ಸ್ಯಾಂಡಲ್ವುಡ್ನ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಂ ದೇವರಾಜ್ ನಟನೆಯ 'S/O ಮುತ್ತಣ್ಣ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪ್ರಣಂ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನ್ನು ಅನಾವರಣ ಮಾಡುವ ಮೂಲಕ ಚಿತ್ರತಂಡ ಅವರಿಗೆ ಶುಭ ಕೋರಿದೆ. ಬೆಂಗಳೂರಿನ ಜಿಟಿ ಮಾಲ್ನಲ್ಲಿರುವ ಎಂಎಂ ಲೆಗಸಿಯಲ್ಲಿ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿತು.
ಮೊದಲು ಮಾತನಾಡಿದ ನಾಯಕ ನಟ ಪ್ರಣಂ ದೇವರಾಜ್, 'S/o ಮುತ್ತಣ್ಣ' ಹೆಸರೇ ಆಕರ್ಷಕವಾಗಿದೆ. ಶ್ರೀಕಾಂತ್ ಸರ್ ಫಸ್ಟ್ ಟೈಮ್ ನಮ್ಮ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ, ಹೇಳಿದ ಕಥೆಯ ಮೇಲೆ ತುಂಬಾ ನಂಬಿಕೆ ಬಂತು. ಅಂದು ಅವರು ನೀಡಿದ ಭಾಷೆಗಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಶ್ರೀಕಾಂತ್ ಅವರ ಯೋಚನೆಯೇ ಬೇರೆ. ಇಡೀ ಚಿತ್ರತಂಡ ಅಣ್ಣ ತಮ್ಮಂದಿರ ತರಹ ಕೆಲಸ ಮಾಡಿದೆ. ನಿರ್ಮಾಪಕರು ಸಹ ಎಲ್ಲದಕ್ಕೂ ಬೆಂಬಲ ಕೊಟ್ಟಿದ್ದಾರೆ. ತಾರೆ ಖುಷಿ ರವಿ ಅವರು ಎಂಥಾ ನಟಿ ಅನ್ನೋದು 'ದಿಯಾ' ಚಿತ್ರದಿಂದ ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು, ಮತ್ತಷ್ಟು ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ನಾಯಕಿ ನಟಿ ಖುಷಿ ರವಿ ಮಾತನಾಡಿ, 'S/o ಮುತ್ತಣ್ಣ' ಅಂತಾ ಹೇಳಿದ ತಕ್ಷಣ ಪಾಸಿಟಿವ್ ವೈಬ್ಸ್ ಬರುತ್ತದೆ. ಟೈಟಲ್ ತುಂಬಾ ಪವರ್ಫುಲ್ ಆಗಿದೆ. ಟೈಟಲ್ ಕೇಳಿಯೇ ಸಿನಿಮಾ ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಕೊಟ್ಟಿದೆ. ರಂಗಾಯಣ ರಘು ಸರ್ ಕ್ಯಾಮರಾ ಹೇಗೆ ಫೇಸ್ ಮಾಡಬೇಕು ಅನ್ನೋದನ್ನು ಹೇಳಿ ಕೊಟ್ಟರು. ಪ್ರಣಂ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಚಿತ್ರೀಕರಣ ಸಮಯದಲ್ಲಿ ಎಲ್ಲರೂ ಸಖತ್ ಎಂಜಾಯ್ ಮಾಡಿದೆವು ಎಂದು ಚಿತ್ರತಂಡದವನ್ನು ಬಣ್ಣಿಸಿದರು.