ಕರ್ನಾಟಕ

karnataka

ETV Bharat / entertainment

ನಾಳೆ 'ಎಮರ್ಜೆನ್ಸಿ' ರಿಲೀಸ್​​​: ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ 5 ಪ್ರಮುಖ ಕಲಾವಿದರಿವರು - INDIRA GANDHI ROLE

ಭಾರತದ ಏಕೈಕ ಮಹಿಳಾ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಪಾತ್ರ ನಿರ್ವಹಿಸಿದ ಐವರು ಪ್ರಮುಖರ ಹೆಸರು ಇಲ್ಲಿದೆ.

Indira Gandhi Role
ಇಂದಿರಾ ಗಾಂಧಿ ಪಾತ್ರ (Photo: Film posters)

By ETV Bharat Entertainment Team

Published : Jan 16, 2025, 7:24 PM IST

ಬಾಲಿವುಡ್​ ನಟಿ ಕಂಗನಾ ರಣಾವತ್ ಸಾರಥ್ಯದ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಜನವರಿ 17, ನಾಳೆ ತೆರೆಗಪ್ಪಳಿಸಲು ಸಜ್ಜಾಗಿದೆ. ಭಾರತದ ಏಕೈಕ ಮಹಿಳಾ ಪ್ರಧಾನಿ ದಿ.ಇಂದಿರಾ ಗಾಂಧಿ ಅವರನ್ನು ಈ ಚಿತ್ರತಂಡ ತೆರೆಯ ಮೇಲೆ ಹೇಗೆ ತರಲಿದೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ. ಕಳೆದ ಹಲವು ವರ್ಷಗಳಲ್ಲಿ, ಹಲವು ಕಲಾವಿದರು ಈ ಅಪ್ರತಿಮ ರಾಜಕೀಯ ನಾಯಕಿಯ ಪಾತ್ರಕ್ಕೆ ಜೀವ ತುಂಬೋ ಸವಾಲನ್ನು ಸ್ವೀಕರಿಸಿದ್ದಾರೆ.

ಸುಪ್ರಿಯಾ ವಿನೋದ್: ಮರಾಠಿ ಸಿನಿಮಾ ಯಶವಂತರಾವ್ ಚವಾಣ್ (2014) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸುಪ್ರಿಯಾ ವಿನೋದ್ ಅವರು ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯ ನೋಟ, ಧೈರ್ಯವನ್ನು ತೆರೆ ಮೇಲೆ ಅದ್ಭುತವಾಗಿ ಚಿತ್ರಿಸಿದ್ದರು. ಅವರ ತಂದೆ ರತ್ನಾಕರ್ ಮಟ್ಕರಿ ನಿರ್ದೇಶಿಸಿದ್ದ 'ಇಂದಿರಾ-ದಿ ಪ್ಲೇ' (2015) ಮೂಲಕ ಪಾತ್ರವನ್ನು ಪ್ರಸ್ತುತಪಡಿಸಿದ್ದರು. ಮಧುರ್ ಭಂಡಾರ್ಕರ್ ಅವರ ಇಂದು ಸರ್ಕಾರ್ (2017) ಚಿತ್ರದಲ್ಲಿ ಸುಪ್ರಿಯಾ ಮತ್ತೊಮ್ಮೆ ಈ ಪಾತ್ರದಲ್ಲಿ ಕಾಣಿಸಿಕೊಂಡರು.

ಇಂದು ಸರ್ಕಾರ್ ಚಿತ್ರದಲ್ಲಿ ಸುಪ್ರಿಯಾ ವಿನೋದ್ (Photo: Trailer screengrab)

ಅವಂತಿಕಾ ಅಕೇರ್ಕರ್: ನಟಿ ಅವಂತಿಕಾ ಅಕೇರ್ಕರ್ ಅವರು ಇಂದಿರಾ ಗಾಂಧಿ ಪಾತ್ರವನ್ನು ಎರಡು ಬಾರಿ ನಿರ್ವಹಿಸಿದ್ದಾರೆ. ಶಿವಸೇನಾ ಸಂಸ್ಥಾಪಕ ಬಾಳ್​​ ಠಾಕ್ರೆ ಜೀವನಾಧರಿತ ಠಾಕ್ರೆ (2019)ನಲ್ಲಿ, ನವಾಜುದ್ದೀನ್ ಸಿದ್ದಿಕಿ ಜೊತೆ ನಟಿಸಿದ್ದರು. ನಂತರ, ಭಾರತದ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ವಿಜಯವನ್ನಾಧರಿಸಿ ಬಂದ ಸ್ಪೋರ್ಟ್ಸ್ ಡ್ರಾಮಾ '83' (2021)ನಲ್ಲಿ ಈ ಐಕಾನಿಕ್​ ರೋಲ್​ನಲ್ಲಿ ಕಾಣಿಸಿಕೊಂಡರು.

ಠಾಕ್ರೆ ಚಿತ್ರದಲ್ಲಿ ಅವಂತಿಕಾ ಅಕೇರ್ಕರ್ (Photo: Trailer screengrab)

ಲಾರಾ ದತ್ತಾ:ಬೆಲ್ ಬಾಟಮ್ (2021) ಎಂಬ ಚಿತ್ರದಲ್ಲಿ ನಟಿ ಲಾರಾ ದತ್ತಾ ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. ಈ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆಯಿತು.

ಬೆಲ್​ ಬಾಟಮ್​ ಚಿತ್ರದಲ್ಲಿ ಲಾರಾ ದತ್ತಾ (Photo: Trailer screengrab)

ಇದನ್ನೂ ಓದಿ:ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು

ಫಾತಿಮಾ ಸನಾ ಶೇಖ್: ಮೇಘನಾ ಗುಲ್ಜಾರ್ ನಿರ್ದೇಶನದ ಇತ್ತೀಚಿನ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ಇಂದಿರಾ ಗಾಂಧಿ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. 1971ರ ಯುದ್ಧ ಹಿನ್ನೆಲೆಯಲ್ಲಿ, ಫೀಲ್ಡ್ ಮಾರ್ಷಲ್ ಸ್ಯಾಮ್​ ಮಾಣೆಕ್‌ ಶಾ ಅವರ ನಾಯಕತ್ವದ ಸುತ್ತ ಕಥೆ ಹೆಣೆಯಲಾಗಿದೆ. ಪ್ರಧಾನ ಮಂತ್ರಿಯಾಗಿ ಫಾತಿಮಾ ಸನಾ ಶೇಖ್​ ಅವರ ಚಿತ್ರಣ ವ್ಯಾಪಕವಾಗಿ ಸದ್ದು ಮಾಡಿತ್ತು.

ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಫಾತಿಮಾ ಸನಾ ಶೇಖ್ (Photo: Trailer screengrab)

ಇದನ್ನೂ ಓದಿ:100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್

ಕಂಗನಾ ರಣಾವತ್​​:ಭಾರತದ ಅತ್ಯಂತ ವಿವಾದಾತ್ಮಕ ರಾಜಕೀಯ ಅವಧಿಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಸುತ್ತ ಹೆಣೆಯಲಾದ ಕಥೆಯಲ್ಲಿ ಕಂಗನಾ ರಣಾವತ್​ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ಹಲವು ಸಮಸ್ಯೆಗಳನ್ನು ಎದುರಿಸಿದ ಹಿನ್ನೆಲೆ ಹಲವು ಬಾರಿ ಸಿನಿಮಾ ವಿಳಂಬವಾಯಿತು. ಫೈನಲಿ ಎಮರ್ಜೆನ್ಸಿ ಜನವರಿ 17, 2025ರಂದು ಬಿಡುಗಡೆಯಾಗಲಿದೆ.

ABOUT THE AUTHOR

...view details