ಕರ್ನಾಟಕ

karnataka

ETV Bharat / entertainment

ಡಬಲ್ ಇಸ್ಮಾರ್ಟ್ ಚಿತ್ರದ 'ಕ್ಯಾ ಲಫ್ಡಾ' ಹಾಡು ರಿಲೀಸ್​​ - Kya Lafda Song - KYA LAFDA SONG

ರಾಮ್ ಪೋತಿನೇನಿ ಹಾಗೂ ಕಾವ್ಯಾ ಥಾಪರ್ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಡಬಲ್ ಇಸ್ಮಾರ್ಟ್'. ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದ ಪ್ರಚಾರ ಜೋರಾಗಿದ್ದು, 'ಕ್ಯಾ ಲಫ್ಡಾ' ಎಂಬ ಹಾಡು ಹೊರಬಂದಿದೆ.

Kya Lafda song poster
'ಕ್ಯಾ ಲಫ್ಡಾ' ಸಾಂಗ್​ ಪೋಸ್ಟರ್ (ETV Bharat)

By ETV Bharat Karnataka Team

Published : Jul 30, 2024, 2:18 PM IST

ಉಸ್ತಾದ್ ರಾಮ್ ಪೋತಿನೇನಿ. ಇವರು ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ನಟ. ಇವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಡಬಲ್ ಇಸ್ಮಾರ್ಟ್'. ಇಸ್ಮಾರ್ಟ್​​ ಶಂಕರ್​ 2019ರಲ್ಲಿ ತೆರೆಕಂಡಿತ್ತು. ಐದು ವರ್ಷಗಳ ಬಳಿಕ ಮತ್ತೊಂದು ಭಾಗ ಮೂಡಿಬರುತ್ತಿದ್ದು, ಸಿನಿಪ್ರಿಯರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಬಿಡುಗಡೆ ಹೊಸ್ತಿಲಿನಲ್ಲಿರುವ ಸಿನಿಮಾದ ಹಾಡು ಬಿಡುಗಡೆಯಾಗಿದೆ.

ಈ ಸಿನಿಮಾದ 'ಸ್ಟೆಪ್​ಮಾರ್' ಮತ್ತು 'ಮಾರ್ ಮುಂತಾ ಚೋಡ್ ಚಿಂತಾ' ಶೀರ್ಷಿಕೆಯ ಗಾನಬಜಾನ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರ ಮನ ಗೆದ್ದಿದೆ. ಇದೀಗ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

'ಕ್ಯಾ ಲಫ್ಡಾ' ರಿಲೀಸ್​: ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಭರ್ಜರಿ ಹಿಟ್ ಆಗಿವೆ. 'ಕ್ಯಾ ಲಫ್ಡಾ' ರೊಮ್ಯಾಂಟಿಕ್ ಸಾಂಗ್​ನಲ್ಲಿ ನಾಯಕ ಉಸ್ತಾದ್ ರಾಮ್ ಪೋತಿನೇನಿ ಹಾಗೂ ಕಾವ್ಯಾ ಥಾಪರ್ ಮಿಂಚಿದ್ದಾರೆ. ಈ ಹಾಡಿಗೆ ಸಂಗೀತ ನಿರ್ದೇಶಕ ಮಣಿ ಶರ್ಮಾ ಟ್ಯೂನ್ ಹಾಕಿದ್ದಾರೆ. ಶ್ರೀ ಹರ್ಷ ಇಮಾನಿ ಸಾಹಿತ್ಯ ಬರೆದಿದ್ದು, ಧನುಂಜಯ್ ಸೀಪಾನ ಮತ್ತು ಸಿಂಧೂಜಾ ಶ್ರೀನಿವಾಸನ್ ಧ್ವನಿಯಾಗಿದ್ದಾರೆ.

ಕನ್ನಡದಲ್ಲೂ ಬಿಡುಗಡೆಯಾಗಲಿದೆ ಸಿನಿಮಾ: ಸೌತ್ ಸಿನಿಮಾಗಳಲ್ಲಿ ಖಳನಾಯಕನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ವಿಲನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬಲ್ ಇಸ್ಮಾರ್ಟ್ ಬಿಡುಗಡೆಯಾಗಲಿದೆ. ಮಣಿ ಶರ್ಮಾ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ.ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ಚಿತ್ರತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ:ದುನಿಯಾ ವಿಜಯ್​​​ ಮುಖ್ಯಭೂಮಿಕೆಯ 'ಭೀಮ' ಟ್ರೇಲರ್​ ಅನಾವರಣಕ್ಕೆ ಮುಹೂರ್ತ ಫಿಕ್ಸ್ - Bheema Trailer

5 ವರ್ಷಗಳ ಬಳಿಕ ಪಾರ್ಟ್ 2: 2019ರ ಜುಲೈ 18ರಂದು 'ಇಸ್ಮಾರ್ಟ್ ಶಂಕರ್' ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಸಿನಿಮಾ ಕರ್ಮಷಿಯಲಿ ಸಕ್ಸಸ್​ ಕಂಡಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷಗಳ ಬ್ರೇಕ್​​ ಬಳಿಕ ಪಾರ್ಟ್ 2 - ಡಬಲ್ ಇಸ್ಮಾರ್ಟ್ ಮೂಡಿ ಬರುತ್ತಿದೆ.

ಇದನ್ನೂ ಓದಿ:ನನ್ನ ಹೆಸರ ಮುಂದೆ ಪತಿ ಅಮಿತಾಭ್​​​ ಹೆಸರೇಕೆ? ಪಾರ್ಲಿಮೆಂಟ್​ನಲ್ಲಿ ಜಯಾ ಬಚ್ಚನ್​ ಗರಂ - Jaya Bachchan

ಸೌತ್​ ಸಿನಿ ವಲಯದಲ್ಲಿ ಸಖತ್​​ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಆಗಸ್ಟ್​​ನಲ್ಲಿ ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಅನೇಕ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದರಂತೆ, ಈ ಚಿತ್ರ ಕೂಡ 15 ರಂದು ಬಿಡುಗಡೆ ಆಗಲಿದೆ. ವಿಶ್ವದಾದ್ಯಂತ ಬಿಡುಗಡೆ ಆಗಲಿರುವ 'ಡಬಲ್ ಇಸ್ಮಾರ್ಟ್' ಪ್ರಚಾರ ಈಗಾಗಲೇ ಶುರುವಾಗಿದೆ.

ABOUT THE AUTHOR

...view details