ಕರ್ನಾಟಕ

karnataka

ETV Bharat / entertainment

ಮಂಜು - ಗೌತಮಿ ನಡುವೆ ಮನಸ್ತಾಪ; ಬಿಗ್​ ಬಾಸ್​​ ಬೆಸ್ಟ್ ಫ್ರೆಂಡ್‌ಶಿಪ್‌ಗೆ ಪೂರ್ಣವಿರಾಮ? - BIGG BOSS KANNADA SEASON 11

'ಬುದ್ಧಿವಂತರ' ಆಟದಿಂದ ಫ್ರೆಂಡ್‌ಶಿಪ್‌ಗೆ ಪೂರ್ಣವಿರಾಮ? ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಪ್ರೋಮೋ ಅನಾವರಣಗೊಂಡಿದ್ದು, ಮಂಜು ಮತ್ತು ಗೌತಮಿ ನಡುವೆ ಮನಸ್ತಾಪ ಮೂಡುವಂತೆ ತೋರುತ್ತಿದೆ.

Bigg Boss Kannada Season 11
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss team)

By ETV Bharat Entertainment Team

Published : Nov 5, 2024, 3:56 PM IST

ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತವೆ. ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಾದರೆ, ಕೆಲವರು ಕೇವಲ 'ಬೆನ್ನಿಂದೆ ಮಾತನಾಡುವ ಮಾತು'ಗಳಾಗಿರುತ್ತವೆ. ಆದ್ರೆ ಕಳೆದ ಸಂಚಿಕೆಯಲ್ಲಿ ವಿಡಿಯೋ ಸಮೇತ ಬಿಗ್​ ಬಾಸ್​ ಸ್ಪರ್ಧಿಗಳ ಮುಂದೆ ಸಹ ಸ್ಪರ್ಧಿಗಳ ಮುಖವಾಡ ಕಳಚಿದ್ದಾರೆ. ಈಗಾಗಲೇ ಹಲವರ ನಡುವೆ ಮನಸ್ತಾಪಗಳಿದ್ದವು. ಈ ಮುನಿಸು ಮುಂದುವರಿಯುತ್ತಾ ಎಂದು ಕಾದು ನೋಡುವ ಬೆನ್ನಲ್ಲೇ ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಮಂಜು ಮತ್ತು ಗೌತಮಿ ನಡುವೆ ಬಿರುಕು ಮೂಡಿದೆ. ಇದರ ಸುಳಿವನ್ನು ಬಿಗ್​ ಬಾಸ್​​ ಅನಾವರಣಗೊಳಿಸಿರುವ ಪ್ರೋಮೋ ಬಿಟ್ಟುಕೊಟ್ಟಿದೆ.

'ಬುದ್ಧಿವಂತರ' ಆಟದಿಂದ ಫ್ರೆಂಡ್‌ಶಿಪ್‌ಗೆ ಪೂರ್ಣವಿರಾಮ? ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​​​ನೊಂದಿಗೆ ಇಂದಿನ ಎಪಿಸೋಡ್​ನ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಗೌತಮಿ ಮತ್ತು ಮಂಜು ನಡುವೆ ಬಿರುಕು ಮೂಡಿದಂತೆ ತೋರುತ್ತಿದೆ. ಮೋಕ್ಷಿತಾ ಅವರು ಗೌತಮಿ ಅವರ ಪರವಾಗಿದ್ದಾರೆ.

ಇಂದಿನ ಸಂಚಿಕೆಯ ಆಟ ನಡೆದಿದೆ. ಗೌತಮಿ ಅವರು ತಮ್ಮ ಅಸಮಧಾನ ಹೊರಹಾಕಲು ಪ್ರಾರಂಭಿಸಿದ್ದಾರೆ. ನೀನು ಮಂಜಣ್ಣನ ಎಂಬ ಪ್ರಶ್ನೆ ಎದ್ದಿದೆ. ನಾವು ನೋಡಿದ ಮಂಜಣ್ಣ ಹೀಗೆ ಮಾಡುತ್ತಾ ಇರೋದು? ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನೊಬ್ಬರ ಸಹಾಯ ಬೇಕಾಗಿಲ್ಲ ನಿಮಗೆ ಎಂದು ಗೌತಮಿ ತಿಳಿಸಿದ್ದಾರೆ. ನನ್ನ ಕೆಪಾಸಿಟಿ ಇಷ್ಟೇ ಎಂದು ನೀವೇ ತಿಳಿಸ್ತಾ ಇದ್ದೀರ ಅಂತಾ ಮಂಜು ಆಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಮಿಸ್​ ಹೊಡೆಯುತ್ತಿದೆ ಎಂದಾಗ ನಾವು ಆಡಿದ ಆಟ ಫೇರ್​ ಗೇಮ್​ ಅಲ್ಲ, ಬುದ್ಧಿವಂತರ ಆಟ ಎಂದು ಮಂಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೋರಾಗಿ ಚಪ್ಪಾಳೆ ತಟ್ಟಿದ ಗೌತಮಿ, ನನ್ನ ಗೆಳೆಯ ಇಷ್ಟೊಂದು ಬುದ್ಧಿವಂತ ಅನ್ನೋದು ಗೊತ್ತಿರಲಿಲ್ಲ ನನಗೆ ಎಂದು ಭಾವುಕರಾಗಿದ್ದಾರೆ. ಅವರೊಬ್ಬರೇ ಹೈಲೆಟ್​ ಆಗೋದಿಕ್ಕೆ ನೋಡುತ್ತಿದ್ದಾರೆ ಬಂದಾಗಿನಿಂದಲೂ. ನೀವು ಒಬ್ಬರೇ ಬಂದಿರೋದು, ನಿಮಗಾಗಿ ಅಷ್ಟೇ ಆಡಿ ಎಂದು ಮೋಕ್ಷಿತಾ ಅವರು ಗೌತಮಿಗೆ ತಿಳಿ ಹೇಳಿದ್ದಾರೆ. ಎಲ್ಲಾ ಮುಗಿದ ಮೇಲೆ ಮೂವರು ಸರಿ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಸ್ನೇಹವನ್ನು ನಿರೀಕ್ಷಿಸೋದಿಲ್ಲವೆಂದು ಗೌತಮಿ ಮುಖಕ್ಕೆ ಹೊಡೆದಂಗೆ ತಿಳಿಸಿಬಿಟ್ಟಿದ್ದಾರೆ.

ಇದನ್ನೂ ಓದಿ:'ಜನ ನೋಡ್ತಾರೆ ಈ ನಿಯತ್ತನ್ನು': ಕಿಚ್ಚನ ಚಪ್ಪಾಳೆ ಪಡೆದ ಹನುಮಂತು ವಿರುದ್ಧ ಸಿಡಿದೆದ್ದ ಚೈತ್ರಾ, ಗೌತಮಿ

ಇದಕ್ಕೂ ಮುನ್ನ ಬಂದಿರುವ ಪ್ರೋಮೋದಲ್ಲಿ, ಮಾತು ಕೊಡ್ತೀರಾ ಎಂದು ಮಂಜು ಅವರು ಶಿಶಿರ್​ ಬಳಿ ಕೇಳಿದ್ದಾರೆ. ಪಕ್ಕಾ ಎಂದು ಇಬ್ಬರೂ ಪರಸ್ಪರ ಏನೋ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಟಾಸ್ಕ್​​​ಗೆ ಬಳಸಿದ ಸ್ಟ್ರ್ಯಾಟಜಿಯಂತೆ ತೋರಿದೆ. ಗೆಲ್ಲುವ ತಂಡ ಒಂದು ತಂಡವನ್ನು ಆಟದಿಂದ ಹೊರಗೆ ಇಡಬೇಕು ಎಂದು ಸೂಚನೆ ಬಂದಿದೆ. ಆ ಪ್ರಕಾರ, ಚೈತ್ರಾ ಕುಂದಾಪುರ ಹಾಗೂ ಗೌತಮಿಯವರನ್ನು ಆಟದಿಂದ ಹೊರಗಿಟ್ಟಿರುವಂತೆ ತೋರಿದೆ. ಆಗಲೇ ಗೌತಮಿ ಅಸಮಧಾನ ಶುರು ಮಾಡಿಕೊಂಡಿದ್ದರು. ಆಟ ಮುಂದುವರಿದಂತೆ ಕಿಚ್ಚು ಹೆಚ್ಚಾದಂತೆ ತೋರಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಇದನ್ನೂ ಓದಿ:ಯಶ್​ 'ಟಾಕ್ಸಿಕ್'​ ಸೆಟ್​: ನಿತ್ಯ ಸಾವಿರಾರು ಕಾರ್ಮಿಕರಿಂದ ಕೆಲಸ‌, ₹150 ಕೋಟಿಗೂ ಹೆಚ್ಚು ಖರ್ಚು

ABOUT THE AUTHOR

...view details