ವಿಶ್ವದ ಪ್ರತಿಷ್ಠಿತ 'ಆಸ್ಕರ್' ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. 96ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 10ರಂದು ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇದ್ದು, ವಿಜೇತರು ಯಾರಾಗಬಹುದು? ಎಂದು ಊಹಿಸಲಾಗುತ್ತಿದೆ. ಓಪನ್‌ಹೈಮರ್ ಹೆಚ್ಚಿನ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ಕಠಿಣ ಸ್ಪರ್ಧೆ ಎದುರಾಗಿದೆ.
ಸೂಪರ್ ಹಿಟ್ 'ಓಪನ್‌ಹೈಮರ್' ಸಿನಿಮಾ 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಅದಾಗ್ಯೂ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ವಿಶೇಷವಾಗಿ ಚಿತ್ರಕಥೆ ಮತ್ತು ಎಡಿಟಿಂಗ್ ಮತ್ತು ಮ್ಯೂಸಿಕ್ ಸಲುವಾಗಿ ಕಠಿಣ ಸ್ಪರ್ಧೆಯಿದೆ. ಅನಿಮೇಟೆಡ್ ಚಿತ್ರ, ಕಾಸ್ಟೂಮ್ ಮತ್ತು ಪ್ರೊಡಕ್ಷನ್ ಡಿಸೈನ್ನಂತಹ ವಿಭಾಗಗಳಲ್ಲಿ ಸಾಕಷ್ಟು ಸಸ್ಪೆನ್ಸ್ ಇದೆ. ಪೂರ್ ಥಿಂಗ್ಸ್ ಮತ್ತು ಬಾರ್ಬಿ ಕಠಿಣ ಸ್ಪರ್ಧೆ ಕೊಡುತ್ತಿರುವ ಸಿನಿಮಾಗಳು. ಪ್ರಮುಖ ವಿಭಾಗಗಳಲ್ಲಿ ಈ ಸಿನಿಮಾ ಅಥವಾ ನಟ-ನಟಿ ವಿಜೇತರಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗಿರುವ ಹೆಸರುಗಳು ಈ ಕೆಳಗಿದೆ ನೋಡಿ.
ಅತ್ಯುತ್ತಮ ಚಿತ್ರ:
- ಅನಾಟಮಿ ಆಫ್ ಎ ಫಾಲ್
- ಬಾರ್ಬಿ
- ಓಪನ್‌ಹೈಮರ್
- ದಿ ಹೋಲ್ಡ್ಓವರ್ಸ್
- ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
- ಮಾಯೆಸ್ಟ್ರೋ
- ಪಾಸ್ಟ್ ಲೈವ್ಸ್
- ಪೂರ್ ಥಿಂಗ್ಸ್
- ದಿ ಝೋನ್ ಆಫ್ ಇಂಟ್ರೆಸ್ಟ್
- ಗೆಲುವಿನ ಸಾಧ್ಯತೆ (ಊಹೆ): ಓಪನ್‌ಹೈಮರ್.
ಅತ್ಯುತ್ತಮ ನಿರ್ದೇಶಕ:
- ಜೋನಾಥನ್ ಗ್ಲೇಝರ್, (ದಿ ಝೋನ್ ಆಫ್ ಇಂಟ್ರೆಸ್ಟ್)
- ಕ್ರಿಸ್ಟೋಫರ್ ನೋಲನ್, (ಓಪನ್‌ಹೈಮರ್)
- ಯೊರ್ಗೊಸ್ ಲ್ಯಾಂತಿಮೊಸ್, (ಪೂರ್ ಥಿಂಗ್ಸ್)
- ಮಾರ್ಟಿನ್ ಸ್ಕೊರ್ಸೆಸ್, (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
- ಜಸ್ಟಿನ್ ಟ್ರೈಟ್, (ಅನಾಟಮಿ ಆಫ್ ಎ ಫಾಲ್)
- ಗೆಲುವಿನ ಸಾಧ್ಯತೆ (ಊಹೆ): ಕ್ರಿಸ್ಟೋಫರ್ ನೋಲನ್, (ಓಪನ್‌ಹೈಮರ್).