ETV Bharat / entertainment

ಮಗಳು ಸೋನಾಕ್ಷಿ ಮದುವೆ ಟೀಕಿಸಿದವರ ಬಗ್ಗೆ ಶತ್ರುಘ್ನ​​ ಸಿನ್ಹಾ ಹೇಳಿದ್ದೇನು? - Shatrughan Sinha - SHATRUGHAN SINHA

ಪುತ್ರಿ ಸೋನಾಕ್ಷಿ ಸಿನ್ಹಾ ವಿವಾಹದ ಬಗ್ಗೆ ಅಸಮಧಾನಗೊಂಡವರ ಬಗ್ಗೆ ನಟ, ರಾಜಕಾರಣಿ ಶತ್ರುಘ್ನ​​ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

Shatrughan Sinha, Sonakshi Sinha with hubby Zaheer Iqbal
ಶತ್ರುಘ್ನ​​ ಸಿನ್ಹಾ, ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ (ANI)
author img

By ETV Bharat Karnataka Team

Published : Jul 3, 2024, 2:05 PM IST

ಪುತ್ರಿ ಸೋನಾಕ್ಷಿ ಸಿನ್ಹಾ ವಿವಾಹದ ನಂತರ ತಂದೆ, ನಟ-ರಾಜಕಾರಣಿ ಶತ್ರುಘ್ನ​​ ಸಿನ್ಹಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಹಲವು ಅಂತೆಕಂತೆಗಳು ಹುಟ್ಟಿಕೊಂಡಿದ್ದವು. ಸೋಫಾದಿಂದ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಕೂಡ ಹೇಳಲಾಗಿತ್ತು. ವಿವಾಹ ಸಮಾರಂಭದ ಬಳಿಕ ಆದ ಟ್ರೋಲ್‌ಗಳನ್ನು ಉದ್ದೇಶಿಸಿ ಶತ್ರುಘ್ನ ಸಿನ್ಹಾ ಇದೀಗ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಶಸ್ತ್ರಚಿಕಿತ್ಸೆ ವದಂತಿಗೆ ಪ್ರತಿಕ್ರಿಯಿಸಿ, "ಅರೆ ಭಾಯ್, ನನಗೆ ಸರ್ಜರಿ ಆಗಿರೋದು ನನಗೇ ಗೊತ್ತಿಲ್ಲ" ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಹೋದ ಬಗ್ಗೆ ಪ್ರಶ್ನಿಸಿದಾಗ, ರುಟೀನ್​ ಆ್ಯನುವಲ್​​ ಫುಲ್​ ಬಾಡಿ ಚೆಕಪ್​​​​ಗಾಗಿ ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು. 60 ವರ್ಷ ದಾಟಿದ್ದು, ಆರೋಗ್ಯದೆಡೆಗೆ ಗಮನ ಕೊಡಬೇಕಾಗುತ್ತದೆ ಎಂಬುದನ್ನು ಒತ್ತಿ ಹೇಳಿದರು. ನಟನಿಗೀಗ 77 ವರ್ಷ.

"ಕಳೆದ ಮೂರು ತಿಂಗಳಿನಿಂದ ನನ್ನ ಚುನಾವಣಾ ಪ್ರಚಾರದ ಭಾಗವಾಗಿ ನಿರಂತರವಾಗಿ ಪ್ರಯಾಣಿಸುತ್ತಿದ್ದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಮಗಳು ಮದುವೆಯಾದಳು. ನಾನೀಗ ಅದೇ ಬಿಸಿ ರಕ್ತದ, ಕ್ರಿಯಾಶೀಲ ಯುವಕನಲ್ಲ. ದಿನಕ್ಕೆ ಮೂರು ಶಿಫ್ಟ್ ಕೆಲಸ ಮಾಡುವ ಸಾಮರ್ಥ್ಯ, ರಾತ್ರಿ ಪಾರ್ಟಿ ಮಾಡುವ ಎನರ್ಜಿ ಈಗಿಲ್ಲ'' ಎಂದು ಸಿನ್ಹಾ ತಿಳಿಸಿದರು.

ಮಗಳು ಸೋನಾಕ್ಷಿ ಮದುವೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ, "ಎಲ್ಲವೂ ಚೆನ್ನಾಗಿ ನಡೆಯಿತು. ಆ ಸರ್ವಶಕ್ತನಿಗೆ ಧನ್ಯವಾದಗಳು. ನನ್ನ ಮಗಳು ಬಹಳ ಸಂತೋಷದಿಂದ ದಾಂಪತ್ಯ ಜೀವನ ಆರಂಭಿಸಿದ್ದಾಳೆ. ಖುಷಿ ಪಡದ ಟೀಕಾಕಾರರ (Naysayers) ಬಗ್ಗೆ ಹೇಳಲು ನನ್ನ ಬಳಿ ಏನೂ ಇಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ: ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಸನ್ಮಾನ: ವಿಡಿಯೋ ನೋಡಿ - Vijay Education Awards 2024

ಸೋನಾಕ್ಷಿ ಸಿನ್ಹಾ ಜೂನ್ 23ರಂದು ತಮ್ಮ ದೀರ್ಘಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ಮುಂಬೈನ ಬಾಂದ್ರಾ ನಿವಾಸದಲ್ಲಿ ಮದುವೆಯಾದರು. ಈ ಕಾರ್ಯಕ್ರಮ ಕೇವಲ ಕುಟುಂಬಸ್ಥರು, ಆತ್ಮೀಯರಿಗೆ ಸೀಮಿತವಾಗಿತ್ತು. ನಂತರ ಚಿತ್ರರಂಗದ ಸ್ನೇಹಿತರಿಗಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇದನ್ನೂ ಓದಿ: ಧನುಷ್-ರಶ್ಮಿಕಾ ನಟನೆಯ 'ಕುಬೇರ' ಪೋಸ್ಟರ್ ಅನಾವರಣ, ಶುಕ್ರವಾರ ಕಂಪ್ಲೀಟ್​ ಲುಕ್ ರಿವೀಲ್ - Rashmika Kubera Poster

ETV Bharat Logo

Copyright © 2025 Ushodaya Enterprises Pvt. Ltd., All Rights Reserved.