ಕರ್ನಾಟಕ

karnataka

ETV Bharat / entertainment

'ಲಂಗೋಟಿ ಮ್ಯಾನ್' ಸಿನಿಮಾ ಯಾವ ಸಮುದಾಯವನ್ನೂ ಅವಮಾನಿಸಲ್ಲ: ನಿರ್ದೇಶಕಿ ಸಂಜೋತಾ ಭಂಡಾರಿ - Langoti Man movie - LANGOTI MAN MOVIE

ನಿರ್ದೇಶಕಿ ಸಂಜೋತ ಭಂಡಾರಿ ಆ್ಯಕ್ಷನ್​ ಕಟ್​ ಹೇಳಿರುವ 'ಲಂಗೋಟಿ ಮ್ಯಾನ್' ಸೆಪ್ಟೆಂಬರ್ 20ರಂದು ಬಿಡುಗಡೆ ಆಗಲಿದೆ. ಚಿತ್ರತಂಡ ತಮ್ಮ ಚಿತ್ರದ ಕುರಿತು ಅನಿಸಿಕೆ ಹಂಚಿಕೊಂಡಿದೆ.

Langoti Man film team
'ಲಂಗೋಟಿ ಮ್ಯಾನ್' ಚಿತ್ರತಂಡ (ETV Bharat)

By ETV Bharat Entertainment Team

Published : Sep 13, 2024, 8:17 PM IST

'ಲಂಗೋಟಿ ಮ್ಯಾನ್' ಬಿಡುಗಡೆಗೆ ಸಜ್ಜಾಗಿರುವ ಕನ್ನಡದ ಸಿನಿಮಾ. ಚಿತ್ರ ಟೈಟಲ್ ಸಲುವಾಗಿ ಕೆಲ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿತ್ತು. ನಿರ್ದೇಶಕಿ ಸಂಜೋತ ಭಂಡಾರಿ ನಿರ್ದೇಶನದ ಮತ್ತು ಯುವ ನಟ ಧರ್ಮೇಂದ್ರ ಹಾಗೂ ಸಂಹಿತ ವಿನ್ಯಾ ಅಭಿನಯದ ಲಂಗೋಟಿ ಮ್ಯಾನ್ ಇದೇ ಸೆಪ್ಟೆಂಬರ್ 20ರಂದು ಬಿಡುಗಡೆ ಆಗಲಿದೆ. ಚಿತ್ರತಂಡ ತಮ್ಮ ಚಿತ್ರದ ಕುರಿತು ಅನಿಸಿಕೆ ಹಂಚಿಕೊಂಡಿದೆ.

ನಿರ್ದೇಶಕಿ ಸಂಜೋತ ಭಂಡಾರಿ ಮಾತನಾಡಿ, ಲಂಗೋಟಿ ಮ್ಯಾನ್ ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೊಳಗಾಗಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಎಂಬುದು ಎಲ್ಲರಿಗೂ ಗೊತ್ತಾಗಲಿದೆ. ಯಾವ ಸಮುದಾಯವನ್ನೂ ಅವಮಾನ ಮಾಡುವ ಮತ್ತು ನೋಯಿಸುವ ಉದ್ದೇಶ ಹೊಂದಿಲ್ಲ. ಮೊದಲು ಸಿನಿಮಾ ನೋಡಿ ಆಮೇಲೆ ಮಾತನಾಡಲಿ ಎಂದು ಹೇಳಿದರು.

ಯುವ ನಟ ಧರ್ಮೇಂದ್ರ ಮಾತನಾಡಿ, ಲಂಗೋಟಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ, ಆಚಾರ - ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಸಂಪ್ರದಾಯ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಚಿತ್ರ ಎಂದರು.

ನಟ ಆಕಾಶ್ ರಾಂಬೋ ಮಾತನಾಡಿ, ತಾತ ಮೊಮ್ಮಗನ ಸುತ್ತ ನಡೆಯುವ ಕಥೆ. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ. ತಾತ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ತನಗೆ ಅಂಡರ್ ವೇರ್ ಹಾಕಲು ಆಗುತ್ತಿಲ್ಲ ಎಂಬುದು ಮೊಮ್ಮಗನ ಕೊರಗು. ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ಚಿತ್ರದ ಮೂಲಕ ತೆರೆಗೆ ತರಲಾಗುತ್ತಿದೆ ಎಂದರು.

ನಾಯಕಿ ಸಂಹಿತ ವಿನ್ಯಾ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಇದೆ. ಅದು ಏನು ಎನ್ನುವುದನ್ನು ನೀವು ಚಿತ್ರದಲ್ಲಿಯೇ ನೋಡಬೇಕು. ಚಿತ್ರ ನೋಡದೇ ಯಾರೂ ಕೂಡಾ ಅನಗತ್ಯವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಸಿನಿಮಾ ವೀಕ್ಷಿಸಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಏಕೆ ಇಟ್ಟಿದ್ದೇವೆ ಎನ್ನುವುದು ತಿಳಿಯಲಿದೆ ಎಂದರು.

ಇದನ್ನೂ ಓದಿ:ದಳಪತಿ ವಿಜಯ್ ಕೊನೆ ಸಿನಿಮಾ ನಿರ್ಮಿಸಲಿದೆ ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ: ಇದು ''ಕೆವಿಎನ್​​''ನ ಮೊದಲ ತಮಿಳು ಸಿನಿಮಾ - KVN First Tamil Movie

ನಟ ಹುಲಿ ಕಾರ್ತಿಕ್ ಮಾತನಾಡಿ, ನೀನೇನು ಪುಟಗೋಸಿ ಮಾಡಿದ್ದೀಯಾ ಅಂತಾ ಯಾರೂ ಕೇಳುವ ಹಾಗಿಲ್ಲ. ಲಂಗೋಟಿ ಮ್ಯಾನ್ ಸಿನಿಮಾ ಮಾಡಿದ್ದೇನೆ ಎಂದು ದೈರ್ಯವಾಗಿ ಹೇಳುತ್ತೇನೆ. ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಕಾಮಿಡಿಯಾಗಿ ಹಲವು ಗಂಭೀರ ವಿಷಯವನ್ನು ಚಿತ್ರದ ಮೂಲಕ ಹೇಳಿದ್ದೇವೆ ಎಂದರು.

ಇದನ್ನೂ ಓದಿ:ಸೌತ್​ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಟ್ವಿಟರ್​​ ಹ್ಯಾಕ್​​​: ಅನಗತ್ಯ ಟ್ವೀಟ್ಸ್ ನಿರ್ಲಕ್ಷಿಸುವಂತೆ ನಟಿಯ ಮನವಿ - Nayanthara Twitter Hacked

ಮತ್ತೋರ್ವ ನಟಿ ಸ್ನೇಹ ಖುಷಿ ಮಾತನಾಡಿ, ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಕಥೆ ಹೇಳಿದಾಗ ಹೇಗೆ ಸಿನಿಮಾ ಮಾಡುತ್ತಾರೋ ಅಂದುಕೊಂಡಿದ್ದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು. ಇವರ ಜೊತೆ ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ. ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಲಂಗೋಟಿ ಮ್ಯಾನ್ ಇದೇ ತಿಂಗಳು ಬಿಡುಗಡೆ ಆಗಲಿದೆ.

ABOUT THE AUTHOR

...view details