ಕರ್ನಾಟಕ

karnataka

ETV Bharat / entertainment

ರಾಕಿಭಾಯ್ ''ಟಾಕ್ಸಿಕ್'' ಚಿತ್ರದಲ್ಲಿ ಹಾಲಿವುಡ್, ಟಾಲಿವುಡ್ ನಟರು? - Yash Toxic Updates - YASH TOXIC UPDATES

ಆಗಸ್ಟ್ ಆರಂಭದಲ್ಲಿ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್​​​' ಸೆಟ್ಟೇರಿದೆ. ಸಿನಿಮಾ ಸುತ್ತಲಿನ ಉತ್ಸಾಹ, ಕುತೂಹಲ, ಅಂತೆಕಂತೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಹಾಲಿವುಡ್, ಟಾಲಿವುಡ್ ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Yash starrer "Toxic" Updates
ಯಶ್​ ನಟನೆಯ 'ಟಾಕ್ಸಿಕ್'​ ಅಪ್ಡೇಟ್ಸ್ (ETV Bharat)

By ETV Bharat Karnataka Team

Published : Sep 28, 2024, 12:54 PM IST

Updated : Sep 28, 2024, 1:40 PM IST

''ಟಾಕ್ಸಿಕ್''. ರಾಕಿಂಗ್ ಸ್ಟಾರ್ ಯಶ್ ಮತ್ತು ಮಲೆಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್​​ದಾಸ್ ಕಾಂಬಿನೇಷನಲ್ಲಿ ಬರುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾ. ಮೋಷನ್ ಪಿಕ್ಚರ್​ನಿಂದಲೇ ಸಖತ್​​ ಕ್ರೇಜ್ ಕ್ರಿಯೇಟ್​​ ಮಾಡಿರೋ ''ಟಾಕ್ಸಿಕ್'' ಕೆಲ ದಿನಗಳ ಹಿಂದೆ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಪ್ರೇಕ್ಷಕರ ಕುತೂಹಲದ ಜೊತೆಗೆ ಅಂತೆಕಂತೆಗಳು ಜೋರಾಗೇ ಕೇಳಿಬರುತ್ತಿದೆ.

ತಮ್ಮ ಚಿತ್ರದ ಬಗ್ಗೆ ನಾಯಕ ನಟ ಯಶ್ ಆಗಲಿ, ನಿರ್ಮಾಣ ಸಂಸ್ಥೆ ಕೆವಿಎನ್ ಆಗಲಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ ಈ ಸಿನಿಮಾ ಮಾತ್ರ ಒಂದಲ್ಲ ಒಂದು ವಿಚಾರದಿಂದ ಗಾಲ್ಫ್ ರಸ್ತೆಯಲ್ಲಿರೋ ಯಶ್​​​ ಅವರ ನಿವಾಸದಿಂದ ಹಿಡಿದು ಬಾಲಿವುಡ್​​ವರೆಗೂ ಸಖತ್​ ಸದ್ದು ಮಾಡುತ್ತಿದೆ.

ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್ ಯಶ್​ (ETV Bharat)

ಈಗಲೂ ಯಶ್ ಹೊಸ ಹೇರ್ ಸ್ಟೈಲ್ ಜೊತೆಗೆ ಸ್ಟಾರ್ ಕಾಸ್ಟ್ ಬಗ್ಗೆ ಸಖತ್​​ ಟಾಕ್ ಆಗುತ್ತಿದೆ. ಬೆಂಗಳೂರಿನ ಹೆಚ್​​​ಎಂಟಿ ಫ್ಯಾಕ್ಟರಿ ಬಳಿಯ 20 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ದೊಡ್ಡ ಮಟ್ಟದ ಸೆಟ್​ನಲ್ಲಿ ಭರದ ಶೂಟಿಂಗ್​​ ನಡೆಯುತ್ತಿದೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಯಶ್ ಆಪ್ತರೊಬ್ಬರು ಹೇಳುವ ಹಾಗೇ, ಕೆಲ ದಿನಗಳ ಹಿಂದೆ ಯಶ್ ಜೊತೆಗೆ ಈ ಮೂವರು ನಟಿಯರು ಅಭಿನಯಿಸಿ ಹೋಗಿದ್ದಾರೆ.

ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಹಾಲಿವುಡ್ ನಟ ಬೆನೆಡಿಕ್ಟ್ ಗ್ಯಾರೆಟ್ ಹಾಗೂ ತೆಲುಗು, ತಮಿಳಿನ ಪ್ರಖ್ಯಾತ ಪೋಷಕ ನಟ ತನಿಕೆಲ್ಲ ಭರಣಿ 'ಟಾಕ್ಸಿಕ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತನಿಕೆಲ್ಲ ಭರಣಿ ತಮ್ಮ ಭಾಗದ ಶೂಟಿಂಗ್​​​ನಲ್ಲಿ ಭಾಗಿಯಾಗಿದ್ದರು.

ಬೆನೆಡಿಕ್ಟ್ ಗ್ಯಾರೆಟ್ ಇನ್​ಸ್ಟಾ ಪೋಸ್ಟ್, ಕಾಮೆಂಟ್ಸ್ (social media)

ಇನ್ನೂ ಹಾಲಿವುಡ್ ನಟ ಬೆನೆಡಿಕ್ಟ್ ಗ್ಯಾರೆಟ್ ಕೂಡಾ ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇಂಗ್ಲೆಂಡ್​ ಮೂಲದ ಈ ಬ್ರಿಟಿಷ್ ನಟ ಸದ್ಯ ಬಾಂಬೆಯಲ್ಲಿ ಸೆಟಲ್ ಆಗಿದ್ದು, ಔರಾನ್ ಮೇ ಕಹಾನ್ ದಮ್ ಥಾ, ಕಂಜ್ಯೂರಿಂಗ್ ಕಣ್ಣಪ್ಪನ್​​​ ಸೇರಿದಂತೆ ಹಿಂದಿ, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅವರ ಒಂದು ಸೋಷಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗುತ್ತಿದೆ. ಆ ಪೋಸ್ಟ್​​ಗೆ ನೆಟ್ಟಿಗರೋರ್ವರು ಕೆಜಿಎಫ್​​ 3 ಅಧಿರ ಎಂದು ಕಾಮೆಂಟ್​ ಮಾಡಿದ್ದಾರೆ. ಆ ಕಾಮೆಂಟ್​ಗೆ ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಬೆನೆಡಿಕ್ಟ್ ಗ್ಯಾರೆಟ್, ಅದು ಸಂಪೂರ್ಣ ಖಚಿತವಲ್ಲ. ಅದಾಗ್ಯೂ, ನಾನು ಸದ್ಯ ಯಶ್​ ಜೊತೆ ನಟಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದು ನೆಟ್ಟಿಗರ ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ:10 ವರ್ಷ, 4,000 ಸ್ಕ್ರಿಪ್ಟ್​​ಗಳೊಂದಿಗೆ ಸ್ಪರ್ಧೆ: ಆಸ್ಕರ್​ ಪ್ರವೇಶಿಸಿದ 'ಲಾಪತಾ ಲೇಡೀಸ್'​ ಕಥೆಗಾರನ ಕಥೆಯಿದು; ಬಿಪ್ಲಬ್ ಗೋಸ್ವಾಮಿ ವಿಶೇಷ ಸಂದರ್ಶನ - Biplab Goswami Exclusive Interview

ಟಾಕ್ಸಿಕ್ ಸಿನಿಮಾ ಗ್ಯಾಂಗ್​ಸ್ಟರ್ ಕಥೆಯಾಗಿದ್ದು ಈ ಚಿತ್ರದಲ್ಲಿ ಯಶ್ ಎರಡು ಶೇಡ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಿತ್ತು. ಆದ್ರೀಗ ಯಶ್ ಸಿನಿಮಾ ನೋಡುವ ಪ್ರೇಕ್ಷಕರು ವಿಶ್ವದ್ಯಂತ ಇರುವುದರಿಂದ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಟಾಕ್ಸಿಕ್ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಎಲ್ಲಾ ಭಾಷೆಯ ನಟ ಹಾಗು ನಟಿಯರನ್ನು ಈ ಚಿತ್ರದಲ್ಲಿ ಹಾಕಿಕೊಳ್ಳಲಾಗುತ್ತಿದೆ. ಈಗಾಗ್ಲೇ ಯಶ್ ಜೊತೆ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ಹಾಲಿವುಡ್ ನಟ ಬೆನೆಡಿಕ್ಟ್ ಗ್ಯಾರೆಟ್, ತೆಲುಗು ನಟ ತನಿಕೆಲ್ಲ ಭರಣಿ ಸೇರಿದಂತೆ ಹಲವರು ನಟಿಸಿದ್ದಾರೆ. ಆದ್ರೆ ಯಶ್ ಜೋಡಿ ಯಾರು ಅನ್ನೋ ಸುಳಿವನ್ನು ಮಾತ್ರ ಚಿತ್ರತಂಡವಿನ್ನೂ ಬಿಟ್ಟು ಕೊಟ್ಟಿಲ್ಲ.

ಇದನ್ನೂ ಓದಿ:'ಕೊರಗಜ್ಜ'ನ ಅದ್ಭುತ ಕಥೆ ಹೇಳುತ್ತಿದ್ದೇನೆ, ದೈವಾರಾಧನೆ ಅಣಕಿಸುವ ಉದ್ದೇಶವಿಲ್ಲ: ನಿರ್ದೇಶಕ ಸುಧೀರ್ ಅತ್ತಾವರ್ - Koragajja Film

ಲೇಡಿ ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನವಿರುವ ಈ ಬಹುನಿರೀಕ್ಷಿತ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಬರೋಬ್ಬರಿ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್​ 10ರಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

Last Updated : Sep 28, 2024, 1:40 PM IST

ABOUT THE AUTHOR

...view details