ಬಾಲಿವುಡ್ ಲವ್ಬರ್ಡ್ಸ್ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಬಹು ಸಮಯದಿಂದ ಡೇಟಿಂಗ್ನಲ್ಲಿದ್ದು, ತಮ್ಮ ಪ್ರೇಮ್ ಕಹಾನಿ ಸಲುವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು, ನೆಟ್ಟಿಗರನ್ನು ಸೆಳೆದಿದ್ದರು. ಈವರೆಗೆ ಹಲವು ಈವೆಂಟ್ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದ್ರೀಗ ಅದ್ಯಾಕೋ ಏನೋ, ಬ್ರೇಕ್ಅಪ್ ವದಂತಿ ಉಲ್ಭಣಗೊಂಡಿದೆ.
ಸಂಬಂಧದಲ್ಲಿ ಬಿರುಕು ವದಂತಿಗಳ ಮಧ್ಯೆ, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಕ್ರಿಪ್ಟಿಕ್ (ರಹಸ್ಯ) ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಭಿಮಾನಿಗಳು, ನೆಟ್ಟಿಗರಲ್ಲಿ ಸಾಕಷ್ಟು ಆಸಕ್ತಿ ಹುಟ್ಟುಹಾಕಿದೆ. ಏನಿರಬಹುದು? ಅಂದು ಅಂದಾಜಿಸಲು ಸೋಷಿಯಲ್ ಮೀಡಿಯಾ ಬಳಕೆದಾರರು ಶುರು ಮಾಡಿಕೊಂಡಿದ್ದಾರೆ. ಮಾಡೆಲ್ ಇಂದು ಬೆಳಗ್ಗೆ ಶೇರ್ ಮಾಡಿರುವ ಪೋಸ್ಟ್, 'ಪ್ರೀತಿ' ಮತ್ತು 'ಬೆಂಬಲ' ಕುರಿತು ನೆಟ್ಟಿಗರಿಗೆ ಸಂದೇಶ ರವಾನಿಸಿದೆ. ಇದು ಊಹಾಪೋಹಗಳಿಗೆ ತುಪ್ಪ ಸುರಿದಿದೆ. ಅನೇಕರು ಇದನ್ನು ಅವರ ಪ್ರಸ್ತುತ ಮನಸ್ಥಿತಿ ಎಂದು ತಿಳಿಸಿದ್ದಾರೆ.
ಮಲೈಕಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಭೂಮಿಯ ಮೇಲಿನ ದೊಡ್ಡ ನಿಧಿ ಎಂದರೆ ಅದು ನಮ್ಮನ್ನು ಪ್ರೀತಿಸುವ ಮತ್ತು ಬೆಂಬಲಿಸುವ ಜನರು. ಅವರನ್ನು ಖರೀದಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರು ಅಂತಹ ಕೆಲವರನ್ನು ಮಾತ್ರ ಹೊಂದಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಈ ಹೃದಯಸ್ಪರ್ಶಿ ಸಂದೇಶ, ಭಾವನಾತ್ಮಕ ಬೆಂಬಲವನ್ನು ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ ಸುಳಿವು ನೀಡಿತು. ನಟಿಯ ಸಂಬಂಧದ ಸುತ್ತಲಿನ ವದಂತಿಗಳ ಮಧ್ಯೆ, ಈ ಪೋಸ್ಟ್ ವ್ಯಾಪಕ ವ್ಯಾಖ್ಯಾನ ನೀಡಿದೆ. ನೆಟ್ಟಿಗರು ಇದನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ.