ಕರ್ನಾಟಕ

karnataka

ETV Bharat / entertainment

ಸಾಮಾಜಿಕ ಸಂದೇಶದ 'ಕೋಟಿ ಕೋಟಿ ರೊಕ್ಕ ಗಳಿಸಿ' ಗೀತೆ ಬಿಡುಗಡೆ - Koti Koti Rokka Galisi Song - KOTI KOTI ROKKA GALISI SONG

ಮಂಜುಕವಿ ಬರೆದು ಸಂಗೀತ ನೀಡಿರುವ 'ಕೋಟಿ ಕೋಟಿ ರೊಕ್ಕ ಗಳಿಸಿ' ಹಾಡಿಗೆ ಹೆಚ್.ಎಂ.ರಾಮಚಂದ್ರ (ಹೂಡಿ ಚಿನ್ನಿ) ದನಿಯಾಗಿದ್ದಾರೆ. ಇವರು ಸಾಮಾಜಿಕ ಕಾರ್ಯಗಳ ಮೂಲಕ ಜನಪ್ರಿಯರು. ಭಾರತೀಯ ಸೇವಾ ಸಮಿತಿ ಸ್ಥಾಪಕರೂ ಹೌದು.

Koti koti Rokka Galisi Song release
'ಕೋಟಿ ಕೋಟಿ ರೊಕ್ಕ ಗಳಿಸಿ ಗೀತೆ' ಅನಾವರಣ (ETV Bharat)

By ETV Bharat Entertainment Team

Published : Jul 31, 2024, 12:38 PM IST

ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ನಾಯಕ, ನಾಯಕಿ, ಪೋಷಕ ಕಲಾವಿದರಾಗಿ ಹೆಚ್ಚಿನವರು ಆಗಮಿಸಿದರೆ, ನಿರ್ದೇಶಕ, ಗಾಯಕ ಸೇರಿದಂತೆ ವಿವಿಧ ವಲಯಗಳಲ್ಲೂ ನವ ಪ್ರತಿಭೆಗಳು ಬರುತ್ತಿದ್ದಾರೆ. ಈ ಸಾಲಿಗೀಗ ಹೆಚ್.ಎಂ.ರಾಮಚಂದ್ರ ಹೊಸ ಸೇರ್ಪಡೆ. 'ಕೋಟಿ ಕೋಟಿ ರೊಕ್ಕ ಗಳಿಸಿ' ಶೀರ್ಷಿಕೆಯ ಹಾಡಿಗೆ ಇವರು ದನಿಯಾಗಿದ್ದು, ಗೀತೆ ಇತ್ತೀಚೆಗೆ ರಿಲೀಸ್ ಆಗಿದೆ.

ಸಾಮಾಜಿಕ ಸಂದೇಶದ ಗೀತೆ:ಹೆಚ್.ಎಂ.ರಾಮಚಂದ್ರ (ಹೂಡಿ ಚಿನ್ನಿ) ಅವರೀಗ ಗಾಯಕ ಕೂಡಾ ಹೌದು. ಮಂಜುಕವಿ ಬರೆದು ಸಂಗೀತ ನೀಡಿರುವ 'ಕೋಟಿ ಕೋಟಿ ರೊಕ್ಕ ಗಳಿಸಿ' ಹಾಡಿಗೆ ಇವರು ಧ್ವನಿಯಾಗಿದ್ದಾರೆ. ವಿನು ಮನಸು ವಾದ್ಯ ಸಂಯೋಜಿಸಿದ್ದಾರೆ. ಇದೊಂದು ಸಾಮಾಜಿಕ ಸಂದೇಶ ಸಾರುವ ಗೀತೆಯಾಗಿದೆ.

'ಕೋಟಿ ಕೋಟಿ ರೊಕ್ಕ ಗಳಿಸಿ' ಗೀತೆ ಅನಾವರಣ ಕಾರ್ಯಕ್ರಮದಲ್ಲಿ ಗಣ್ಯರು (ETV Bharat)

ಇತ್ತೀಚೆಗೆ ಹಾಡು ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಶ್ರೀಮಹದೇವ ಸ್ವಾಮೀಜಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ನಟ ಚೇತನ್ ಅಹಿಂಸಾ, ನಿರ್ದೇಶಕ ಋಷಿ, ಭಾರತೀಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಅಮರ್ ಕಾರ್ಯಕ್ರಮದಲ್ಲಿದ್ದರು.

'ಕೋಟಿ ಕೋಟಿ ರೊಕ್ಕ ಗಳಿಸಿ' ತಂಡ (ETV Bharat)

ಈ ಹಾಡಿನಲ್ಲಿರುವ ಸಾಹಿತ್ಯಕ್ಕೂ ಹಾಗೂ ಹೂಡಿ ಚಿನ್ನಿ ಅವರ ಗುಣಕ್ಕೂ ಹೊಂದಾಣಿಕೆ ಆಗುತ್ತದೆ. ಹಾಗಾಗಿ ಹಾಡನ್ನು ಅವರಿಂದಲೇ ಹಾಡಿಸಬೇಕೆನಿಸಿತು. ಅವರು ಮೊದಲು ಒಪ್ಪಲಿಲ್ಲ. ಆ ನಂತರ ಅಭ್ಯಾಸ ಮಾಡಿ ಹಾಡಿದ್ದಾರೆ. ಎಂ.ಕೆ.ಆಡಿಯೋ ಯೂಟ್ಯೂಬ್ ಚಾನಲ್​​ನಲ್ಲಿ ಹಾಡು ಕೇಳಿ ಆನಂದಿಸಿ ಎಂದು ಮಂಜುಕವಿ ತಿಳಿಸಿದರು.

ಇದನ್ನೂ ಓದಿ:ಮುಂಬೈನಲ್ಲಿ ಆ.5ರಂದು 'ಮಾರ್ಟಿನ್' ಸಿನಿಮಾದ ಟ್ರೈಲರ್‌ ರಿಲೀಸ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳಿದ್ದೇನು? - Martin Movie update

ಎಲ್ಲ ಗಣ್ಯರಿಗೂ ಶರಣೆಂದು ಮಾತು ಆರಂಭಿಸಿದ ಹೂಡಿ ಚಿನ್ನಿ, "ಮಂಜುಕವಿ ಬರೆದಿರುವ ಈ ಹಾಡು ಎಲ್ಲರ ಮನ ಮುಟ್ಟುವಂತಿದೆ. ಗೀತೆಯನ್ನು ನೀವೇ ಹಾಡಿ ಅಂದಾಗ ನಾನು ಬೇಡ, ಬೇರೆ ಜನಪ್ರಿಯ ಗಾಯಕರು ಹಾಡಲಿ ಎಂದಿದ್ದೆ. ಆದರೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಭ್ಯಾಸ ಮಾಡಿ ಹಾಡಿದ್ದೇನೆ. ಇದೊಂದು ಸಾಮಾಜಿಕ ಸಂದೇಶ ಸಾರುವ ಗೀತೆ. ಕೇಳುಗರಿಗೆ ಇಷ್ಟವಾಗಲಿದೆ" ಎಂದರು.

ಇದನ್ನೂ ಓದಿ:ಆ.1ಕ್ಕೆ 'ಪೌಡರ್​' ಪಾರ್ಟಿ: ದಿಗಂತ್​ ಚಿತ್ರತಂಡದಿಂದ ಆಹ್ವಾನ - Powder Party

ABOUT THE AUTHOR

...view details