ಕನ್ನಡ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮ ಸರಿಸುಮಾರು 80 ದಿನಗಳ ಆಟ ಮುಗಿಸಿದ್ದು, ಫಿನಾಲೆ ಸಮೀಪಿಸುತ್ತಿದೆ. ಆಟ ಮತ್ತಷ್ಟು ರೋಚಕತೆಯಿಂದ ಕೂಡಿದ್ದು, ಸ್ಪರ್ಧಿಗಳ ವರ್ತನೆ ಸಹ ಬದಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ರಜತ್ ಕಿಶನ್ ಮತ್ತು ಗೌತಮಿ ಜಾಧವ್ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮುಂದೆ ಏನಾಗಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು.
'ಪಾಸಿಟಿವಿಟಿ ಜಪ ಬಿಟ್ಟು ಕಡೆಗೂ ರೊಚ್ಚಿಗೆದ್ರಾ ಗೌತಮಿ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ರಜತ್ ಮತ್ತು ಗೌತಮಿ ನಡುವೆ ಮಾತಿಗೆ ಮಾತು ಬೆಳೆದಿರೋದನ್ನು ಕಾಣಬಹುದು.
ಇಡೀ ಬಿಗ್ ಬಾಸ್ ಮನೆಯಲ್ಲಿ ಕಸ ತುಂಬಿಕೊಂಡಿದೆ. 60 ನಿಮಿಷಗೊಳಗಾಗಿ ಸ್ಪರ್ಧಿಗಳು ಮನೆಯನ್ನು ಸ್ವಚ್ಛಗೊಳಿಸಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದಾರೆ. ಸ್ಪರ್ಧಿಗಳೆಲ್ಲ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ರಜತ್ ಒಂದು ಬದಿ ಕುಳಿತುಕೊಂಡಿದ್ದು, ಒಬ್ಬರೇ ಸುಮ್ನೆ ಕುಳಿತಿರುವುದನ್ನು ನೋಡಲು ಆಗುತ್ತಿಲ್ಲ ಎಂಬ ಮಾತು ಮನೆಯ ಇತರ ಸ್ಪರ್ಧಿಗಳ ಕಡೆಯಿಂದ ಬಂದಿದೆ.
ಗೌತಮಿ ಮಾತನಾಡಿ, ಡೈಲಾಗ್ ಹೊಡಿ, ಕೂತ್ಕೋ, ಒಂದಷ್ಟ್ ಹಣ್ ತಿನ್ನು ಎಂದಿದ್ದಾರೆ. ಕೆರಳಿದ ರಜತ್ ಏನ್ ಮನೆಯಿಂದ ತಂದ್ ಕೊಟ್ಟಿದ್ದೀಯಾ ನೀನು ಎಂದಿದ್ದಾರೆ. ನಿಮ್ಮಂತೋನಿಗೆ ಹೆದ್ರೋದೆ ಇಲ್ಲ ನಾನು ಎಂದು ಗೌತಮಿ ತಿಳಿಸಿದ್ದಾರೆ. ಗೌತಮಿ ಬಳಿ ಪಿಲ್ಲೋ ಎಸೆದ ರಜತ್, ಡ್ರಾಮಾ ಮಾಡ್ಕೊಂಡೇ ಬಂದ್ಬುಟ್ಟೆ 12 ವಾರಗಳಿಂದ, ಒಂದ್ ಬಕೆಟ್ ಇನ್ನೊಂದ್ ಬಕೆಟ್ ಇಡ್ಕೊಂಡಿರೋದನ್ನು ಫಸ್ಟ್ ಟೈಮ್ ನೋಡಿದ್ದು, ನೀನ್ ದಬಾಕಿರೋದನ್ನು 12 ವಾರಗಳಿಂದ ನೋಡಿದ್ದೀನಿ, ಸಪೋರ್ಟ್ ಬೇಕು ಅಂತಾ ಯಾರದ್ದೋ ಕಾಲ್ ಹಿಡಿದುಕೊಂಡು ಹೋಗೋದಲ್ಲ, ತಾಕತ್ತಿದ್ರೆ ಇಂಡ್ಯುವಿಶುವಲ್ ಆಗಿ ಅಡು ಎಂದು ರಜತ್ ಮಾತಿನ ಮಳೆ ಸುರಿಸಿದ್ದಾರೆ.