ಕರ್ನಾಟಕ

karnataka

ETV Bharat / entertainment

ಗಣೇಶ್‌ ನಟನೆಯ 'ಕೃಷ್ಣಂ ಪ್ರಣಯ ಸಖಿ'ಯ ಮೊದಲ ಹಾಡು ನಾಳೆ ರಿಲೀಸ್ - Krishnam Pranaya Sakhi - KRISHNAM PRANAYA SAKHI

ಮಾಲ್ ಆಫ್ ಮೈಸೂರಿನಲ್ಲಿ ನಾಳೆ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಚೊಚ್ಚಲ ಗೀತೆ ಬಿಡುಗಡೆಯಾಗಲಿದೆ.

Krishnam Pranaya Sakhi
'ಕೃಷ್ಣಂ ಪ್ರಣಯ ಸಖಿ' ಪೋಸ್ಟರ್, ಗಣೇಶ್ (ETV Bharat)

By ETV Bharat Karnataka Team

Published : May 24, 2024, 8:44 AM IST

ಸ್ಯಾಂಡಲ್​ವುಡ್​​ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿವಾಸರಾಜು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಈ ಚಿತ್ರದ ಚೊಚ್ಚಲ ಗೀತೆ ಮೈಸೂರಿನಲ್ಲಿ ನಾಳೆ (ಮೇ 25) ಅನಾವರಣಗೊಳ್ಳಲಿದೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ 6 ಸುಮಧುರ ಹಾಡುಗಳು ಕೃಷ್ಣಂ ಪ್ರಣಯ ಸಖಿಯಲ್ಲಿದೆ. ಆ ಪೈಕಿ ನಿಶಾನ್ ರಾಯ್ ಬರೆದು, ಚಂದನ್ ಶೆಟ್ಟಿ ಹಾಡಿರುವ ಮೊದಲ ಹಾಡಿನ ಬಗ್ಗೆ ಸಿನಿಪ್ರೇಮಿಗಳಿಗೆ ಸಾಕಷ್ಟು ಕುತೂಹಲವಿದೆ. ಈ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೂ ಚಾಲನೆ ಸಿಗಲಿದೆ.

ಗಣೇಶ್ ಸೋಶಿಯಲ್ ಮೀಡಿಯಾ​ ಪೋಸ್ಟ್: ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ಚಿತ್ರದ ಪೋಸ್ಟರ್​ ಹಂಚಿಕೊಂಡ ಗಣೇಶ್​​, 'ಈ ಶನಿವಾರ ನಿಮ್ಜೊತೆ ಮೈಸೂರಿನಲ್ಲಿ! 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೊದಲ ಗೀತೆಯ ಬಿಡುಗಡೆ ಮಾಲ್ ಆಫ್ ಮೈಸೂರ್​ನಲ್ಲಿ, ಸಂಜೆ 5:30ಕ್ಕೆ, ಬನ್ನಿ ಸಿಗೋಣ' ಎಂದು ಬರೆದುಕೊಂಡಿದ್ದಾರೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವನ್ನು ತ್ರಿಶೂಲ್ ಎಂಟರ್​ಟೈನ್ಮೆಂಟ್ ಅಡಿ ಪ್ರಶಾಂತ್ ಜಿ.ರುದ್ರಪ್ಪ ನಿರ್ಮಿಸಿದ್ದಾರೆ. ಮಾಳವಿಕ ನಾಯರ್ ನಾಯಕಿಯಾಗಿ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ:ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಟನೆಯ 'ಡೆವಿಲ್'​​ ಬಿಡುಗಡೆಗೆ ಮುಹೂರ್ತ ಫಿಕ್ಸ್ - Devil Release Date

ಕೃಷ್ಣಂ ಪ್ರಣಯ ಸಖಿ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಬೆಂಗಳೂರು, ವಿಯೆಟ್ನಾಂ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ:ಪುಷ್ಪ 2 ಚಿತ್ರದ ಎರಡನೇ ಸಿಂಗಲ್‌ನ ಅನೌನ್ಸ್‌ಮೆಂಟ್ ವಿಡಿಯೋ ಅನಾವರಣ - Pushpa 2 Songs

'ಕೃಷ್ಣಂ ಪ್ರಣಯ ಸಖಿ' ಗಣೇಶ್​ ಅಭಿನಯಿಸುತ್ತಿರುವ 41ನೇ ಸಿನಿಮಾ. ಹಲವು ಹಿಟ್​​ ಚಿತ್ರಗಳನ್ನು ಸ್ಯಾಂಡಲ್​ವುಡ್​ಗೆ ಕೊಟ್ಟಿರುವ ಗಣಿ,​​ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಪ್ರೇಮ್​ ಕಹಾನಿ ಸಿನಿಮಾಗಳಿಂದ ಜನಪ್ರಿಯರಾಗಿರುವ ಇವರ ಈ ಚಿತ್ರ ಕೂಡ ಲವ್​ ಸ್ಟೋರಿ ಎಂದು ಶೀರ್ಷಿಕೆಯೇ ಹೇಳುತ್ತಿದೆ. ಸಿನಿಮಾ ಹೇಗಿರಲಿದೆ? ಎಷ್ಟರ ಮಟ್ಟಿಗೆ ಗೆಲ್ಲುತ್ತದೆ? ಅನ್ನೋದನ್ನು ಕಾದು ನೋಡಬೇಕಿದೆ.

ABOUT THE AUTHOR

...view details