ಕರ್ನಾಟಕ

karnataka

ETV Bharat / entertainment

ತಂದೆ ತಾಯಿಯಾಗುತ್ತಿರುವ ಖುಷಿಯಲ್ಲಿ ವಸಿಷ್ಠ ಸಿಂಹ - ಹರಿಪ್ರಿಯಾ: ಬೇಬಿಬಂಪ್​ ಫೋಟೋ ಶೇರ್ - HARIPRIYA VASISHTA SIMHA

ಚಂದನವನದ ತಾರಾ ದಂಪತಿ ಹರಿಪ್ರಿಯಾ ವಸಿಷ್ಠ ಸಿಂಹ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ಅಧಿಕೃತವಾಗಿ ಗುಡ್​ ನ್ಯೂಸ್ ಹಂಚಿಕೊಂಡಿದ್ದಾರೆ.

Vasishta Simha, Haripriya
ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ (ETV Bharat)

By ETV Bharat Entertainment Team

Published : Nov 1, 2024, 4:16 PM IST

Updated : Nov 1, 2024, 4:31 PM IST

ಪ್ರೀತಿಸಿ ಮದುವೆಯಾದ ಅದೆಷ್ಟೋ ಜೋಡಿಗಳು ಕನ್ನಡ ಚಿತ್ರರಂಗದಲ್ಲಿವೆ. ಕಳೆದ ಸಾಲಿನಲ್ಲಿ ಚಂದನವನದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಗುಡ್​ ನ್ಯೂಸ್ ಯಾವಾಗ ಎಂದು ಒಂದಿಷ್ಟು ಅಭಿಮಾನಿಗಳು ಕೇಳಿದ್ದರು. ಇದೀಗ ದೀಪಾವಳಿಯ ಶುಭ ಸಂದರ್ಭ ಪ್ರೇಮಪಕ್ಷಿಗಳು ತಾವು ಪೋಷಕರಾಗುತ್ತಿರುವ ಶುಭ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ನಟಿ ಹರಿಪ್ರಿಯಾ ಇನ್​ಸ್ಟಾಗ್ರಾಮ್​ ಪೋಸ್ಟ್​: ''ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ 'ಕುಡಿ'ಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ..'' ಎಂದು ನಟಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್​​ ಜೋಡಿಯಾಗಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವಿಶೇಷ ವಿಡಿಯೋ ಮೂಲಕ ದೀಪಾವಳಿ ಸಂದರ್ಭ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಪೋಷಕರಾಗಲಿರುವ ಸಿಹಿ ಸುದ್ದಿಯನ್ನು ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಅನೌನ್ಸ್ ಮಾಡಿದ್ದಾರೆ. ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಇಲ್ಲಿ ಶೇರ್ ಮಾಡಿದ್ದಾರೆ. ಅಲ್ಲಿ ಕ್ಲಿಕ್ಕಿಸಿರುವ ಹಲವು ಫೋಟೋಗಳನ್ನು ಸಂಯೋಜಿಸಿರುವ ವಿಡಿಯೋವನ್ನಿಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುಂದರ ವಿಡಿಯೋದಲ್ಲಿ ನಟಿ ಹರಿಪ್ರಿಯಾ ಅವರ ಬೇಬಿಬಂಪ್​ ಸ್ಪಷ್ಟವಾಗಿ ಗೋಚರಿಸಿದೆ. ಈ ಹಿಂದಿನ ಪೋಸ್ಟ್​​ನಲ್ಲಿಯೂ ನಟಿಯ ಬೇಬಿ ಬಂಪ್​​ ಗೋಚರಿಸಿತ್ತು. ಅಂದೇ ಜೋಡಿ ಪೋಷಕರಾಗಲಿದ್ದಾರೆ ಎಂದು ಹಲವರು ಊಹಿಸಿದ್ದರು. ಅದನ್ನು ಜೋಡಿ ಇಂದಿನ ಪೋಸ್ಟ್​ನಲ್ಲಿ ಒಪ್ಪಿಕೊಂಡಿದ್ದಾರೆ. ಹೌದು, ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ ಎಂಬುದಾಗಿ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳಿಂದ ಅಭಿನಂದನೆಯ ಸಂದೆಶಗಳನ್ನು ಸ್ವೀಕರಿಸುತ್ತಿದ್ದಾರೆ. ಕಾಮೆಂಟ್​ ಸೆಕ್ಷನ್​ನಲ್ಲಿ ಜೋಡಿ ಮೇಲೆ ನೆಟ್ಟಿಗರು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ:ಯಶ್​​ ಕನ್ನಡ ಪ್ರೇಮ ಮತ್ತೊಮ್ಮೆ ಸಾಬೀತು: ಮಕ್ಕಳೊಂದಿಗೆ ಮಗುವಾದ ರಾಕಿ ಭಾಯ್​; ಮುದ್ದಾದ ವಿಡಿಯೋಗಳಿಲ್ಲಿವೆ​

ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಎಲ್ಲಿಯೂ ತಮ್ಮ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಮದುವೆಗೆ ಇನ್ನೇನು ಕೆಲ ದಿನಗಳು ಇದೆ ಎಂದಾಗ ತಮ್ಮ ಪ್ರೇಮ ಪುರಾಣವನ್ನು ಅಭಿಮಾನಿಗಳೆದುರು ತೆರೆದಿಟ್ಟರು. ಕಳೆದ ವರ್ಷ, 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಹಸೆಮಣೆ ಏರಿದ್ದರು. ಈ ಮದುವೆ ಸಮಾರಂಭಕ್ಕೆ ಜೋಡಿಯ ಆಪ್ತರು ಹಾಗೂ ಕುಟುಂಬಸ್ಥರು ಸಾಕ್ಷಿಯಾಗಿದ್ದರು.

ಇದನ್ನೂ ಓದಿ:'ಬಘೀರ' ಕಲೆಕ್ಷನ್​​: ರೋರಿಂಗ್​ ಸ್ಟಾರ್ ಶ್ರೀಮುರುಳಿ​​, ರುಕ್ಮಿಣಿ ವಸಂತ್​​ ಸಿನಿಮಾ ಗಳಿಸಿದ್ದಿಷ್ಟು!

ಮತ್ತೊಂದೆಡೆ, ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​ ಕೂಡಾ ಇಂದೇ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಭಾವಿ ಪತ್ನಿ ಧನ್ಯತಾ ಅವರ ಜೊತೆಗಿನ ಸುಂದರ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಾನು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ ಎಂದು ಅಭಿಮಾನಿಗಳೊಂದಿಗೆ ತಿಳಿಸಿದ್ದಾರೆ.

Last Updated : Nov 1, 2024, 4:31 PM IST

ABOUT THE AUTHOR

...view details