗತಿಕ ವ್ಯಕ್ತಿಗಳನ್ನು ಒಂದೇ ಸೂರಿನಡಿಗೆ ತಂದಿದೆ. ಹೈ ಪ್ರೊಫೈಲ್ ಪರ್ಸನಾಲಿಟಿಗಳು ಈ ಪ್ರೋಗ್ರಾಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿರುವ ಫೋಟೋ, ವಿಡಿಯೋಗಳು ಆನ್ಲೈನ್ಲ್ಲಿ ಶರವೇಗದಲ್ಲಿ ವೈರಲ್ ಆಗಿದೆ.
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಶುಕ್ರವಾರ ಮುಂಬೈನಲ್ಲಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾದರು. ಅದ್ಧೂರಿ ಮದುವೆಗೆ ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು. ಶನಿವಾರ ಸಂಜೆ 'ಶುಭ ಆಶೀರ್ವಾದ' ಶೀರ್ಷಿಕೆಯ ಸಮಾರಂಭ ನಡೆದಿದ್ದು, ಭಾನುವಾರ ಮತ್ತೊಂದು ಪ್ರಮುಖ ಕಾರ್ಯಕ್ರಮ ಜರುಗಲಿದೆ.
'ಶುಭ ಆಶೀರ್ವಾದ' ಸಮಾರಂಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ಕಾಣಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋಗಳಲ್ಲಿ, ಅನಂತ್ ಮತ್ತು ರಾಧಿಕಾ ಅವರು ಪ್ರಧಾನಿ ಮೋದಿಯವರಿಗೆ ನಮಸ್ಕರಿಸುತ್ತಿರುವುದು, ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು. ಪ್ರಧಾನಿ ಕೂಡ ವೇದಿಕೆಯಲ್ಲಿದ್ದ ಅಂಬಾನಿ ಕುಟುಂಬಸ್ಥರಿಗೆ ನಮಸ್ಕರಿಸಿ, ಮಾತನಾಡಿಸಿದ್ದಾರೆ.
ಇದನ್ನೂ ಓದಿ:ಅಂಬಾನಿ ಕುಟುಂಬದ ಅದ್ಧೂರಿ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳಿವರು: ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ! - Celebrities in Ambani Wedding
ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋಗಳಲ್ಲಿ, ಅನಂತ್ ಮತ್ತು ರಾಧಿಕಾ ಅವರು ಪ್ರಧಾನಿ ಮೋದಿಯವರಿಗೆ ನಮಸ್ಕರಿಸುತ್ತಿರುವುದು, ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು. ಪ್ರಧಾನಿ ಕೂಡ ವೇದಿಕೆಯಲ್ಲಿದ್ದ ಅಂಬಾನಿ ಕುಟುಂಬಸ್ಥರಿಗೆ ನಮಸ್ಕರಿಸಿ, ಮಾತನಾಡಿಸಿದ್ದಾರೆ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ - ರಾಧಿಕಾ: ವೈಭವೋಪೇತ ಮದುವೆಗೆ ಸಾಕ್ಷಿಯಾದ ಅಂಬಾನಿ ಕುಟುಂಬ - Anant Radhika wedding
ಬಾಲಿವುಡ್ನ ಬಹುತೇಕರು ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತನಾಮರು ಶನಿವಾರ ಸಂಜೆ ಅಂಬಾನಿ ಪ್ರೋಗ್ರಾಮ್ನಲ್ಲಿ ಕಾಣಿಸಿಕೊಂಡರು. ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಅಮೆರಿಕನ್ ಸ್ಟಾರ್ಸ್ ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋಯೆ ಕಾರ್ಡಶಿಯಾನ್, ಮಾಧುರಿ ದೀಕ್ಷಿತ್ ನೆನೆ, ಶಾಹಿದ್ ಕಪೂರ್, ಐಶ್ವರ್ಯಾ ರೈ ಬಚ್ಚನ್, ಸಾರಾ ಅಲಿ ಖಾನ್, ರಿತೇಶ್ ಜೆನಿಲಿಯಾ ಸೇರಿದಂತೆ ಹಲವರು ಕಾಣಿಸಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ವೈರಲ್ ಆಗಿವೆ.