ಕರ್ನಾಟಕ

karnataka

ETV Bharat / entertainment

ಚಂದು ಚಾಂಪಿಯನ್‌ ಪೋಸ್ಟರ್​: ದೈಹಿಕ ರೂಪಾಂತರಕ್ಕೆ ಒಳಗಾದ ಕಾರ್ತಿಕ್ ಆರ್ಯನ್ - Chandu Champion Poster - CHANDU CHAMPION POSTER

ಕಾರ್ತಿಕ್ ಆರ್ಯನ್ ನಟನೆಯ ಚಂದು ಚಾಂಪಿಯನ್‌ ಚಿತ್ರದಿಂದ ಪೋಸ್ಟರ್ ಅನಾವರಣಗೊಂಡಿದೆ.

Chandu Champion Poster
ಚಂದು ಚಾಂಪಿಯನ್‌ ಪೋಸ್ಟರ್ (Instagram)

By ETV Bharat Karnataka Team

Published : May 15, 2024, 2:39 PM IST

ಬಾಲಿವುಡ್​​ ಯಂಗ್​ ಸ್ಟಾರ್ ಕಾರ್ತಿಕ್ ಆರ್ಯನ್ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಚಂದು ಚಾಂಪಿಯನ್‌'. ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿಂದು ಹಂಚಿಕೊಂಡಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾದ ಪ್ರಚಾರ ಪ್ರಾರಂಭವಾಗಿದ್ದು, ಇಂದು ಅನಾವರಣಗೊಂಡಿರುವ ಪೋಸ್ಟರ್​​ ವ್ಯಾಪಕವಾಗಿ ಗಮನ ಸೆಳೆದಿದೆ.

ಪೋಸ್ಟರ್​​ನಲ್ಲಿ ನಟ ತಮ್ಮ ಅಥ್ಲೆಟಿಕ್ ದೇಹವನ್ನು ಪ್ರದರ್ಶಿಸಿದ್ದಾರೆ. ಚಂದು ಚಾಂಪಿಯನ್‌ ಚಿತ್ರಕ್ಕಾಗಿ ಕಾರ್ತಿಕ್​​ ಗಮನಾರ್ಹ ರೂಪಾಂತರಕ್ಕೆ ಒಳಗಾಗಿರೋದನ್ನು, ಕಠಿಣ ತಯಾರಿ ನಡೆಸಿರೋದನ್ನು ಈ ಪೋಸ್ಟರ್ ಸ್ಪಷ್ಟಪಡಿಸಿದೆ.

ಅತ್ಯಂತ ಸವಾಲಿನ ಪಾತ್ರ: ಚಂದು ಚಾಂಪಿಯನ್ ಮೊದಲ ಪೋಸ್ಟರ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟ, "ಚಾಂಪಿಯನ್ ಬರುತ್ತಿದ್ದಾನೆ. ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ವಿಶೇಷ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ, ಹೆಮ್ಮೆಯಾಗುತ್ತಿದೆ. ಜೂನ್​​ 14ಕ್ಕೆ ಚಂದು ಚಾಂಪಿಯನ್​ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.

ಕಟ್ಟುಮಸ್ತಾದ ಮೈಕಟ್ಟು: ಚಂದು ಚಾಂಪಿಯನ್‌ ಪೋಸ್ಟರ್‌ನಲ್ಲಿ, ಕಾರ್ತಿಕ್ ಅವರ ಕಟ್ಟುಮಸ್ತಾದ ಮೈಕಟ್ಟು ಕಾಣಿಸುತ್ತದೆ. ಮೈಮೇಲೆ ಮಣ್ಣಿದ್ದು, ಓಟಕ್ಕಿತ್ತಿದ್ದಾರೆ. ನಟನ ಮೈಕಟ್ಟು, ಪಾತ್ರದ ಮೇಲಿನ ಅವರ ಸಮರ್ಪಣೆಯನ್ನು ಈ ಫೋಟೋ ಸಾಬೀತುಪಡಿಸಿದೆ.

ಇದನ್ನೂ ಓದಿ:'ಭಾವನೆಗಳನ್ನು ಗೌರವಿಸಿ': ಟ್ರೋಲಿಗರಿಗೆ ಗಾಯಕ ಪ್ರಕಾಶ್ ಕುಮಾರ್ ಮನವಿ - Prakash Saindhavi Divorce

ಕಾರ್ತಿಕ್ ಅವರ ಈ ಪೋಸ್ಟರ್ ಹೊರಬಿದ್ದ ತಕ್ಷಣ, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಶುರುಮಾಡಿಕೊಂಡಿದ್ದಾರೆ. ನಟನ ಇನ್‌ಸ್ಟಾಗ್ರಾಮ್​ನ ಕಾಮೆಂಟ್​​ ಸೆಕ್ಷನ್​​ ಮೆಚ್ಚುಗೆಯ ಸಂದೇಶಗಳಿಂದ ತುಂಬಿದೆ. ಅವರ ದೈಹಿಕ ರೂಪಾಂತರ ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಪೋಸ್ಟರ್​​ಗೆ ಪ್ರತಿಕ್ರಿಯಿಸಿದ ನೆಟ್ಟಿಗರೋರ್ವರು, "ಒಂದು ನಿಮಿಷಕ್ಕೆ ಗುರುತಿಸಲಾಗಲಿಲ್ಲ, ಆದರೆ ವ್ಹಾವ್​" ಎಂದು ತಿಳಿಸಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "ಪರಿವರ್ತನೆ ಅವಾಸ್ತವಿಕವಾಗಿದೆ!" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೀಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಹುಮಾ ಖುರೇಷಿ, ಭೂಮಿ ಪೆಡ್ನೇಕರ್ ಮತ್ತು ನಿಮ್ರತ್ ಕೌರ್ ಅವರಂತಹ ಸೆಲೆಬ್ರಿಟಿಗಳು ಸಹ ಕಾರ್ತಿಕ್ ಅವರ ಅದ್ಭುತ ಚಿತ್ರಣವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ವರ್ಷದ ಬಳಿಕ ಸಿಹಿ ಸವಿದ ಕಾರ್ತಿಕ್ ಆರ್ಯನ್: ಸಿನಿಮಾ, ಫಿಟ್ನೆಸ್​ ಸುಲಭದ ಮಾತಲ್ಲ

ಕಬೀರ್ ಖಾನ್ ಆ್ಯಕ್ಷನ್​ ಕಟ್​ ಹೇಳಿರುವ ಈ ಚಂದು ಚಾಂಪಿಯನ್, ಓರ್ವ ಕ್ರೀಡಾಪಟುವಿನ ನೈಜ ಕಥೆಯನ್ನು ಬಿಚ್ಚಿಡುವ ಭರವಸೆ ನೀಡಿದೆ. ಈ ಪಾತ್ರಕ್ಕಾಗಿ ಕಾರ್ತಿಕ್ ಅವರ ಪ್ರಯಾಣ ಗಮನಾರ್ಹವಾದದ್ದು. ಪಾತ್ರ ಪ್ರವೇಶಿಸಲು ಬೆರಗುಗೊಳಿಸುವಂತಹ ದೈಹಿಕ ರೂಪಾಂತರಕ್ಕೆ ಒಳಗಾದರು. ಅಲ್ಲದೇ ಅನುಭವಿ ಭಾಷಾ ತರಬೇತುದಾರನ ಮಾರ್ಗದರ್ಶನದಲ್ಲಿ ಮರಾಠಿಯ ಸೂಕ್ಷ್ಮ ವ್ಯತ್ಯಾಸಗಳನ್ನು ಸಹ ಕರಗತ ಮಾಡಿಕೊಂಡರು. ಚಿತ್ರದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರ ಸಮರ್ಪಣೆ ವರ್ಣನಾತೀತವಾಗಿದೆ. ಜೂನ್ 14 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ABOUT THE AUTHOR

...view details