'ಪೊಗರು' ಚಿತ್ರದ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈವೋಲ್ಟೇಜ್ 'ಮಾರ್ಟಿನ್' ಸಿನಿಮಾ ರಿಲೀಸ್ ಆದ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ 'ಮಾರ್ಟಿನ್' ಆಗಿ ಅಬ್ಬರಿಸಿರುವ ಧ್ರುವ ಮತ್ತೊಮ್ಮೆ ತಾವೊಬ್ಬ ಆ್ಯಕ್ಷನ್ ಹೀರೋ ಅಂತಾ ಸಾಬೀತು ಮಾಡಿದ್ದಾರೆ.
ಉದ್ದುದ್ದ ಡೈಲಾಗ್ ಹೊಡೆಯುತ್ತ, ಆ್ಯಕ್ಷನ್ಗಳಲ್ಲಿ ಮಾಸ್ ಹೀರೋ ಅಂತಾ ಬ್ರಾಂಡ್ ಆಗಿದ್ದ ಧ್ರುವ ಸರ್ಜಾ, ಈ ಚಿತ್ರದಲ್ಲಿ ಥ್ರಿಲ್ ಎನಿಸುವ ಆ್ಯಕ್ಷನ್ಗಳಿಂದಲೇ ಅಭಿಮಾನಿಗಳ ದಿಲ್ ಖುಷ್ ಮಾಡಿದ್ದಾರೆ. ಸದ್ಯ ಆಯುಧ ಪೂಜೆಯ ದಿನದಂದು ಬಿಡುಗಡೆ ಆಗಿರುವ 'ಮಾರ್ಟಿನ್', ಅಂದುಕೊಂಡಂತೆ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ.
ಮಾರ್ಟಿನ್ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟು ಎಂಬ ವಿಚಾರ ಗಾಂಧಿನಗರದಿಂದ ಹಿಡಿದು ಬನಶಂಕರಿ ಸಮೀಪ ಇರುವ ಧ್ರುವ ಸರ್ಜಾ ಮನೆ ತನಕವೂ ಚರ್ಚೆ ಆಗುತ್ತಿದೆ. ಧ್ರುವ ಆಪ್ತರೊಬ್ಬರು ಹೇಳುವ ಪ್ರಕಾರ ಚಿತ್ರಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಯಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಮಾರ್ಟಿನ್ 14 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ.
ಅವರೇ ಹೇಳುವಂತೆ, ಕರ್ನಾಟಕದಲ್ಲಿ 300ಕ್ಕೂ ಚಿತ್ರಮಂದಿರ 900ಕ್ಕೂ ಹೆಚ್ಚು ಶೋಗಳು, ಬುಕ್ ಮೈ ಶೋನಲ್ಲಿ 24 ಗಂಟೆಯಲ್ಲಿ 93 ಸಾವಿರ ಟಿಕೆಟ್ ಬುಕ್ಕಿಂಗ್ ಆಗಿವೆ. ಈ ಲೆಕ್ಕಾಚಾರದ ಜೊತೆಗೆ, ಎಲ್ಲಾ ಥಿಯೇಟರ್ ಹೌಸ್ಫುಲ್ ಆದ ಕಾರಣ ಕರ್ನಾಟಕದಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ತೆಲುಗಿನಲ್ಲಿ 2 ಕೋಟಿ, ಹಿಂದಿಯಲ್ಲಿ 2 ಕೋಟಿ, ತಮಿಳಿನಲ್ಲಿ 1.5 ಕೋಟಿ ಹಾಗೂ ಮಲೆಯಾಳಂನಲ್ಲಿ 1 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಅಂತಾ ಅಂದಾಜಿನ ಲೆಕ್ಕ ಕೊಟ್ಟಿದ್ದಾರೆ.