ಉದ್ಯಮ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆ ಹಿನ್ನೆಲೆ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಹಾನ್ ವ್ಯಕ್ತಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ ಸ್ಟೋರಿ:''ಟೈಟಾನ್ ಗಡಿಯಾರದ ಸದ್ದು ನಿಂತಿದೆ. ರತನ್ ಟಾಟಾ, ಭಾರತದ ಹೆಮ್ಮೆ. ಸಮಗ್ರತೆ, ನಾಯಕತ್ವ, ಪರೋಪಕಾರದ ಸಂಕೇತ. ಭಾರತದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯುಲು ತಮ್ಮನ್ನು ಸಮರ್ಪಿಸಿದ್ದರು. ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ, ಅವರು ಇಹಲೋಕ ತ್ಯಜಿಸಿರಬಹುದು. ಆದ್ರೆ ಅವರ ಪ್ರಭಾವ ನಮ್ಮೆಲ್ಲರ ಹೃದಯದಲ್ಲಿ ಸದಾ ಜೀವಂತ. ರೆಸ್ಟ್ ಇನ್ ಪೀಸ್ ಸರ್'' ಎಂದು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಬರೆದುಕೊಂಡಿದ್ದಾರೆ.
ಶಿವಣ್ಣ ಟ್ವೀಟ್: ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ರತನ್ ಟಾಟಾ ಅವರ ಫೋಟೋ ಹಂಚಿಕೊಂಡ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ''ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ'' ಎಂದು ಬರೆದುಕೊಂಡಿದ್ದಾರೆ.
ಗೀತಾಪಿಕ್ಚರ್ಸ್ ಪೋಸ್ಟ್:ಶಿವರಾಜ್ಕುಮಾರ್ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ಗೀತಾಪಿಕ್ಚರ್ಸ್ ಕೂಡಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡು, ''ದೇಶ ಕಂಡ ಅತ್ಯದ್ಬುತ ವ್ಯಕ್ತಿಗಳಲ್ಲಿ ಒಬ್ಬರಾದ ರತನ್ ಟಾಟಾ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ'' ಎಂದು ಬರೆದುಕೊಂಡಿದ್ದಾರೆ.
ಉಪೇಂದ್ರ ಟ್ವೀಟ್: 'ಮಹಾನ್ ಚೇತನ ರತನ್ ಟಾಟಾ ರವರಿಗೆ ಭಾವಪೂರ್ಣ ವಿದಾಯ.. ಓಂ ಶಾಂತಿ' ಎಂದು ಜನಪ್ರಿಯ ನಟ ಉಪೇಂದ್ರ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್:ಟಾಟಾ ಸಮೂಹದ ಮುಖ್ಯಸ್ಥರಾದ ಶ್ರೀ ರತನ್ ಟಾಟಾ ಅವರಿಗೆ ಭಾವಪೂರ್ಣ ನಮನಗಳು. ಓಂ ಶಾಂತಿ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.