ಬ್ಲಾಕ್ಬಸ್ಟರ್ 'ಗದರ್ 2' ಬಳಿಕ ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಕೈ ಜೋಡಿಸಿದ್ದಾರೆ. ಈ ನಟ-ನಿರ್ದೇಶಕ ಕಾಂಬಿನೇಶನ್ನ ಹೊಸ ಸಿನಿಮಾಗೆ 'SDGM' ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ.
ಎಸ್ಡಿಜಿಎಂ ಮುಹೂರ್ತ ಸಮಾರಂಭ (ETV Bharat) ಮೈತ್ರಿ ಮೂವಿ ಮೇಕರ್ಸ್ನ ನವೀನ್ ಯೆರ್ನೇನಿ, ವೈ.ರವಿಶಂಕರ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿ.ಜಿ ವಿಶ್ವ ಪ್ರಸಾದ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಗೋಪಿಚಂದ್ ಮಲಿನೇನಿ ಬಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.
ಎಸ್ಡಿಜಿಎಂ ಮುಹೂರ್ತ ಕಾರ್ಯಕ್ರಮ (ETV Bharat) ಕ್ರ್ಯಾಕ್ ಮತ್ತು ವೀರಸಿಂಹ ರೆಡ್ಡಿ ಸೇರಿ ಸತತ ಎರಡು ಬ್ಲಾಕ್ಬಸ್ಟರ್ಗಳನ್ನು ನೀಡಿರುವ ನಿರ್ದೇಶಕ ಗೋಪಿಚಂದ್ ಮಲಿನೇನಿ, ಎಸ್ಡಿಜಿಎಂ ಚಿತ್ರದ ಮೂಲಕ ಆ್ಯಕ್ಷನ್ ಎಂಟರ್ಟೈನರ್ ಕಥೆ ಹೇಳಲಿದ್ದಾರೆ. ಗೋಪಿಚಂದ್ ಹೇಳಿದ ಕಥೆ ಕೇಳಿ ಸನ್ನಿ ಡಿಯೋಲ್ ಕೂಡ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿದ್ದ ಕೆನಡಿಯನ್ ನಟ ಡೊನಾಲ್ಡ್ ಸದರ್ಲ್ಯಾಂಡ್ ನಿಧನ - Donald Sutherland death
ಸನ್ನಿ ಡಿಯೋಲ್ ಅಲ್ಲದೇ ಈ ಚಿತ್ರದಲ್ಲಿ ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ತಮನ್ ಎಸ್ ಸಂಗೀತ ಒದಗಿಸಲಿದ್ದಾರೆ. ನವೀನ್ ನೂಲಿ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ಸದ್ಯ ಮುಹೂರ್ತ ಮುಗಿಸಿರುವ ಚಿತ್ರತಂಡ ನಾಳೆಯಿಂದ ಚಿತ್ರೀಕರಣ ಶುರು ಮಾಡಲಿದೆ.