ಕರ್ನಾಟಕ

karnataka

ETV Bharat / entertainment

ನಟ ದರ್ಶನ್ ಪ್ರಕರಣದ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದೇನು ? - Tharun Sudhir - THARUN SUDHIR

ನಿರ್ದೇಶಕ ತರುಣ್ ಸುಧೀರ್ ಅವರು ನಟ ದರ್ಶನ್ ಪ್ರಕರಣದ ಕುರಿತು ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

director-tharun-sudhir
ನಿರ್ದೇಶಕ ತರುಣ್ ಸುಧೀರ್ (ETV Bharat)

By ETV Bharat Karnataka Team

Published : Jul 11, 2024, 8:27 PM IST

ನಿರ್ದೇಶಕ ತರುಣ್ ಸುಧೀರ್ (ETV Bharat)

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಟರು, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ದರ್ಶನ್ ಪ್ರಕರಣ ಆಗಿ ಒಂದು ತಿಂಗಳ ಬಳಿಕ ದರ್ಶನ್ ಆತ್ಮೀಯ, ನಿರ್ದೇಶಕ ತರುಣ್ ಸುಧೀರ್ ಮಹಾನಟಿ ರಿಯಾಲಿಟಿ ಶೋನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ದರ್ಶನ್ ಜೊತೆ ರಾಬರ್ಟ್ ಹಾಗೂ ಕಾಟೇರ ಸಿನಿಮಾ ಮಾಡಿರೋ ತರುಣ್ ಸುಧೀರ್ ಮಾತನಾಡಿ, ಮೊದಲು ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ. ಹಾಗೆಯೇ ದರ್ಶನ್ ಅವ್ರಿಗೂ ದೊಡ್ಡ ಕುಟುಂಬ ಇದೆ. ಅವ್ರನ್ನ ನಂಬಿ ಸಾವಿರಾರು ಜನ ಬದುಕ್ತಿದ್ದಾರೆ. ನಾನು ದರ್ಶನ್ ಸಾರ್ ಅವರ​ನ್ನ ಅಣ್ಣ ಅಂತಾ ಕರೆಯುತ್ತೇನೆ. ಈ ಪ್ರಕರಣದಲ್ಲಿ ಭಾಗಿರೋದು ಸುಳ್ಳಾಗ್ಲಿ ಅನ್ನೋದು ನನ್ನ ಆಸೆ. ನಮ್ಮ ಇಡೀ ಕುಟುಂಬಕ್ಕೆ ಅವರೊಟ್ಟಿಗಿನ ಒಡನಾಟ ದೊಡ್ಡದು. ಅವ್ರು ಯಾವುದೇ ಪರಿಸ್ಥಿತಿಯಲ್ಲಿ ಇದ್ರೂ ನಾನು ಅವ್ರಿಗೆ ಸಿನಿಮಾ ಮಾಡ್ತೀನಿ ಅಂತಾ ಹೇಳಿದರು.

ಇನ್ನು ಕೆಲವು ದಿನಗಳ ಹಿಂದೆ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಕೂಡ ದರ್ಶನ್ ಪ್ರಕರಣದ ಬಗ್ಗೆ ಏನು ಕೇಳಬೇಡಿ, ನಾವು ಇವಾಗ್ಲೆ ನೋವಿನಲ್ಲಿ ಇದ್ದೇವೆ ಅಂತಾ ಹೇಳಿದ್ದರು. ಇನ್ನು ದರ್ಶನ್ ಜೊತೆ ತರುಣ್ ಸುಧೀರ್, ಸಿಂಧೂರ ಲಕ್ಷ್ಮಣ್ ಎಂಬ ಸಿನಿಮಾ ಮಾಡ್ತಾ ಇದ್ದು, ಈ ಸಿನಿಮಾದ ಮುಹೂರ್ತ ಕೂಡ ಆಗಿತ್ತು. ಈ ಸಿನಿಮಾ ಚಿತ್ರೀಕರಣ ಆರಂಭ ಆಗಬೇಕಿತ್ತು. ಅಷ್ಟರಲ್ಲೇ ಕೊಲೆ ಆರೋಪ ದರ್ಶನ್​ಗೆ ಸುತ್ತಿಕೊಂಡಿದೆ.

ಇದನ್ನೂ ಓದಿ :ಜೈಲಿನಲ್ಲಿ ನಟ ದರ್ಶನ್‌ಗೆ ಇತರ ಕೈದಿಗಳಂತೆಯೇ ವ್ಯವಸ್ಥೆ: ಗೃಹ ಸಚಿವ ಪರಮೇಶ್ವರ್ - Home Minister Parameshwara

ABOUT THE AUTHOR

...view details