ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೇ 1, ಬುಧವಾರದಂದು 36ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಪುತ್ರನ ಜನನಕ್ಕೂ ಮುನ್ನ ಕಾಣಿಸಿಕೊಂಡಿದ್ದ ನಟಿ, ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ನಟಿಯ ಪ್ರಸ್ತುತ ಫೋಟೋಗಳೂ ಈವರೆಗೆ ಶೇರ್ ಆಗಿರಲಿಲ್ಲ. ಐಪಿಎಲ್ ಪಂದ್ಯದಲ್ಲೂ ಅಭಿಮಾನಿಗಳು ಅನುಷ್ಕಾ ವಿಶೇಷವಾಗಿ ವಿರುಷ್ಕಾ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ 36ನೇ ಜನ್ಮದಿನವನ್ನು ನಮ್ಮ ಬೆಂಗಳೂರಿನಲ್ಲಿ ಪತಿ, ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಇತರೆ ಆಟಗಾರರೊಂದಿಗೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇದೀಗ ವಿರುಷ್ಕಾ ಸೆಲೆಬ್ರೇಶನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ಆತ್ಮೀಯರೊಂದಿಗೆ ತಮ್ಮ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಿದ್ದಾರೆ. ಜೀವನ ಸಂಗಾತಿ ವಿರಾಟ್ ಕೊಹ್ಲಿ ಮತ್ತು ಸಹ ಕ್ರಿಕೆಟಿಗರು ಸೇರಿ ಬೆರಳೆಣಿಕೆಯ ಜನರೊಂದಿಗೆ ಈ ಬಾರಿಯ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಐಶಾರಾಮಿ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟಿ ಆಯೋಜಿಸಿದ್ದರು.
ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, ಅನುಷ್ಕಾ ಹೆಸರಿನ ಮೆನುವನ್ನು ಒಳಗೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೆನುವಿನ ಕವರ್ ಪೇಜ್ನಲ್ಲಿ "ಸೆಲೆಬ್ರೇಟಿಂಗ್ ಅನುಷ್ಕಾ" ಎಂದು ಬರೆಯಲಾಗಿದೆ. ಕೆಳಗೆ ಹೋಟೆಲ್ನ ಹೆಸರಿದೆ. ಫೋಟೋ ಜೊತೆಗೆ, ''ನಂಬಲಾಗದ ಭೋಜನದ ಅನುಭವಕ್ಕಾಗಿ (Chef) ಮನು ಚಂದ್ರ ಅವರಿಗೆ ಧನ್ಯವಾದಗಳು. ನಮ್ಮ ಜೀವನದ ಅತ್ಯುತ್ತಮ ಆಹಾರ ಅನುಭವಗಳಲ್ಲಿ ಇದು ಒಂದು" ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನ ರಾಯಲ್ ರೆಸ್ಟೋರೆಂಟ್ ಲುಪಾದಲ್ಲಿ ಪಾರ್ಟಿ ನಡೆಸಿದ್ದಾರೆ ಎಂದು ಈ ಫೋಟೋ ಸೂಚಿಸಿದೆ.