ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡ ನಟ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ, ಪೈಲ್ವಾನ್, ಹೆಬ್ಬುಲಿ ಹೀಗೆ ಹಲವಾರು ಬಿರುದುಗಳಿಂದ ಕರೆಯಿಸಿಕೊಳ್ಳುವ ಸುದೀಪ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 51ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್, ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ ಹಾಗೂ ತಂದೆ-ತಾಯಿ ಜೊತೆ ಕೇಕ್ ಕತ್ತರಿಸಿ ಹುಟ್ಟಿದ ದಿನವನ್ನು ಆಚರಿಸಿಕೊಂಡರು.
ಹುಟ್ಟುಹಬ್ಬ ದಿನದಂದು ಅಭಿಮಾನಿಗಳು ಯಾರೂ ಮನೆ ಹತ್ತಿರ ಬರುವುದು ಬೇಡ, ಸೆಪ್ಟೆಂಬರ್ 2ರಂದು ನಾನೇ ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಬೆಳಗ್ಗೆ 10ರಿಂದ 12 ಗಂಟೆವರೆಗೂ ಸಿಗುತ್ತೇನೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದ್ದರು. ಆದರೂ ಜೆ.ಪಿ.ನಗರದ ಪುಟ್ಟೇನಹಳ್ಳಿ ನಿವಾಸದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳನ್ನು ವಾಪಸ್ ಕಳಿಸುವುದು ಬೇಡ ಎಂದು, ಸುದೀಪ್ ರಾತ್ರಿಯೇ ಫ್ಯಾನ್ಸ್ಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.
ಸುದೀಪ್ ಹುಟ್ಟುಹಬ್ಬಕ್ಕೆ 'ಬಿಲ್ಲ ರಂಗ ಭಾಷ', 'ಮ್ಯಾಕ್ಸ್' ಚಿತ್ರದ ಮೊದಲ ಹಾಡು, ತಮಿಳು ಪ್ರೊಡಕ್ಷನ್ ಸತ್ಯಜ್ಯೋತಿ ನಿರ್ಮಾಣ ಸಂಸ್ಥೆಯ ಸಿನಿಮಾಗಳು ಘೋಷಣೆಯಾಗಲಿವೆ. 'ಬಿಲ್ಲ ರಂಗ ಭಾಷ' ಮಾಸ್ ಎಂಟರ್‌ಟೈನ್ಮೆಂಟ್ ಚಿತ್ರ. ಪಾಚೀನ ಕಾಲದ ರಾಜನೊಬ್ಬನ ಕಥೆಯನ್ನು ಆಧರಿಸಿದೆ. ಸುದೀಪ್ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅನೂಪ್ ಈ ಕಥೆಯನ್ನು 18 ವರ್ಷಗಳ ಹಿಂದೆಯೇ ಸಿದ್ಧಮಾಡಿಕೊಂಡಿದ್ದರಂತೆ. ಪತ್ನಿ ಪ್ರಿಯಾ ಸುದೀಪ್ ಬ್ಯಾನರ್ ಸುಪ್ರಿಯಾನ್ವಿ ಪ್ರೊಡಕ್ಷನ್ ಚಿತ್ರ ನಿರ್ಮಾಣ ಮಾಡಲಿದೆ.