ಕಳೆದ ಮೂರು ತಿಂಗಳು ಚುನಾವಣಾ ಪ್ರಚಾರದ ಸಲುವಾಗಿ ಸುದ್ದಿಯಲ್ಲಿದ್ದ ಹ್ಯಾಟ್ರಿಕ್ ಹೀರೋ ಅವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಗಮನ ಹರಿಸಿದ್ದಾರೆ. ನಟನ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿದ್ದು, ಮುಂದಿನ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಶಿವಣ್ಣ ಸೇರಿ ಚಿತ್ರತಂಡ ಕೂಡ ಅದೇ ನಿಟ್ಟಿನಲ್ಲಿ ಕೆಲಸ ಮುಂದುವರಿಸಿದ್ದಾರೆ. ಇದೀಗ ಕರುನಾಡ ಚಕ್ರವರ್ತಿಯ ಹೊಸ ಪ್ರೊಜೆಕ್ಟ್ವೊಂದರ ಬಗ್ಗೆ ಕೊಂಚ ಮಾಹಿತಿ ಹೊರಬಿದ್ದಿದೆ.
ಗೀತಾ ಶಿವರಾಜ್ಕುಮಾರ್ಗೆ ಶುಭ ಕೋರಿದ ಚಿತ್ರತಂಡ (ETV Bharat) ಕನ್ನಡ ಚಿತ್ರರಂಗದ ನಿರ್ಮಾಪಕರ ಫೇವರಿಟ್ ಹೀರೋ ಶಿವರಾಜ್ಕುಮಾರ್ ಸದ್ಯ ಭೈರತಿ ರಣಗಲ್ ಹಾಗೂ ಅರ್ಜುನ್ ಜನ್ಯ ನಿರ್ದೇಶನದ '45' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಹೆಸರಿಡದ ಸಾಲು ಸಾಲು ಸಿನಿಮಾಗಳು ನಟನ ಬಳಿ ಇದೆ. ಈ ಚಿತ್ರಗಳ ಪೈಕಿ ಒಂದರ ಅಪ್ಡೇಟ್ ಅನ್ನು ಚಿತ್ರತಂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಾರ್ತಿಕ್ ಅದ್ವೈತ್ ಎರಡನೇ ಸಿನಿಮಾ: ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶಿವರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಕಾರ್ತಿಕ್ ಅದ್ವೈತ್. ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ಪಾಯುಮ್ ಒಲಿ ನೀ ಎನಕ್ಕು ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೀಗ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿರುವ ಇವರಿಗೆ ನಿರ್ದೇಶಕನಾಗಿ ಎರಡನೇ ಸಿನಿಮಾ.
ಆಗಸ್ಟ್ನಲ್ಲಿ ಸಿನಿಮಾದ ಮುಹೂರ್ತ: ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸದ್ಯ ಮ್ಯೂಸಿಕ್ ವರ್ಕ್ ಭರದಿಂದ ಸಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ. ಇತರ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಚಿತ್ರೀಕರಣಕ್ಕೆ ತೆರಳು ಎದುರು ನೋಡುತ್ತಿದೆ ಚಿತ್ರತಂಡ. ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.
ಇದನ್ನೂ ಓದಿ:ಪ್ರಭಾಸ್ ಮುಖ್ಯಭೂಮಿಕೆಯ 'ಕಲ್ಕಿ 2898 ಎಡಿ' ಫೈನಲ್ ಟ್ರೇಲರ್ಗೆ ಫ್ಯಾನ್ಸ್ ಫಿದಾ - Kalki 2898 AD new Trailer
ಸದ್ಯ ಬಿಡುಗಡೆಗೆ ಸಜ್ಜಾಗುತ್ತಿರುವ ಶಿವರಾಜ್ಕುಮಾರ್ ಅವರ ಚಿತ್ರ 'ಭೈರತಿ ರಣಗಲ್'. ಶೀರ್ಷಿಕೆಯಿಂದಲೇ ಸದ್ದು ಮಾಡಿರುವ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. 'ಮಫ್ತಿ' ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ. ಆದರೆ, ಸಿನಿಮಾ ಆಗಸ್ಟ್ಗೆ ಬಿಡುಗಡೆಯಾಗೋದು ಡೌಟ್ ಎಂಬ ವಿಚಾರ ಇತ್ತೀಚೆಗಷ್ಟೇ ಕೇಳಿಬಂತು. ಅದಾಗ್ಯೂ, ಚಿತ್ರತಂಡ ದಿನಾಂಕ ಬದಲಾಯಿಸಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಇದನ್ನೂ ಓದಿ:ಒಟಿಟಿಯಲ್ಲಿ ಸದ್ದಿಲ್ಲದೇ ಸುದ್ದಿ ಮಾಡ್ತಿದೆ 'ಪಿ.ಟಿ ಸರ್': ಅಷ್ಟಕ್ಕೂ ಏನಿದೆ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ?