ಕರ್ನಾಟಕ

karnataka

ETV Bharat / entertainment

ಪಂಚಿಂಗ್ ಡೈಲಾಗ್​ಗಳ ಅಬ್ಬರ: ದುನಿಯಾ ವಿಜಯ್​ 'ಭೀಮ' ಟ್ರೇಲರ್ ರಿಲೀಸ್​ - Bheema Trailer - BHEEMA TRAILER

ಸ್ಯಾಂಡಲ್​ವುಡ್​ ಬ್ಲಾಕ್​ ಕೋಬ್ರಾ ದುನಿಯಾ ವಿಜಯ್ ಅಭಿನಯಿದ 'ಭೀಮ' ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.

bheema movie
ಭೀಮ ಟ್ರೇಲರ್ (ETV Bharat)

By ETV Bharat Karnataka Team

Published : Aug 3, 2024, 9:33 PM IST

ದುನಿಯಾ ವಿಜಯ್ ಅಭಿನಯಿಸಿ ಹಾಗೂ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ 'ಭೀಮ' ಚಿತ್ರದ ಅಧಿಕೃತ ಟ್ರೇಲರ್ ಅನಾವರಣಗೊಂಡಿದೆ. ಈಗಾಗಲೇ, ಟೀಸರ್ ಹಾಗು ಹಾಡುಗಳಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸೌಂಡ್ ಮಾಡುತ್ತಿರುವ ಚಿತ್ರದ ಟ್ರೇಲರ್​ಅನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಿಡುಗಡೆ ಮಾಡಿದರು.

ಟ್ರೇಲರ್ ಬಿಡುಗಡೆ ಕಾರ್ಯಕ್ರಮ (ETV Bharat)

ಭೀಮ ಚಿತ್ರದ ಟ್ರೇಲರ್​ನಲ್ಲಿ ಖಡಕ್ ಡೈಲಾಗ್, ಭರ್ಜರಿ ಆಕ್ಷನ್ ಜೊತೆಗೆ ಬೈಕ್ ವ್ಹೀಲಿಂಗ್,​ ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್ ವಿಚಾರ, ಇಂದಿನ ಯುವಕರೇಕೆ ರೌಡಿಸಂಗೆ ಎಂಟ್ರಿ ಕೊಡುತ್ತಾರೆ ಎಂಬ ಅಂಶಗಳನ್ನು ತೋರಿಸಲಾಗಿದೆ. ಅದರಲ್ಲೂ, ದುನಿಯಾ ವಿಜಯ್ ಅವರ 'ಮೀಟರು ಅನ್ನೋದು ಕಿಲೋಮೀಟರ್​ಗಟ್ಟಲೇ ಐತೆ ಹೇಳಲೋ ಜುಟ್ಟೂ' ಸೇರಿದಂತೆ ಹಲವು ಪಂಚಿಂಗ್ ಡೈಲಾಗ್​ಗಳು ಗಮನ ಸೆಳೆಯುತ್ತಿವೆ‌.

ಬೆಂಗಳೂರಿನ ಪ್ರಖ್ಯಾತ ಏರಿಯಾಗಳಲ್ಲಿ ಭೀಮ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ‌. ಇದೊಂದು ಸಾಮಾಜಿಕ ಸಂದೇಶದ ಕಥೆಯನ್ನು ಒಳಗೊಂಡಿರುವ ನೈಜ ಘಟನೆ ಆಧಾರಿತ ಚಿತ್ರವಾಗಿದೆ. ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ, ಡ್ರಾಗನ್ ಮಂಜು ಸೇರಿದಂತೆ ದೊಡ್ಡ ತಾರಬಳಗವಿದೆ.

ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಮಾಸ್ತಿ ಡೈಲಾಗ್ಸ್ ಇದೆ. ದೀಪು ಎಸ್. ಕುಮಾರ್ ಸಂಕಲನ ನಿರ್ವಹಿಸಿದರೆ, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಸಾಹಸ ಮತ್ತು ಧನು ನೃತ್ಯ ನಿರ್ದೇಶನ ಭೀಮನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾವು ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಆಗಸ್ಟ್ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭೀಮನ ದರ್ಬಾರ್ ಶುರುವಾಗಲಿದೆ. ಸಿನಿಮಾ ಪ್ರೇಮಿಗಳಿಂದ ಯಾವ ಮಟ್ಟಿಗೆ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಶೀಘ್ರದಲ್ಲೇ ತರುಣ್​​ ಸುಧೀರ್-ಸೋನಾಲ್ ವಿವಾಹ: ಮಾಹಿತಿ ಹಂಚಿಕೊಂಡ ನಿರ್ದೇಶಕ-ನಟಿ ಜೋಡಿ - Tharun Sonal Wedding Announcement

ABOUT THE AUTHOR

...view details