ಹೈದರಾಬಾದ್: ಟಾಲಿವುಡ್ನಲ್ಲಿ ಯಶಸ್ಸು ಪಡೆದಿರುವ ನಟಿಯರಾದ ಕೀರ್ತಿ ಸುರೇಶ್ ಮತ್ತು ರಾಶಿ ಖನ್ನಾ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂದು ತಮ್ಮ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ 'ಮಹಾನಟಿ' ಕಂದು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ನಟಿ ರಾಶಿ ಖನ್ನಾ ಕೂಡ ವಿಮಾನ ನಿಲ್ದಾಣದಲ್ಲಿ ಪ್ಯಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ನಟ ಜಾನ್ ಅಬ್ರಹಾಂ ಜೊತೆ 'ಮದ್ರಾಸ್ ಕೆಫೆ' ಸಿನಿಮಾದ ಮೂಲಕ ಮೊದಲ ಬಾರಿ ಬಾಲಿವುಡ್ ಪ್ರವೇಶಿಸಿದ ನಟಿ ರಾಶಿ, ತೆಲುಗಿನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದು, 'ಫರ್ಜಿ' ವೆಬ್ ಸೀರಿಸ್ ಮೂಲಕ ದೊಡ್ಡ ಹಿಟ್ ಪಡೆದರು. ವಿಮಾನ ನಿಲ್ದಾಣದಲ್ಲಿ ಈ ತಾರೆ ಹಸಿರು ಬಣ್ಣದ ಟಾಪ್ಗೆ ಬಿಳಿ ಬಣ್ಣದ ಟ್ರೌಜರ್ ತೊಟ್ಟಿದ್ದು, ಎಂದಿನಂತೆ ಪ್ಯಾಪರಾಜಿಗಳತ್ತ ಮುಗುಳ್ನಗುತ್ತ ವಿಮಾನ ನಿಲ್ದಾಣ ಪ್ರವೇಶಿಸಿದರು.
ಇತ್ತ, ನಟ ವರುಣ್ ಧವನ್ಗೆ ಬೇಬಿ ಜಾನ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಲು ಸಿದ್ಧವಾಗಿರುವ ನಟಿ ಕೀರ್ತಿ ಸುರೇಶ್, ಸಂಭ್ರಮದಿಂದ ವಿಮಾನ ನಿಲ್ದಾಣದಲ್ಲಿ ಕಂಡರು. ಕಂದು ಬಣ್ಣದ ಉಡುಗೆಗೆ ಕ್ರೀಮ್ ಬಣ್ಣದ ಓವರ್ಕೋಟ್ ಮೂಲಕ ಗಮನ ಸೆಳೆದರು. ಇದೇ ವೇಳೆ ನಟಿ ಹಲವರೊಂದಿಗೆ ಸೆಲ್ಫಿಗೂ ಸ್ಮೈಲ್ ಮಾಡಿದರು.