ಕರ್ನಾಟಕ

karnataka

ETV Bharat / entertainment

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್​; ಭಾರತವನ್ನು ಪ್ರತಿನಿಧಿಸಲಿದೆ ''ಲಾಪತಾ ಲೇಡೀಸ್'' - Laapataa Ladies to Oscars 2025

ಕಿರಣ್ ರಾವ್ ನಿರ್ದೇಶನದ ''ಲಾಪತಾ ಲೇಡೀಸ್'' ಸಿನಿಮಾ ವಿಶ್ವದ ಪ್ರತಿಷ್ಠಿತ ಆಸ್ಕರ್ 2025 ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಇದೇ ವರ್ಷ ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಚಿತ್ರ ವಿಮರ್ಶಕರ ಮೆಚ್ಚುಗೆಯ ಹೊರತಾಗಿಯೂ ಭಾರತದಲ್ಲಿ 21.11 ಕೋಟಿ ರೂಪಾಯಿ ಗಳಿಸಿದೆ.

Laapataa Ladies Is India's Official Entry for Oscars
ಆಸ್ಕರ್ ಪ್ರಶಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ''ಲಾಪತಾ ಲೇಡೀಸ್'' (Film Poster)

By ETV Bharat Karnataka Team

Published : Sep 23, 2024, 1:13 PM IST

Updated : Sep 23, 2024, 1:31 PM IST

ಹೈದರಾಬಾದ್: 97ನೇ ಅಕಾಡೆಮಿ ಪ್ರಶಸ್ತಿಗಳಿಗೆ ''ಲಾಪತಾ ಲೇಡೀಸ್'' ಭಾರತದಿಂದ ಅಧಿಕೃತ ಪ್ರವೇಶ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಿಸಿದೆ. ಈ ನಿರ್ಧಾರ ಚಿತ್ರದ ಅಸಾಧಾರಣ ಕಥಾಹಂದರ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಒತ್ತಿಹೇಳುತ್ತದೆ. ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಇತರೆ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರಗಳೊಂದಿಗೆ ಸ್ಪರ್ಧೆಗಿಳಿಯಲಿದೆ.

ಈಗಾಗಲೇ ಭಾರತದಲ್ಲಿ ಸಖತ್​​ ಸದ್ದು ಮಾಡಿರುವ ಈ ಚಿತ್ರ ಇದೀಗ ಆಸ್ಕರ್ ಪ್ರಶಸ್ತಿಯತ್ತ ಮುಖ ಮಾಡಿದೆ. ಈ ಕುರಿತು ಮಾಧ್ಯವದವರೊಂದಿಗೆ ಮಾತನಾಡಿದ ಕಿರಣ್ ರಾವ್, ಈ ಸಿನಿಮಾವನ್ನು ಏಕೆ ಆಯ್ಕೆ ಮಾಡಿಕೊಂಡರು? ಎಂಬುದನ್ನು ವಿವರಿಸಿದ್ದಾರೆ.

"ಕಥೆ ನನಗೆ ಕನೆಕ್ಟ್​​ ಆಯಿತು. ಪ್ರೊಜೆಕ್ಟ್​​ ಹಿಂದಿನ ಆಲೋಚನೆಯು ನನಗೆ ಸ್ಫೂರ್ತಿ ನೀಡಿತು. ಇಬ್ಬರು ಹುಡುಗಿಯರು ಕಳೆದುಹೋದರೆ, ಅವರಿಗೆ ಏನಾಗಬಹುದು? ಮತ್ತು ಅವರು ತಮ್ಮ ಬಗ್ಗೆ ಏನು ಕಲಿಯಬಹುದು?, ಏನು ಮಾಡಲಾರರು?, ಹೀಗೆ ಹಲವು ಯೋಚನೆಗಳು ಸ್ಕ್ರಿಪ್ಟ್​ ಓದಿದಾಗ ನನ್ನ ತಲೆಗೆ ಬಂತು. ಈ ಸ್ಕ್ರಿಪ್ಟ್ ನನಗೆ ಅನೇಕ ವಿಭಿನ್ನ ವಿಷಯಗಳನ್ನು ಅನ್ವೇಷಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಅನಿಸಿತು. ಹಾಗಾಗಿ ಈ ಸಿನಿಮಾ ಮಾಡೋಣ ಎಂದುಕೊಂಡೆ'' ಎಂದು ತಿಳಿಸಿದರು.

ಲಿಂಗ ಸಮಾನತೆ ಮೇಲೆ ಕೇಂದ್ರೀಕರಿಸಿರುವ ಈ ಚಿತ್ರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಟಿಐಎಫ್‌ಎಫ್) ಪ್ರಥಮ ಪ್ರದರ್ಶನಗೊಂಡು ವ್ಯಾಪಕ ಪ್ರಶಂಸೆ ಸ್ವೀಕರಿಸಿತ್ತು. ಚಿತ್ರದಲ್ಲಿ ರವಿ ಕಿಶನ್, ನಿತಾಂಶಿ ಗೋಯೆಲ್, ಪ್ರತಿಭಾ ರತ್ನ ಮತ್ತು ಸ್ಪರ್ಶ ಶ್ರೀವಾಸ್ತವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬ್ಲಾಕ್​ಬಸ್ಟರ್ ಅನಿಮಲ್ ಮತ್ತು ಆಟ್ಟಂ ಸೇರಿದಂತೆ ಇತರೆ 28 ಸಿನಿಮಾಗಳನ್ನು ಸೋಲಿಸಿ ಕಿರಣ್ ರಾವ್ ನಿರ್ದೇಶನದ ''ಲಾಪತಾ ಲೇಡೀಸ್'' ಚಿತ್ರವನ್ನು ಹಿರಿಯ ಫಿಲ್ಮ್ ಮೇಕರ್​​ ಜಾಹ್ನು ಬರುವಾ ನೇತೃತ್ವದ ತೀರ್ಪುಗಾರರ ತಂಡ ಆಯ್ಕೆ ಮಾಡಿದೆ.

ಇತ್ತೀಚೆಗಷ್ಟೇ ತಮ್ಮ ''ಲಾಪತಾ ಲೇಡೀಸ್'' ಆಸ್ಕರ್​​​ಗೆ ಪ್ರವೇಶಿಸಲಿದೆ ಎಂದು ನಿರ್ದೇಶಕಿ ಕಿರಣ್​ ರಾವ್​ ವಿಶ್ವಾಸ ವ್ಯಕ್ತಪಡಿಸಿದ್ದರು. ''ಆಸ್ಕರ್​​ಗೆ ನಮ್ಮ ಸಿನಿಮಾವನ್ನು ಪರಿಗಣಿಸಲಾಗುವುದು ಎಂದು ಭಾವಿಸುತ್ತೇನೆ. ನಮ್ಮ ಸಿನಿಮಾ ಆಸ್ಕರ್ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಬಹುದಿನಗಳ ಕನಸು. ಎಫ್‌ಎಫ್‌ಐ ಅತ್ಯುತ್ತಮ ಚಿತ್ರವನ್ನು ಮಾತ್ರ ಆಯ್ಕೆ ಮಾಡುತ್ತದೆ'' ಎಂದು ಅಭಿಪ್ರಾಯ ಹಂಚಿಕೊಂಡಿದ್ದರು.

ಇದನ್ನೂ ಓದಿ:'ರಜನಿಕಾಂತ್ ಸುಪ್ರೀಮ್ ಆಫ್ ಆಲ್ ಸ್ಟಾರ್ಸ್' ಎಂದ ಬಿಗ್​ ಬಿ: 'ಅಮಿತಾಭ್ ನೋಡಿ ಬಾಲಿವುಡ್​​ ನಕ್ಕ ದಿನ'ಇತ್ತೆಂದ ನಟ - Vettaiyan Prevue and Audio Launch

2010ರ 'ಧೋಬಿ ಘಾಟ್‌' ನಂತರ ಕಿರಣ್ ರಾವ್ ನಿರ್ದೇಶಿಸಿರುವ ಎರಡನೇ ಚಿತ್ರವಿದು. ಚಿತ್ರದ ಸಹ-ನಿರ್ಮಾಪಕ ಅಮೀರ್ ಖಾನ್ (ನಿರ್ದೇಶಕಿ ಕಿರಣ್​ ರಾವ್​ ಮಾಜಿ ಪತಿ) ಚಿತ್ರಕಥೆ ಬರೆಯುವ ಸ್ಪರ್ಧೆಯಲ್ಲಿ ಬಿಪ್ಲಬ್ ಗೋಸ್ವಾಮಿಯವರ ''Two Brides'' ಕಥೆಯನ್ನು ಕಂಡುಕೊಂಡರು. ನಂತರ ಸಿನಿಮಾ ನಿರ್ಮಾಣ ಆಯಿತು. ಮಧ್ಯಪ್ರದೇಶದ ಬಮುಲಿಯಾ ಮತ್ತು ಧಮನ್ಖೇಡ (ಧಂಖೇಡಿ) ಗ್ರಾಮಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ಥಳೀಯ ಗ್ರಾಮಸ್ಥರನ್ನು ಮತ್ತು ನಿಜವಾದ ಮನೆಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಆಸ್ಕರ್​ ಪ್ರಶಸ್ತಿ: ತಮ್ಮ ಚಿತ್ರಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕಿರಣ್​​ ರಾವ್​, ಪಾಯಲ್​ ಕಪಾಡಿಯಾ - Kiron Rao and Payal Kapadia

ಲಾಪತಾ ಲೇಡೀಸ್ ಇದೇ ವರ್ಷದ ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಯಶ್ ರಾಜ್ ಫಿಲ್ಮ್ಸ್ ಅದರ ಜಾಗತಿಕ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿತ್ತು. ಚಿತ್ರ ಏಪ್ರಿಲ್ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ವಿಮರ್ಶಕರ ಮೆಚ್ಚುಗೆಯ ಹೊರತಾಗಿಯೂ, ಚಿತ್ರ ತನ್ನ ಮೊದಲ ದಿನ 75 ಲಕ್ಷ ರೂ. ಗಳಿಸಿ ಬಾಕ್ಸ್ ಆಫೀಸ್​ ಪ್ರಯಾಣ ಪ್ರಅರಂಭಿಸಿತು. ಎರಡನೇ ದಿನ 1.45 ಕೋಟಿ ರೂ. ಮತ್ತು ಮೂರನೇ ದಿನ ರೂ 1.7 ಕೋಟಿ ರೂ. ಗಳಿಸಿತ್ತು. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ಪ್ರಕಾರ, ಈ ಚಿತ್ರ ಭಾರತದಲ್ಲಿ 21.11 ಕೋಟಿ ರೂ. ಗಳಿಸಿದೆ.

Last Updated : Sep 23, 2024, 1:31 PM IST

ABOUT THE AUTHOR

...view details