ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಕಂದರ್' ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಜೂನ್ 18ರಂದು ಚಿತ್ರೀಕರಣ ಪ್ರಾರಂಭವಾಗಿದ್ದು, ಜುಲೈ 1ರಂದು ಮೊದಲ ಹಂತದ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿದೆ. ಇದು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಇದೀಗ, ಪಾಕಿಸ್ತಾನಿ ಅಭಿಮಾನಿಯೊಬ್ಬರು 'ಸಿಕಂದರ್'ನ ಆಕರ್ಷಕ ಪೋಸ್ಟರ್ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ, ಸಲ್ಮಾನ್ ಖಾನ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕುರ್ಚಿಯಲ್ಲಿ ಕುಳಿತಿದ್ದು, ಪಕ್ಕದಲ್ಲಿ ಶ್ವಾನವೊಂದಿದೆ. ಪೋಸ್ಟರ್ ಹಂಚಿಕೊಂಡ ಪಾಕಿಸ್ತಾನಿ ಅಭಿಮಾನಿ, "ಸಲ್ಮಾನ್ ಖಾನ್ರಿಂದ ಸ್ಫೂರ್ತಿ ಪಡೆದು, ಅವರ ಮುಂಬರುವ ಚಿತ್ರ 'ಸಿಕಂದರ್'ಗಾಗಿ ಇದನ್ನು ರಚಿಸಲಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಕಷ್ಟು ಲೈಕ್ಸ್, ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, "ನನಗೆ ಅವರು ಜಾನಿ ಡೆಪ್‌ನಂತೆ ಕಂಡರು" ಎಂದು ಕಾಮೆಂಟ್ ಮಾಡಿದ್ದಾರೆ. ''ಹಾಲಿವುಡ್ ಸಲ್ಮಾನ್ ಖಾನ್" ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗಳು ಸೋನಾಕ್ಷಿ ಮದುವೆ ಟೀಕಿಸಿದವರ ಬಗ್ಗೆ ಶತ್ರುಘ್ನ ಸಿನ್ಹಾ ಹೇಳಿದ್ದೇನು? - Shatrughan Sinha
ಇತ್ತೀಚಿನ ವರದಿಗಳ ಪ್ರಕಾರ, ಮೊದಲ ಶೂಟಿಂಗ್ ಶೆಡ್ಯೂಲ್ ಈಗಾಗಲೇ ಪೂರ್ಣಗೊಂಡಿದೆ. ಆ್ಯಕ್ಷನ್-ಪ್ಯಾಕ್ಡ್ ಸಿನಿಮಾ, ಚಿತ್ರಕೂಟ್ ಮೈದಾನದಲ್ಲಿ ಜುಲೈ 1ರಂದು ಸಲ್ಮಾನ್ ಖಾನ್ ಮತ್ತು ಪ್ರತೀಕ್ ಬಬ್ಬರ್ ಅವರನ್ನೊಳಗೊಂಡ ದೃಶ್ಯದೊಂದಿಗೆ ತನ್ನ ಆರಂಭಿಕ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಹೈ-ಆ್ಯಕ್ಟೇನ್ ಶೂಟಿಂಗ್ ನಡೆದಿದ್ದು, ಒಂದು ವಿಮಾನ ಮತ್ತು ವಿಶೇಷವಾಗಿ ನಿರ್ಮಿಸಲಾದ ಹೊರಾಂಗಣ ಸೆಟ್ ಒಳಗೊಂಡಿತ್ತು. ಇದು ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಅನ್ನೋದು ಚಿತ್ರತಂಡದ ವಿಶ್ವಾಸ.
ಇದನ್ನೂ ಓದಿ: ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಸನ್ಮಾನ: ವಿಡಿಯೋ ನೋಡಿ - Vijay Education Awards 2024
ಎ.ಆರ್.ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ, ಮಹೂರ್ತದ ಕ್ಷಣಗಳನ್ನು ಹಂಚಿಕೊಳ್ಳಲಾಗಿತ್ತು. ಚಿತ್ರವು 2025ರ ಮಾರ್ಚ್ 28ರಂದು ಚಿತ್ರಮಂದಿರ ಪ್ರವೇಶಿಸಲಿದೆ.