ಕರ್ನಾಟಕ

karnataka

ETV Bharat / entertainment

'ಜೈ ಶ್ರೀ ರಾಮ್'​​​ ಎನ್ನುತ್ತಾ ಗದೆ ಹಿಡಿದ ದರ್ಶನ್​; ಕುತೂಹಲ ಕೆರಳಿಸಿತು ಹೊಸ ಸಿನಿಮಾದ ಗ್ಲಿಂಪ್ಸ್ - darshan birthday

ದರ್ಶನ್​​ ಜನ್ಮದಿನ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾದ ಸಣ್ಣ ವಿಡಿಯೋ ತುಣುಕು ಹೊರಬಿದ್ದಿದೆ.

darshan
ದರ್ಶನ್

By ETV Bharat Karnataka Team

Published : Feb 16, 2024, 7:18 PM IST

ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರತಂಡಗಳಿಂದ ಸ್ಪೆಷಲ್​ ಕೊಡುಗೆಗಳು ಸಿಗುತ್ತಿವೆ. 'ಡೆವಿಲ್​​' ಈಗಾಗಲೇ ಘೋಷಣೆಯಾಗಿರೋ ಸಿನಿಮಾ. ದಚ್ಚು ಬರ್ತ್​ಡೇಗೆ 'ಡೆವಿಲ್​​' ಗ್ಲಿಂಪ್ಸ್ ಜೊತೆಗೆ ಮತ್ತೆರಡು ಸಿನಿಮಾಗಳ ಅಪ್​ಡೇಟ್ಸ್ ಹೊರಬಿದ್ದಿದೆ. ಅದರಲ್ಲೊಂದು ಚಿತ್ರದ ಸಣ್ಣ ವಿಡಿಯೋ ಅನಾವರಣಗೊಂಡಿದ್ದು, ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್​​ ಅವರಿಗೆ ಬಹಳ ವರ್ಷಗಳ ಬಳಿಕ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಮ್ಯಾಟರ್​ ಕೆಲ ತಿಂಗಳ ಹಿಂದೆಯೇ ರಿವೀಲ್ ಆಗಿತ್ತು. ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ 'ಕೆವಿಎನ್​​​ ಪ್ರೊಡಕ್ಷನ್ಸ್​​' ದರ್ಶನ್ ಹಾಗೂ ಜೋಗಿ ಪ್ರೇಮ್ ಕಾಂಬಿನೇಶನ್​ನ ಬಿಗ್​​ ಬಜೆಟ್​​​ ಚಿತ್ರ ನಿರ್ಮಿಸಲಿದೆ ಅನ್ನೋ ಸುದ್ದಿ ಸಖತ್​ ಸದ್ದು ಮಾಡಿತ್ತು. ಅಲ್ಲದೇ, ಇತ್ತೀಚೆಗಷ್ಟೇ ದರ್ಶನ್​, ಪ್ರೇಮ್, ರಕ್ಷಿತಾ, ಕೆವಿಎನ್​​​ ಪ್ರೊಡಕ್ಷನ್ಸ್​​​​ನ ಪ್ರಮುಖರು ಮತ್ತು ಕೆಜಿಎಫ್​ನ ಅಧೀರ ಸಂಜಯ್​ ದತ್​​ ಜೊತೆಗಿರುವ ಫೋಟೋ ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್ ಆಗಿ ಹೊಸ ಸಿನಿಮಾ ಮೇಲಿನ ಉತ್ಸಾಹ ಹೆಚ್ಚಿಸಿತ್ತು. ಇಂದು ಬೆಳಗ್ಗೆ ಕೂಡ ದರ್ಶನ್​​ ಅವರನ್ನೊಳಗೊಂಡ ಮೇಕಿಂಗ್ ವಿಡಿಯೋವೊಂದನ್ನು ಕೆವಿಎನ್​​​ ಪ್ರೊಡಕ್ಷನ್ಸ್ ಹಂಚಿಕೊಂಡಿತ್ತು.

ಈ ಚಿತ್ರದ ವಿಡಿಯೋವೊಂದು ಅನಾವರಣಗೊಂಡಿದೆ. ''ಹ್ಯಾಪಿ ಬರ್ತ್​​ಡೇ ಚಾಲೆಂಜಿಂಗ್​ ಸ್ಟಾರ್ ದರ್ಶನ್​'' ಶೀರ್ಷಿಕೆಯಡಿ ಹೊಸ ಸಿನಿಮಾದ ಗ್ಲಿಂಪ್ಸ್ ಹೊರಬಿದ್ದಿದೆ. ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಮತ್ತು ಕೆವಿಎನ್​​​ ಪ್ರೊಡಕ್ಷನ್ಸ್​​ ಈ ಸಿನಿಮಾ ನಿರ್ಮಾಣ ಮಾಡಲಿದೆ ಅನ್ನೋದಷ್ಟೇ ಸದ್ಯದ ಅಧಿಕೃತ ಮಾಹಿತಿ. 'ಜೈ ಶ್ರೀ ರಾಮ್'​​​ ಎನ್ನುತ್ತಾ ಗದೆ ಹಿಡಿದು ಕುತೂಹಲಕಾರಿ ನೋಟದಲ್ಲಿ ದರ್ಶನ್​ ಎಂಟ್ರಿ ಕೊಟ್ಟಿದ್ದಾರೆ. ಸಂಪೂರ್ಣ ನೋಟ ಇನ್ನಷ್ಟೇ ಬಹಿರಂಗವಾಗಬೇಕಿದೆ. 2025ರಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ ಅನ್ನೋದನ್ನೂ ವಿಡಿಯೋ ಬಹಿರಂಗಪಡಿಸಿದೆ.

ಇದನ್ನೂ ಓದಿ:ದರ್ಶನ್ ಬರ್ತ್​ಡೇ ಸಂಭ್ರಮ​ದ ಫೋಟೋಗಳು: ಮುಂದಿನ ಸಿನಿಮಾ 'ಡೆವಿಲ್‌' ಗ್ಲಿಂಪ್ಸ್‌ ರಿಲೀಸ್

ನನ್ನ ಕೊನೆ ಉಸಿರು ಇರೋವರೆಗೂ ಈ ಭೂಮಿ ಮೇಲೆ ನಿನ್ನ ಒಂದ್ ಹನಿ ರಕ್ತಾನೂ ಸೊಕೋದಕ್ಕೆ ನಾನ್​ ಬಿಡಲ್ಲ ಎಂಬ ಸಾಲುಗಳಿಂದ ಆರಂಭವಾದ ಈ ವಿಡಿಯೋದಲ್ಲಿ ಜೈ ಜೈ ಶ್ರಿರಾಮ್​​ ಎಂಬುದು ಅದ್ಭುತವಾಗಿ, ಗಾಂಭೀರ್ಯವಾಗಿ ಮೂಡಿಬಂದಿದೆ. ಧಾರ್ಮಿಕ ದೃಶ್ಯಗಳು ಕಂಡಿದ್ದು, ಜೈ ಶ್ರೀರಾಮ್​ ಎಂಬ ಡೈಲಾಗ್​ ಮೂಲಕ ವಿಡಿಯೋ ಪೂರ್ಣಗೊಂಡಿದೆ. ನಟ ಗದೆ ಹಿಡಿದು ಹೆಜ್ಜೆ ಇಟ್ಟಿರೋ ದೃಶ್ಯವಷ್ಟೇ ಇದ್ದು, ಸಿನಿಮಾದ ಅಧಿಕೃತ ಶೀರ್ಷಿಕೆ ಇನ್ನಷ್ಟೇ ಬಹಿರಂಗವಾಗಬೇಕಿದೆ. ಕೆಲ ದಿನಗಳ ಹಿಂದೆ ಬಾಲಿವುಡ್​ ಸೂಪರ್ ಸ್ಟಾರ್ ಸಂಜಯ್​ ದತ್​ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಮುಂದಿನ ದಿನಗಳಲ್ಲಿ ಚಿತ್ರದ ಸಂಪೂರ್ಣ ಮಾಹಿತಿ ಹೊರಬರಲಿದೆ.

ಇದನ್ನೂ ಓದಿ:ಅಭಿಮಾನಿಗಳೊಂದಿಗೆ ದರ್ಶನ್​​ ಜನ್ಮದಿನಾಚರಣೆ; 'ಡೆವಿಲ್'​ ಗ್ಲಿಂಪ್ಸ್ ಔಟ್, ಮುಂದಿನ ಸಿನಿಮಾಗಳಿವು

ABOUT THE AUTHOR

...view details