ಕರ್ನಾಟಕ

karnataka

ETV Bharat / entertainment

ರಿಷಬ್​ ಶೆಟ್ಟಿ ಸಿನಿಮಾದಲ್ಲಿ ಬಾಹುಬಲಿ​​ ಸ್ಟಾರ್​?: ಇಂಟ್ರೆಸ್ಟಿಂಗ್​​ ಫೋಟೋ ಹಂಚಿಕೊಂಡ 'ಜೈ ಹನುಮಾನ್​' ನಿರ್ದೇಶಕ - JAI HNUMAN MOVIE

ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ''ಜೈ ಹನುಮಾನ್'' ಚಿತ್ರದಲ್ಲಿ ಬಾಹುಬಲಿ​​ ಸ್ಟಾರ್​ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

Rishabh Shetty starrer Jai Hnuman
ರಿಷಬ್​ ಶೆಟ್ಟಿ ಅಭಿನಯದ 'ಜೈ ಹನುಮಾನ್​' ಪೋಸ್ಟರ್ (Film Poster, ETV Bharat)

By ETV Bharat Entertainment Team

Published : Nov 5, 2024, 6:43 PM IST

ಪ್ರಶಾಂತ್ ವರ್ಮಾ ಹಾಗೂ ತೇಜ ಸಜ್ಜಾ ಕಾಂಬಿನೇಶನ್​​ನಲ್ಲಿ ಇದೇ ಸಾಲಿನಲ್ಲಿ ಬಂದ 'ಹನುಮಾನ್​'​​ ಸಿನಿಮಾ ಸೂಪರ್​ ಹಿಟ್​ ಆಗಿದೆ. ಕೊನೆವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಿನಿಮಾ ಯಶ ಕಂಡಿದ್ದು, ಇದೀಗ ಸಿನಿಮಾದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರಕ್ಕೆ ಸ್ಯಾಂಡಲ್​ವುಡ್​ನ ಡಿವೈನ್​ ಸ್ಟಾರ್​​ ರಿಷಬ್​ ಶೆಟ್ಟಿ ಹೀರೋ ಅನ್ನೋದು ವಿಶೇಷ. ಇದೀಗ ಈ ಸಿನಿಮಾದಲ್ಲಿ ಬಾಹುಬಲಿ​​ ಸ್ಟಾರ್ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ನಿರ್ದೇಶಕರ ಸೋಷಿಯಲ್​ ಮೀಡಿಯಾ ಪೋಸ್ಟ್​ ಕಾರಣ.

'ಜೈ ಹನುಮಾನ್​'ಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವ ಪ್ರಶಾಂತ್​ ವರ್ಮಾ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಇಂಟ್ರೆಸ್ಟಿಂಗ್​​ ಫೋಟೋ ಶೇರ್​ ಮಾಡಿದ್ದಾರೆ. ರಿಷಬ್​ ಶೆಟ್ಟಿ, ರಾಣಾ ದಗ್ಗುಬಾಟಿ, ಪ್ರಶಾಂತ್ ವರ್ಮಾ ಕ್ರಮವಾಗಿ ಕುಳಿತಿರುವ ಕ್ಷಣವಿದು. ಮೂವರೂ ಸಖತ್​ ಫ್ರೆಂಡ್ಲಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಸ್ಟ್​​ಗೆ, ಜೈ ಹನುಮಾನ್ ಎಂಬ ಕ್ಯಾಪ್ಷನ್​​ ಕೊಡಲಾಗಿದೆ. ಹಾಗಾಗಿ, ಈ ಬಹುನಿರೀಕ್ಷಿತ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ. ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಊಹಾಪೋಹಗಳು ಜೋರಾಗಿವೆ. ಸಿನಿಮಾ ಕಾಸ್ಟ್ ಬಗ್ಗೆ ಅಭಿಮಾನಿಗಳು, ಸಿನಿಪ್ರಿಯರು, ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ​

ಇದನ್ನೂ ಓದಿ:ಹನುಮಾನ್ ಪಾತ್ರದಲ್ಲಿ ರಿಷಬ್​ ಶೆಟ್ಟಿ: ಟಾಲಿವುಡ್​ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ

ತೆಲುಗು ಚಿತ್ರರಂಗದಿಂದ ಮೂಡಿಬಂದ ಹನುಮಾನ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದು ಬಾಕ್ಸ್ ಆಫೀಸ್​​​​ನಲ್ಲಿ ಸಖತ್​​ ಸದ್ದು ಮಾಡಿತ್ತು. ತೇಜ ಸಜ್ಜ ಮುಖ್ಯಭೂಮಿಕೆಯ ಚಿತ್ರಕ್ಕೆ ಪ್ರಶಾಂತ್​ ವರ್ಮಾ ಆ್ಯಕ್ಷನ್​ ಕಟ್​​ ಹೇಳಿದ್ದು, ಇದೇ ಸಾಲಿನ ಜನವರಿ 12ರಂದು ಬಿಡುಗಡೆ ಆಗಿತ್ತು. ಇತ್ತೀಚೆಗೆ ದೀಪಾವಳಿ ಸಂದರ್ಭ ಸೀಕ್ವೆಲ್​ ಅನೌನ್ಸ್ ಆಗಿ, ಫಸ್ಟ್ ಲುಕ್ ಪೋಸ್ಟರ್​ ಸಹ ಅನಾವರಣಗೊಂಡಿತ್ತು. ಬ್ಲಾಕ್​​ಬಸ್ಟರ್​ ಕಾಂತಾರದ ಶಿವ ಹನುಮಾನ್ ಸಿನಿಮಾದ ಸೀಕ್ವೆಲ್​​​ನಲ್ಲಿ ಹನುಮಾನ್​​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅನಾವರಣಗೊಂಡಿರುವ ಚಿತ್ರದ ಪೋಸ್ಟರ್​​ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ರಿಷಬ್​ ಶೆಟ್ಟಿ ಸಮರ್ಪಣೆ, ರೂಪಾಂತರ, ಪರಿಪೂರ್ಣತೆ, ಬದ್ಧತೆಗೆ ಸಾಟಿಯಿಲ್ಲ: 'ಜೈ ಹನುಮಾನ್'​​ ನಿರ್ದೇಶಕನಿಂದ ಪ್ರಶಂಸೆ

ಫಸ್ಟ್​ ಲುಕ್​ ಪೋಸ್ಟರ್​ನಲ್ಲಿ, ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ಶೆಟ್ಟಿ ಹನುಮಾನ್ ಅವತಾರದಲ್ಲಿ ಸಖತ್ ಪವರ್​​ಫುಲ್​ ಆಗಿ ಕಾಣಿಸಿಕೊಂಡಿದ್ದಾರೆ. ಜೈ ಹನುಮಾನ್ ಸಿನಿಮಾ ಕೂಡಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದ್ದು, ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಸೇರಿ ಬಿಗ್​​ ಬಜೆಟ್​​ನಲ್ಲಿ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್​ ಶೆಟ್ಟಿ ಅವರ ಸಿನಿಮಾ ಸಮರ್ಪಣೆ ಬಗ್ಗೆ ನಿರ್ದೇಶಕ ಪ್ರಶಾಂತ್ ವರ್ಮಾ ಸುದೀರ್ಘ ಬರಹದೊಂದಿಗೆ ಗುಣಗಾನ ಮಾಡಿದ್ದರು. ಈ ಕಾಂಬಿನೇಶನ್​ನಲ್ಲಿ ಚಿತ್ರ ಹೇಗೆ ಮೂಡಿ ಬರಲಿದೆ ಮತ್ತು ರಿಷಬ್​ ಶೆಟ್ಟಿ ಜೊತೆ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ABOUT THE AUTHOR

...view details