ಕರ್ನಾಟಕ

karnataka

'ಕೋಟಿ': ಡಾಲಿ ವೃತ್ತಿಜೀವನದಲ್ಲೇ ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರ - Kotee Movie

By ETV Bharat Karnataka Team

Published : Jun 11, 2024, 12:26 PM IST

ಇದೇ ಶುಕ್ರವಾರ ತೆರೆಕಾಣಲಿರುವ ಅಪ್ಪಟ ಕನ್ನಡ ಮಣ್ಣಿನ ಕಥೆ 'ಕೋಟಿ' ಚಿತ್ರದ ಬಗ್ಗೆ ಇಲ್ಲಿದೆ ಕೊಂಚ ಮಾಹಿತಿ.

Dolly Dhananjay starrer Kotee
ಡಾಲಿ ಧನಂಜಯ್ ಕೋಟಿ ಸಿನಿಮಾ ಬಿಡುಗಡೆಗೆ ಸಜ್ಜು (ETV Bharat)

ಕನ್ನಡ ಸಿನಿಪ್ರೇಮಿಗಳ ಪ್ರೀತಿಗೆ ಪಾತ್ರರಾಗಿರುವ ಧನಂಜಯ್​​ ಅವರ ಹೊಚ್ಚ ಹೊಸ ಸಿನಿಮಾ 'ಕೋಟಿ' ಬಿಡುಗಡೆಗೆ ಸಿದ್ಧವಾಗಿದೆ. ಹಲವಾರು ಕಾರಣಗಳಿಗೆ ಈ ಸಿನಿಮಾ ಧನಂಜಯ್​​ ಅವರ ವೃತ್ತಿ ಜೀವನದಲ್ಲೇ ಬಹುಮುಖ್ಯ ಸಿನಿಮಾವಾಗಿದೆ.

ನಟ ಡಾಲಿ ಧನಂಜಯ್ (ETV Bharat)

85 ದಿನಗಳ ಚಿತ್ರೀಕರಣ: ಕಳೆದ ವರ್ಷ ಮೇ ತಿಂಗಳಿನಲ್ಲಿ ಸೆಟ್ಟೇರಿದ್ದ ಕೋಟಿ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲೇ ಎಲ್ಲ ಕೆಲಸಗಳನ್ನು ಮುಗಿಸಿ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಧನಂಜಯ್ ಪೂರ್ಣಪ್ರಮಾಣದ ಹೀರೋ ಆದ ಮೇಲೆ ಮಾಡಿದ ಬಿಗ್​​ ಬಜೆಟ್​​ನ ಸಿನಿಮಾ ಇದಾಗಿದೆ. 'ಜಿಯೋ ಸ್ಟುಡಿಯೋಸ್'ನಂತಹ ದೊಡ್ಡ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಅವರ ನಾಯಕ ನಟನಾಗಿ ಧನಂಜಯ್‌ ಆಯ್ಕೆ ಆಗಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ. ಜತೆಗೆ ಈ ಸಿನಿಮಾವನ್ನು ಬರೋಬ್ಬರಿ 85 ದಿನಗಳ ಕಾಲ ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.‌ ಧನಂಜಯ್​​ ಅವರ ಈವರೆಗಿನ ಸಿನಿಮಾಗಳಲ್ಲಿ ಇದು ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರವಾಗಿದೆ.

'ಕೋಟಿ' ಚಿತ್ರದ ಒಂದು ಕ್ಷಣ... (ETV Bharat)

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಗೆಲುವಿನ ಭರವಸೆ:ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೇ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ 'ಕೋಟಿ'ಯ ಗೆಲುವು ತೀರಾ ಅವಶ್ಯಕವಾಗಿದೆ. ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ 'ಕೋಟಿ' ಸದ್ದು ಮಾಡುತ್ತಿದ್ದು, ಅಪ್ಪಟ ಕನ್ನಡ ಮಣ್ಣಿನ ಕಥೆ ಎಂದು ಎಲ್ಲೆಡೆ ಮಾತಾಗುತ್ತಿದೆ.

ಮಿಡಲ್ ಕ್ಲಾಸ್ ಪ್ಯಾಮಿಲಿ ಮ್ಯಾನ್ ಅವತಾರ: ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ರೂಪಾಯಿ ದುಡಿಯುವ ಬಯಕೆಯ ಡ್ರೈವರ್‌ 'ಕೋಟಿ'ಯ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಪ್ಯಾಮಿಲಿ ಮ್ಯಾನ್ ಅವತಾರ ಎಲ್ಲರಿಗೂ ಕನೆಕ್ಟ್ ಆಗುವ ಭರವಸೆಯನ್ನು ಟೀಸರ್ ಮತ್ತು ಹಾಡುಗಳು ನೀಡಿವೆ.

2024 ಸೆಕೆಂಡ್ ಆಫ್​ನಲ್ಲಿ ಹಲವು ಸ್ಟಾರ್ ಸಿನಿಮಾಗಳು ಬರುವ ಸೂಚನೆ ನೀಡಿದ್ದು, ಕೋಟಿ ಮೊದಲ ಗೆಲುವಾಗುವ ಭರವಸೆ ನೀಡಿದೆ. ಜತೆಗೆ ಕೋಟಿ ಬಿಡುಗಡೆಯ ನಂತರ ಎರಡು ವಾರಗಳ ಕಾಲ ಬಿಡುಗಡೆಗೆ ಸಿದ್ಧವಿರುವ ಯಾವುದೇ ದೊಡ್ಡ ಚಿತ್ರಗಳಿಲ್ಲ. ಇದು 'ಕೋಟಿ'ಗೆ ವರದಾನವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:ವಿಚ್ಛೇದನ ಪಡೆದಿದ್ದೇಕೆ?: ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಸ್ಪಷ್ಟನೆ ಹೀಗಿದೆ - Chandan Shetty Nivedita Gowda

ಡಾಲಿಗೆ ಕಿಚ್ಚ ಸುದೀಪ್ ಸಾಥ್: ಬಡವ ರಾಸ್ಕಲ್ ನಂತರ ಧನಂಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮತ್ತೊಂದು ಸಾಮಾನ್ಯ ಮಿಡಲ್ ಕ್ಲಾಸ್ ವ್ಯಕ್ತಿಯ ಪಾತ್ರದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆ ಸುಲಭಕ್ಕೆ ಯಾವುದೇ ಸಿನಿಮಾಗಳ ಪ್ರಮೋಷನ್‌ಗಳಿಗೆ ಹೋಗದ ಕಿಚ್ಚ ಸುದೀಪ್ ಇತ್ತೀಚೆಗೆ ನಡೆದ 'ಕೋಟಿ' ಪ್ರೀರಿಲೀಸ್ ಕಾರ್ಯಕ್ರಮಕ್ಕೆ ತೆರಳಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು, ಡಾಲಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:ಯುವ ವಿಚ್ಛೇದನ ವಿಚಾರ ನಮಗೆ ಗೂತ್ತಿಲ್ಲ: ಶಿವಣ್ಣ ದಂಪತಿ - Yuva Rajkumar Divorce Case

ಇದೇ ಶುಕ್ರವಾರ ತೆರೆಗೆ: 'ಕೋಟಿ' ಸಿನಿಮಾ ಧನಂಜಯ್ ಅವರಿಗೆ ದೊಡ್ಡ ಯಶಸ್ಸು ತರಲಿ ಮತ್ತು ಚಂದನವನದ ಈ ವರ್ಷದ ಮೊದಲ ದೊಡ್ಡ ಹಿಟ್ ಆಗಲಿ ಎಂಬುದು ಅಭಿಮಾನಿಗಳ ಬಯಕೆ. ಒಟ್ಟಿನಲ್ಲಿ ಟ್ರೇಲರ್​ನಿಂದಲೇ ಅಭಿಮಾನಿ ಬಳಗದಲ್ಲಿ ಕೌತುಕ ಮೂಡಿಸಿರೋ ಕೋಟಿ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.

ABOUT THE AUTHOR

...view details