ಕನ್ನಡತಿ ಸೀರಿಯಲ್ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ಸದ್ಯ ಕಿರುತೆರೆಗೆ ಸಣ್ಣ ಬ್ರೇಕ್ ಕೊಟ್ಟು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ 'ಮೇಘ'. ಚರಣ್ ನಿರ್ದೇಶನದ ಮೇಘ ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ.
ಇತ್ತೀಚೆಗೆ ಚಿತ್ರತಂಡ ಆಫೀಶಿಯಲ್ ಟ್ರೇಲರ್ ಅನಾವರಣಗೊಳಿಸಿದೆ ತ್ರಿವಿಕ್ರಮ ಸಾಫಲ್ಯ ಅವರು ಮೇಘ ಟ್ರೇಲರ್ ಬಿಡುಗಡೆ ಮಾಡಿ ಸಿನಿಮಾ ಯಶ ಕಾಣಲೆಂದು ಶುಭ ಹಾರೈಸಿದರು. ಟ್ರೇಲರ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಮೇಲೆ ನಟ ಕಿರಣ್ ಒಂದಿಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಏನಿದು ಮೇಘಸ್ಕ್ವೇರ್:ನಿರ್ದೇಶಕ ಚರಣ್ ಮಾತನಾಡಿ, ಮೇಘ ಚಿತ್ರ ಉತ್ತಮ ಮನೋರಂಜನೆಯೊಂದಿಗೆ ಕೂಡಿದ ಕೌಟುಂಬಿಕ ಚಿತ್ರ. ಈ ಪರಿಶುದ್ಧ ಪ್ರೇಮ ಕಥಾನಕದ ವಿಶೇಷವೆಂದರೆ ನಾಯಕನ ಹೆಸರು "ಮೇಘ". ನಾಯಕಿಯ ಹೆಸರು " ಮೇಘ". ಇಬ್ಬರ ಹೆಸರು "ಮೇಘ" ಏಕೆ? ಎಂಬುದು ಚಿತ್ರ ನೋಡಿದಾಗ ತಿಳಿಯುವುದು. ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆ ಈ ಕಥೆಗೆ ಸ್ಪೂರ್ತಿ. ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಸಿನಿಮಾ ನೋಡುವ ಪ್ರೇಕ್ಷಕನಿಗೆ ನಿರಾಸೆ ಮಾಡೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೋಶ್ಗಿಂತ ಅನುಭವ ಮುಖ್ಯ:ಬಳಿಕ ನಟ ಕಿರಣ್ ರಾಜ್ ಮಾತನಾಡಿ, ನಾನು ಈ ಚಿತ್ರದ ಕಥೆಯನ್ನು ಎಂಟು ಬಾರಿ ಕೇಳಿದ್ದೆ. ಆನಂತರ ನಟಿಸಲು ಒಪ್ಪಿಕೊಂಡೆ. ಪ್ರೀತಿಯಲ್ಲಿ ಜೋಶ್ಗಿಂತ ಅನುಭವ ಮುಖ್ಯ. ತಂದೆ ತಾಯಿ ಹಾಗೂ ಮಕ್ಕಳಲ್ಲಿ ಉತ್ತಮ ಬಾಂಧವ್ಯ ಇದ್ದರೆ ಎಷ್ಟೋ ಅನಾಹುತಗಳನ್ನು ತಡೆಯಬಹುದು. ಈ ರೀತಿಯ ಹಲವು ವಿಷಯಗಳನ್ನು "ಮೇಘ" ಚಿತ್ರದಲ್ಲಿ ನಿರ್ದೇಶಕರು ಸುಂದರವಾಗಿ ನಿರೂಪಿಸಿದ್ದಾರೆ. ಈ ಚಿತ್ರ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ನನ್ನ ಹೆಸರು "ಮೇಘ" ಎಂದರು ನಾಯಕಿ ಕಾಜಲ್ ಕುಂದರ್ ಹೇಳಿದರು.