ಕರ್ನಾಟಕ

karnataka

ETV Bharat / entertainment

ವ್ಯಾಲಂಟೈನ್ ಡೇ: ಬಾಲಿವುಡ್​ ಸಿನಿಮಾ ಸೆಟ್​ನಲ್ಲಿ ಅರಳಿದ ರಿಯಲ್​ ಪ್ರೇಮಕಥೆಗಳಿವು!

ಸಿನಿಮಾ ಸೆಟ್​ನಲ್ಲಿ ತಮ್ಮ ಸಹ ನಟ - ನಟಿಯರನ್ನೇ ವರಿಸಿದ ಅನೇಕ ಜೋಡಿಗಳಿಗೆ ಈ ಪ್ರೇಮಿಗಳ ದಿನ ಮತ್ತಷ್ಟು ವಿಶೇಷ

from-deepika-ranveer-to-alia-ranbir-celebrity-couples-whose-love-blossomed-on-set
from-deepika-ranveer-to-alia-ranbir-celebrity-couples-whose-love-blossomed-on-set

By ETV Bharat Karnataka Team

Published : Feb 14, 2024, 11:35 AM IST

ಹೈದರಾಬಾದ್​: ಬಾಲಿವುಡ್​ ಸಿನಿಮಾಗಳು ಪ್ರೀತಿ ಅರಳುವ ಕುರಿತಾದ ಸುಮಧುರ ಕಥಾನಕವನ್ನು ಪ್ರಸ್ತುತ ಪಡಿಸುವ ಮೂಲಕ ಅಭಿಮಾನಿಗಳನ್ನು ಸೆಳೆಯುವಲ್ಲಿ ಸಾಕಷ್ಟು ಬಾರಿ ಯಶಸ್ವಿಯಾಗಿವೆ. ಈ ಪ್ರೇಮಕಥೆಗಳು ಕೇವಲ ಪರದೆ ಮಾತ್ರವಲ್ಲ, ಪರದೆಯ ಹಿಂದೆಯೂ ಕೂಡ ನಟ - ನಟಿಯರಲ್ಲಿ ಪ್ರೀತಿ ಚಿಗುರೊಡೆಯಲು ಕಾರಣವಾಗುತ್ತದೆ. ಚಿತ್ರೀಕರಣದ ಸೆಟ್​ನಲ್ಲಿಯೇ ಈ ರೀತಿ ತಮ್ಮ ಪ್ರಣಯದ ಅನುಭವ ಆರಂಭಿಸಿದ ಅನೇಕ ಜೋಡಿಗಳು ಸಿಗುತ್ತವೆ. ನಟ - ನಟಿಯರಾಗಿ ಅಭಿನಯಿಸಿದ ಚಿತ್ರದ ಮೂಲಕ ಪ್ರೀತಿಗೆ ಬಿದ್ದ ಜೋಡಿಗಳ ಕಥೆಗಳು ಇಲ್ಲಿವೆ.

ರಣವೀರ್​ ಸಿಂಗ್​ ದೀಪಿಕಾ ಪಡುಕೋಣೆ:ಬಾಲಿವುಡ್​ನ ಪವರ್​ಫುಲ್​ ಜೋಡಿಯಾಗಿರುವ ರಣವೀರ್​ ಮತ್ತು ದೀಪಿಕಾ ಎಂದಿಗೂ ಜನರ ಗಮನ ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ವರದಿಗಳ ಪ್ರಕಾರ, ಈ ಇಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾದ ಚಿತ್ರ ಸಂಜಯ್​ ಲೀಲಾ ಬನ್ಸಾಲಿಯ 'ಗೊಲಿಯೊನ್​ ಕೀ ರಾಸ್​ಲೀಲಾ ರಾಮ್​-ಲೀಲಾ' ಚಿತ್ರ. ಸಿನಿಮಾದಲ್ಲಿ ಆನ್​ ಸ್ಕ್ರೀನ್​ ಕೆಮಿಸ್ಟ್ರಿಯಲ್ಲೂ ಅತ್ಯುತ್ತಮವಾಗಿದ್ದ ಈ ಜೋಡಿ ತಮ್ಮ ಪ್ರೀತಿ ವಿಚಾರವನ್ನು ಹಲವು ದಿನಗಳ ಕಾಲ ಬಚ್ಚಿಟ್ಟಿದ್ದರು. ಬಳಿಕ 2018ರ ಡಿಸೆಂಬರ್​ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದರು.

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​​: 'ಬ್ರಹ್ಮಾಸ್ತ್ರ' ಚಿತ್ರದ ಸೆಟ್​ನಲ್ಲಿ ಒಟ್ಟಿಗೆ ಕೆಲಸ ಮಾಡಿದ ರಣಬೀರ್ ಮತ್ತು ಆಲಿಯಾ ನಡುವೆ ಪ್ರೀತಿ ಉಂಟಾಗಿರುವ ಕುರಿತು ಗುಸು ಗುಸು ಆರಂಭವಾಗಿತ್ತು. ಚಿತ್ರದ ಆರಂಭದಲ್ಲೇ ಆದ ಪ್ರೇಮಾಂಕುರ ಚಿತ್ರೀಕರಣದ ಸೆಟ್​ನಲ್ಲಿ ಗಾಢವಾಯಿತು. ಬಳಿಕ 2022ರ ಏಪ್ರಿಲ್​ 14ರಂದು ಈ ಜೋಡಿ ಸಪ್ತಪದಿ ತುಳಿಯಿತು. ಕೇವಲ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬಾಂದ್ರಾದ ಮನೆಯಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಯಿತು. ಇದೀಗ ರಾಹಾ ಎಂಬ ಮುದ್ದು ಮಗಳ ಪೋಷಕರು ಕೂಡಾ ಆಗಿದ್ದಾರೆ.

ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ: 'ಶೇರ್​ಶಾ' (2021) ಚಿತ್ರ ಆರಂಭವೂ ಕೂಡ ಸಿದ್ದಾರ್ಥ್​​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಪ್ರೇಮಕಥೆಗೆ ಆರಂಭವನ್ನು ಒದಗಿಸಿತು. ಇವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಕಾಫಿ ವಿತ್​ ಕರಣ್​ ಸೀಸನ್​ 7ರಲ್ಲಿ ಗಾಸಿಪ್​ಗೆ ತೆರೆ ಎಳೆದ ಕಿಯಾರಾ, ನಾವು ಸ್ನೇಹಿತರಿಗಿಂತ ಹೆಚ್ಚಿನ ಬಾಂಧವ್ಯ ಹೊಂದಿದ್ದೇವೆ ಎಂದು ಒಪ್ಪಿಕೊಂಡಿದ್ದರು. ಎರಡು ವರ್ಷಗಳ ಕಾಲ ಡೇಟಿಂಗ್​ ನಡೆಸಿದ ಈ ಜೋಡಿ 2023ರ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಯಿತು ಕೂಡಾ.

ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​: 2008ರಲ್ಲಿ 'ತಶಾನ್'​ ಚಿತ್ರದ ವೇಳೆ ಇವರಿಬ್ಬರ ನಡುವೆ ಪ್ರೀತಿಯ ಹೂ ಅರಳಿತು. ಇದಕ್ಕಿಂತಲೂ ಮೊದಲ 'ಓಂಕಾರ' (2006) ಮತ್ತು 'ಎಲ್​ಒಸಿ: ಕಾರ್ಗಿಲ್' (2003)​ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು ಈ ಜೋಡಿ. 2004ರಲ್ಲಿ ಅಮೃತ ಸಿಂಗ್​ನಿಂದ ವಿಚ್ಛೇದನ ಪಡೆದಿದ್ದ ಸೈಫ್​ ಬಳಿಕ ಕರೀನಾ ಜೊತೆಯಲ್ಲಿ ಪ್ರೀತಿಗೆ ಬಿದ್ದು, ನಾಲ್ಕು ವರ್ಷ ಡೇಟಿಂಗ್​ ನಡೆಸಿದರು. ಬಳಿಕ ತಮ್ಮ ಪ್ರೀತಿಗೆ 2012ರಲ್ಲಿ ಅಧಿಕೃತ ಮುದ್ರೆ ಒತ್ತಿದರು. ಸದ್ಯ ಈ ಜೋಡಿ ತೈಮೂರ್​ ಮತ್ತು ಜೆಹಾಂಗೀರ್​​ ಎಂಬ ಮಕ್ಕಳ ಪೋಷಕರಾಗಿದ್ದಾರೆ.

ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ: ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಇಬ್ಬರು ಪರಸ್ಪರ ಚುಂಬಿಸುವ ವಿಡಿಯೋ ಹೊರ ಬರುವವರೆಗೆ ಇವರ ನಡುವೆ ಪ್ರೀತಿ ಇದೆ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಬಳಿಕವೂ ಈ ಬಗ್ಗೆ ಗುಟ್ಟು ಬಿಡುಕೊಡದ ಈ ಜೋಡಿ ಸದ್ದಿಲ್ಲದೇ ತಾವು ಪ್ರೀತಿಯಲ್ಲಿದ್ದೇವೆ ಎಂಬ ಸೂಚನೆ ನೀಡಿದ್ದರು. 'ಲಸ್ಟ್​ ಸ್ಟೋರಿ 2' ಸೆಟ್​ನಲ್ಲಿ ತಮ್ಮ ನಡುವಿನ ಸಂಬಂಧವನ್ನು ಈ ಇಬ್ಬರು ಒಪ್ಪಿಕೊಂಡಿದ್ದರು.

ರಿಚಾ ಚಡ್ಡಾ ಮತ್ತು ಅಲಿ ಫಜಲ್​: 'ಫುಕ್ರೆ' ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮೂಲಕ ರಿಚಾ ಮತ್ತು ಆಲಿ ತಮ್ಮ ಸಂಬಂಧಕ್ಕೆ ಪ್ರೀತಿ ಎಂಬ ಹೊಸ ಹೆಸರು ನೀಡಿದರು. 2020ರಲ್ಲಿ ಮದುವೆಯಾಗಲು ಯೋಚಿಸಿದ ಜೋಡಿ ಸಾಂಕ್ರಾಮಿಕತೆಯಿಂದಾಗಿ ಮುಂದಕ್ಕೆ ಹಾಕಿ 2022ರಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದರು. ಇದೀಗ ತಮ್ಮ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿ ಈ ಜೋಡಿ ಇರುವುದಾಗಿ ಇನ್​ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​: ಅದಿತಿ ಮತ್ತು ಸಿದ್ದಾರ್ಥ್​​ ನಡುವೆ ಕಳೆದರಡು ವರ್ಷಗಳಿಂದ ಪ್ರೀತಿ ಚಿಗುರಿದ್ದರೂ, ಇವರಿಬ್ಬರೂ ಈ ಕುರಿತು ಬಹಿರಂಗಪಡಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಇಬ್ಬರು ತಮ್ಮ ಆತ್ಮೀಯ ಬಂಧನದ ಫೋಟೋಗಳನ್ನು ಪ್ರಕಟಿಸುವ ಮೂಲಕ ಇಬ್ಬರ ನಡುವಿನ ಸಂಬಂಧವನ್ನು ತಿಳಿಸಿದ್ದಾರೆ. ಜನವರಿಯಲ್ಲಿ ಅದಿತಿ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಈ ಜೋಡಿ 'ಮಹಾಸಮುದ್ರ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ವ್ಯಾಲೆಂಟೈನ್ಸ್​ ಡೇ ಪ್ಲಾನ್​​ ಏನು?: ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ರಶ್ಮಿಕಾ

ABOUT THE AUTHOR

...view details